ಹಾವೇರಿ: ತಾಲ್ಲೂಕಿನ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಆಗಿರುವ ಪ್ರಯೋಜನಗಳ ಬಗ್ಗೆ ನಿಖರ ಮಾಹಿತಿ ನೀಡಲು ತಡವರಿಸಿದ ಹಿರಿಯ ಸಹಾಯಕ ನಿರ್ದೇಶಕ (ಪ್ರಭಾರ) ಪರಶುರಾಮ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ರುದ್ರಪ್ಪ ಲಮಾಣಿ, ‘ರೈತರ ವಿಚಾರದಲ್ಲಿ ಬೇಜವಾಬ್ದಾರಿ ವರ್ತನೆ ಸಹಿಸುವುದಿಲ್ಲ. ನಿಮಗೆ ನೋಟಿಸ್ ನೀಡಿ ಅಮಾನತುಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ‘ಸಾಮಾನ್ಯ ಸಭೆ’ಯಲ್ಲಿ ಪಾಲ್ಗೊಂಡಿದ್ದ ರುದ್ರಪ್ಪ ಲಮಾಣಿ, ಅಧಿಕಾರಿಗಳ ವರ್ತನೆಗೆ ಕಿಡಿಕಾರಿದರು.

‘ರೈತರು ಹಾಗೂ ಜನಪರವಾಗಿ ಕೆಲಸ ಮಾಡಿ. ರೈತರ ಬಳಿ ಹೋಗದೇ, ಕೇವಲ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡಬೇಡಿ’ ಎಂದು ತಾಕೀತು ಮಾಡಿದರು.

ತೋಟಗಾರಿಕೆ ಇಲಾಖೆಯ ಅಂಕಿ–ಅಂಶ ಆಲಿಸಿದ ಶಾಸಕ, ‘ಯೋಜನೆ ಲಾಭ ಪಡೆದು ತೋಟ ಮಾಡಿರುವ ಒಬ್ಬ ರೈತರ ಹೆಸರು ಹೇಳಿ. ನಾನೇ ತೋಟಕ್ಕೆ ಹೋಗಿ ಬರುತ್ತೇನೆ’ ಎಂದರು.

ಹಿರಿಯ ಸಹಾಯಕ ನಿರ್ದೇಶಕ, ‘ಪ್ರದೇಶ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ. ನರೇಗಾ ಯೋಜನೆಯಡಿ ತೆಂಗು, ಬಾಳೆ, ಪಪ್ಪಾಯಿ, ಡ್ರ್ಯಾಗನ್ ಪ್ರೂಟ್ ತೋಟಕ್ಕೆ ನೆರವು ನೀಡಲಾಗಿದೆ. ಸುಮಾರು ರೈತರು ಯೋಜನೆ ಲಾಭ ಪಡೆದುಕೊಂಡಿದ್ದಾರೆ’ ಎಂದರು.

ಗರಂ ಆದ ಶಾಸಕ, ‘ಸುಮಾರು ಎಂದರೆ ಎಷ್ಟು? ಒಂದಿಬ್ಬರು ರೈತರ ಹೆಸರು ಹೇಳಿ. ಯಾವ ಬೆಳೆ ಬೆಳೆದಿದ್ದಾರೆ ಎಂಬುದನ್ನು ತಿಳಿಸಿ‘ ಎಂದರು. ಉತ್ತರಿಸಲಾಗದೇ ಹಿರಿಯ ಸಹಾಯಕ ನಿರ್ದೇಶಕ ತಡವರಿಸಿದರು. ಇದೇ ವಿಚಾರದಲ್ಲಿ, ಕಬ್ಬೂರು ಗ್ರಾ.ಪಂ. ಕಾರ್ಯದರ್ಶಿ ಸಹ ರೈತರ ಮಾಹಿತಿ ನೀಡಲಿಲ್ಲ.

ಶಾಸಕ, ‘ನೀವು ರೈತರ ಬಳಿ ಹೋಗಿಲ್ಲ. ಬೇಜವಾಬ್ದಾರಿಯಿಂದ ಸುಳ್ಳು ಹೇಳುತ್ತಿದ್ದೀರಾ. ಸರ್ಕಾರಗಳು ರೈತರಿಗೆ ಹಲವು ಯೋಜನೆ ರೂಪಿಸಿವೆ. ನೀವು ಅದನ್ನು ರೈತರಿಗೆ ತಲುಪಿಸುತ್ತಿಲ್ಲ. ನೀವೆಲ್ಲ ಏನು ಕೆಲಸ ಮಾಡುತ್ತಿದ್ದೀರಾ. ನಿಮಗೆ ನೋಟಿಸ್ ಕೊಡಿಸುತ್ತೇನೆ. ನಾಳೆಯೇ ನನಗೆ ರೈತರ ಪಟ್ಟಿ ಸಿದ್ಧಪಡಿಸಿ ಕೊಡಿ. ನಾನೇ ತೋಟಕ್ಕೆ ಹೋಗಿ ನೋಡುತ್ತೇನೆ‘ ಎಂದು ಬಿಸಿ ಮುಟ್ಟಿಸಿದರು.

ರಾಣೆಬೆನ್ನೂರು ಪಾಲಾದ ರೇಷ್ಮೆ ಮಾರುಕಟ್ಟೆ: 2022–23ನೇ ಸಾಲಿನಲ್ಲಿ ಹಾವೇರಿ ಜಿಲ್ಲಾ ಕೇಂದ್ರಕ್ಕೆ ಮಂಜೂರಾಗಿದ್ದ ರೇಷ್ಮೆ ಮಾರುಕಟ್ಟೆ ರಾಣೆಬೆನ್ನೂರು ತಾಲ್ಲೂಕಿಗೆ ಹೋಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರುದ್ರಪ್ಪ, ರೇಷ್ಮೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಹಾವೇರಿಯಲ್ಲಿ ಜಾಗವಿಲ್ಲವೆಂದು ಸರ್ಕಾರಕ್ಕೆ ಹೇಳಿದವರು ಯಾರು ? ರೇಷ್ಮೆ ಮಾರುಕಟ್ಟೆ ಬಗ್ಗೆ ನನ್ನ ಬಳಿ ಬಂದು ಚರ್ಚೆ ಏಕೆ ಮಾಡಲಿಲ್ಲ. ನಿಮ್ಮ ಬೇಜವಾಬ್ದಾರಿಯಿಂದ ಮಾರುಕಟ್ಟೆ ರಾಣೆಬೆನ್ನೂರಿಗೆ ಹೋಗಿದೆ. ಗುದ್ದಲಿ ಪೂಜೆ ದಿನ, ರಾಣೆಬೆನ್ನೂರು ಶಾಸಕರಿಂದ ನನಗೆ ವಿಷಯ ಗೊತ್ತಾಯಿತು. ನನ್ನ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳಬೇಡಿ’ ಎಂದು ಅಧಿಕಾರಿಗಳಿಗೆ ಏರುಧ್ವನಿಯಲ್ಲಿ ಚಾಟಿ ಬೀಸಿದರು.

ಶಾಲೆ ಮಕ್ಕಳಿಗ ಶುದ್ಧ ನೀರು ನೀಡಿ: ‘ತಾಲ್ಲೂಕಿನ ಹಲವು ಶಾಲೆಗಳ ಕಟ್ಟಡಗಳು ಸೋರುತ್ತಿದ್ದು, ಇವುಗಳನ್ನು ದುರಸ್ತಿ ಮಾಡಿ. ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಸಿ. ಇದಕ್ಕೆ ಅನುದಾನ ಅಗತ್ಯವಿದ್ದರೆ, ನನಗೆ ತಿಳಿಸಿ ಮಂಜೂರು ಮಾಡಿಸುತ್ತೇನೆ’ ಎಂದು ರುದ್ರಪ್ಪ ಲಮಾಣಿ ಹೇಳಿದರು.

‘ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಿವೆ. ನಾಯಿಗಳ ಸಂತಾನ ಹರಣ ಮಾಡುವ ಹಾಗೂ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸುವ ಸಂಬಂಧ ಆರೋಗ್ಯ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯವರು ಕ್ರಮ ಕೈಗೊಳ್ಳಬೇಕು.

‘ಬಹುಗ್ರಾಮ ಕುಡಿಯುವ ನೀರು ಯೋಜನೆಗಳಲ್ಲಿ ಡಿಸೆಂಬರ್ ಅಂತ್ಯದೊಳಗೆ ಮುಗಿಸಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅಗಡಿ, ದೇವಿಹೂಸೂರು ಹಾಗೂ ಕನವಳ್ಳಿ ನೀರಿನ ಯೋಜನೆ ಸಮಸ್ಯೆ ಬಗೆಹರಿಸಿ. ಸಿಬಾರ–ಗುತ್ತಲ, ಬಸಾಪುರ–ಬಮ್ಮನಕಟ್ಟಿ ರಸ್ತೆ ಅಭಿವೃದ್ಧಿಪಡಿಸಿ. ಗುಂಡಿ ಬಿದ್ದಿರುವ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಬೇಕು. ಕೊಡಬಾಳ ಶಾಲೆ ಎದುರು ನೀರು ನಿಂತಿದ್ದು, ಗಟಾರು ನಿರ್ಮಿಸಿ ನೀರು ಹೋಗಲು ದಾರಿ ಮಾಡಿಕೊಡಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಸಮನ್ವಯತೆಯಿಂದ ಕೆಲಸ ಮಾಡಬೇಕು. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

ಆಡಳಿತಾಧಿಕಾರಿ ಸುರೇಶ ಹುಗ್ಗಿ, ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಪ್ರಸಾದ್ ಇದ್ದರು.

ಗ್ಯಾರಂಟಿ ಯೋಜನೆ ತಲುಪದ ಅರ್ಹರ ಪಟ್ಟಿ ಸಿದ್ಧಪಡಿಸಿ ಅವರಿಗೆ ಯೋಜನೆ ತಲುಪಿಸಿ. ಯಾರೊಬ್ಬರೂ ಯೋಜನೆಯಿಂದ ವಂಚಿತರಾಗಬಾರದು.
–ರುದ್ರಪ್ಪ ಲಮಾಣಿ, ಶಾಸಕ

‘ಪಡಿತರ ಚೀಟಿ ತಿದ್ದುಪಡಿ: 10 ದಿನ ಅವಕಾಶ’

‘ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡಿ ಮಾಡಿಸಲು ಆನ್‌ಲೈನ್ ಸೇವೆ ತೆರೆಯಲಾಗಿದೆ. 10 ದಿನಗಳ ಕಾಲಾವಕಾಶವಿದೆ’ ಎಂದು ತಹಶೀಲ್ದಾರ್ ಶಂಕರ್ ಹೇಳಿದರು. ಸಭೆಯಲ್ಲಿ ಮಾತನಾಡಿದ ಅವರು ‘ಪಡಿತರ ಚೀಟಿ ವಿತರಣೆಗೆ ಒತ್ತು ನೀಡಲಾಗಿದೆ. 2019ರಲ್ಲಿ ಬಾಕಿ ಉಳಿದಿದ್ದ 150 2020ರಲ್ಲಿ ಬಾಕಿ ಉಳಿದಿದ್ದ 50 2021ರಲ್ಲಿದ್ದ 100 ಹಾಗೂ 2022ರಲ್ಲಿ ಬಾಕಿ ಉಳಿದಿದ್ದ 230 ಅರ್ಜಿಗಳನ್ನು ವಿಲೇವಾರಿ ಮಾಡಿ ಹೊಸ ಪಡಿತರ ಚೀಟಿ ವಿತರಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.