ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಬಿಸಿಲಿಗೆ ಕುಕ್ಕುಟೋದ್ಯಮ ತತ್ತರ

ಕೋಳಿ ಸಾವಿನ ಜತೆಗೆ ಮೊಟ್ಟೆ ಉತ್ಪಾದನೆಯಲ್ಲೂ ಇಳಿಕೆ
Published 12 ಮೇ 2024, 3:19 IST
Last Updated 12 ಮೇ 2024, 3:19 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಏರುಮುಖವಾಗುತ್ತಿದ್ದು, ಬಿರು ಬಿಸಿಲಿಗೆ ಕೋಳಿಗಳು ಸಾಯುತ್ತಿರುವುದರ ಜೊತೆಗೆ ಮೊಟ್ಟೆಯ ಉತ್ಪಾದನೆ ಕಡಿಮೆಯಾಗಿ ಕುಕ್ಕುಟೋದ್ಯಮ ಬಿಸಿಲನ ಝಳದಿಂದ ನಷ್ಟವನ್ನು ಅನುಭಸುತ್ತಿದೆ.

ನಗರದ ಹೊರವಲಯದಲ್ಲಿ ಇರುವ ಪತ್ರಿ ಫೌಲ್ಟ್ರೀ ಫಾರಂ‌ನಲ್ಲಿ ತಾಪಮಾನ ಕಡಿಮೆ ಮಾಡಲು ಸ್ಪ್ರಿಂಕ್ಲರ್ ಮೂಲಕ ಚಾವಣೆಗೆ ನೀರುನ್ನು ಸಿಂಪಡಣೆ ಮಾಡುತ್ತಿದ್ದಾರೆ. ಪತ್ರಿ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಕೋಳಿಗಳನ್ನು ಸಾಕಾಣಿಕೆ ಮಾಡಲಾಗುತ್ತದೆ. ಈ ಬಾರಿ ಜಿಲ್ಲೆಯಾದ್ಯಂತ ಪ್ರತಿನಿತ್ಯ 39ರಿಂದ 40ರಷ್ಟು ಉಷ್ಣಾಂಶ ದಾಖಲಾಗುತ್ತಿದೆ. ದಿನೇದಿನೆ ಹೆಚ್ಚುತ್ತಿರುವ  ಉಷ್ಣಾಂಶದಿಂದಾಗಿ ನೂರಾರು ಕೋಳಿಗಳು ಫಾರಂನಲ್ಲಿ ಮರಣಿಸುತ್ತಿವೆ. ಕೋಳಿ ಸಾಕಣೆದಾರರು ಕೋಳಿ ಫಾರಂಗೆ ಹವಾನಿಯಂತ್ರಣದ ವ್ಯವಸ್ಥೆ, ಫ್ಯಾನ್ ಅಳವಡಿಕೆ ಮಾಡುತ್ತಿದ್ದಾರೆ. ಆಗಾಗ್ಗೆ ನೀರು ಸಿಂಪಡಿಸುತ್ತಾ ತಂಪು ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಮರಿಗಳು ಕುಡಿಯುವ ನೀರು ಬಿಸಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಆಹಾರ ತಿನ್ನುವುದು ಕಡಿಮೆ: ಕೋಳಿ ಫಾರಂ ಶೇಡ್‌ಗಳ ಒಳ ತಾಪಮಾನವು 39ರಿಂದ 40 ಡಿಗ್ರಿ ಸೆಲ್ಸಿಯಸ್‌ ಇದ್ದು, ಈ ತಾಪಮಾನಕ್ಕೆ ಕೋಳಿಗಳು ಆಹಾರ ಸೇವಿಸುವುದು ಕಡಿಮೆಯಾಗಿ ಮೊಟ್ಟೆ ಅಳತೆ ಮತ್ತು ಇಳುವರಿ ಎರಡೂ ಕಡಿಮೆಯಾಗಿದೆ. ಪ್ರತಿ ದಿನ ಕೋಳಿಗಳು 120 ಗ್ರಾಂನಷ್ಟು ಆಹಾರ ಸೇವೆಸಬೇಕು. ಅಧಿಕ ಉಷ್ಣಾಂಶದಿಂದ ಕೇವಲ 95 ಗ್ರಾಂ ಆಹಾರ ಮಾತ್ರವೇ ತಿನ್ನುತ್ತವೆ. ಜೊತೆಗೆ ನೀರು ಬಿಸಿಯಾಗಿರುವುದರಿಂದ ಇವನ್ನೂ ಸೇವಿಸದೆ ಆಹಾರ, ನೀರು ತ್ಯಜಿಸಿ ಕೋಳಿಗಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ವಿವಿಧ ಕಾಯಿಲೆಯಿಂದ ಮೃತಪಡುತ್ತಿವೆ. ಈ ಸಮಸ್ಯೆಗಳ ಮಧ್ಯೆ ಮೂರು ತಿಂಗಳನಿಂದ ಮೊಟ್ಟೆ ಬೆಲೆ ಇಳಿಕೆಯೂ ಫೌಲ್ಟ್ರೀ ಫಾರಂ ಮಾಲೀಕರು ನಲುಗುವಂತಾಗಿದೆ.

‘ಪ್ರತಿವರ್ಷ 35 ಡಿಗ್ರಿ ಉಷ್ಣಾಂಶ ಇರೋ‌ ಜಿಲ್ಲೆಯಲ್ಲಿ ಈಗ ಸುಮಾರು 40 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಹೀಗಾಗಿ ಕೋಳಿಯನ್ನ ಬದುಕಿಸಿಕೊಳ್ಳಲು ಹರಸಾಹಸ ಪಡುತ್ತಿದ್ದೇವೆ. ಕೋಳಿಗಳಿಗೆ ಬೆಳಗ್ಗೆ ಆಹಾರ ನೀಡುವುದು, ಫಾರಂ ಮೇಲ್ವಾವಣೆಗೆ ಜೆಟ್ ಮೂಲಕ ನೀರು ಹರಿಸಿ ತಪಾಮಾನ ಕಡಿಮೆ ಮಾಡಿ ಕೋಳಿಯ ಸಂರಕ್ಷಣೆ ಮಾಡುತ್ತಿದ್ದೇವೆ.ಆದರೂ ಸಹ ಭಾರಿ ತಾಪಕ್ಕೆ ಕೋಳಿಗಳು ಸಾವನ್ನಪ್ಪಿದ್ದು ಮೊಟ್ಟೆಯ ಉತ್ಪಾದನೆಯಲ್ಲಿ ಕಡಿಮೆಯಾಗಿದೆ’ ಎಂದು ಕೋಳಿ ಸಾಕಾಣಿಕೆ ಉದ್ಯಮಿ ಪ್ರಭು ಪತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT