ಮಂಗಳವಾರ, ನವೆಂಬರ್ 29, 2022
29 °C
ಕೆರೆ ಸಮಗ್ರ ಅಭಿವೃದ್ಧಿಗೆ ಕೋರಿಶೆಟ್ಟರ್‌ ಆಗ್ರಹ

ಹೆಗ್ಗೇರಿ ಕೆರೆಗೆ ಬಾಗಿನ ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಉತ್ತಮ ಮಳೆಯಾದ ಪರಿಣಾಮ ನಗರದ ಹೊರವಲಯದಲ್ಲಿರುವ ಹೆಗ್ಗೇರಿ ಕೆರೆಯು ಕೋಡಿಬಿದ್ದ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ತಾಲ್ಲೂಕು ಘಟಕ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕೆರೆಗೆ ಬಾಗಿನ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷರಾದ ಎಂ ಎಸ್ ಕೋರಿಶೆಟ್ಟರ್‌ ಮಾತನಾಡಿ, ನಳ ಮಹಾರಾಜ ನಿರ್ಮಿಸಿದ 262 ಎಕರೆ ವಿಸ್ತೀರ್ಣವುಳ್ಳ ಹೆಗ್ಗೇರಿ ಕೆರೆಯು ಸುಂದರ ತಾಣವಾಗಬೇಕಿತ್ತು. ಆದರೆ, ಅಭಿವೃದ್ಧಿಯಿಲ್ಲದೆ ಸೊರಗುವಂತಾಗಿದೆ. ನಮ್ಮ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ₹10 ಕೋಟಿ ಬಿಡುಗಡೆ ಮಾಡಿ, ಸಮಗ್ರ ಕೆರೆ ಅಭಿವೃದ್ಧಿಪಡಿಸಬೇಕು ಹಾಗೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿಸಬೇಕು ಎಂದು ಒತ್ತಾಯಿಸಿದರು. 

ಮಹಾಸಭಾದ ಮಹಿಳಾ ವಿಭಾಗದ ಅಧ್ಯಕ್ಷೆ ಅಶ್ವಿನಿ ಗಣೇಶ್ ಟೊಂಕದ, ಪ್ರಧಾನ ಕಾರ್ಯದರ್ಶಿ ಲತಾ ಭರತನೂರಮಠ ಬಾಗಿನ ಅರ್ಪಿಸುವ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. 

ಮುಖಂಡರಾದ ಮೃತ್ಯುಂಜಯ ಬುಕ್ಕಶೆಟ್ಟಿ, ಅಜ್ಜನಗೌಡ ಗೌಡಪ್ಪ ಗೌಡ್ರ, ತೋಟಪ್ಪ ಹಳ್ಳಿಕೇರಿ, ದಾಕ್ಷಾಯಿಣಿ ಗಾಣಿಗೇರ, ಪ್ರಭಪ್ಪ ಮರಗೂರು, ಶಿವಬಸಪ್ಪ ಟೊಂಕದ, ಶಂಭು ಚಕ್ಕಡಿ, ಅನಸೂಯಾ ಎರವಿನತಲಿ, ವೀರಣ್ಣ ಹರನಗೇರಿ, ಕಮಲಾ ಬಕ್ಕಶೆಟ್ಟಿ ಅಮೃತಮ್ಮ ಶೀಲವಂತ, ಅನ್ನಪೂರ್ಣ ಅಂಕಲಕೋಟೆ, ನೀಲಮ್ಮ ನಿಂಬರಗಿ, ವೈಶಾಲಿ ನೆಲೋಗಲ, ಜಯಲಕ್ಷ್ಮಿ ಬೆನಕಪ್ಪ, ಸವಿತಾ ಪಾಟೀಲ್, ಶಿವಬಸಮ್ಮ ಲಕ್ಕಣ್ಣವರ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು