‘ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ’
‘ತಾಲ್ಲೂಕು ಆಸ್ಪತ್ರೆ ಕಾಂಪೌಂಡ್ ಸಂಪೂರ್ಣ ಹಳೆಯದಾಗಿದ್ದು ಹೊಸದಾಗಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದೇಶ ಬಂದ ನಂತರ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತದೆ. ರಕ್ತ ಹಾಗೂ ಮೂತ್ರ ತಪಾಸಣಾ ಕೇಂದ್ರ ಕ್ಷ-ಕಿರಣ ಮತ್ತು ಔಷಧ ವಿತರಣೆ ಸೇವೆಯನ್ನು 24x7 ಮಾಡುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿದೆ’ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಹೊನ್ನಪ್ಪ ಜಿ.ಎಂ. ತಿಳಿಸಿದರು. ‘ಕ್ಯಾಂಟೀನ್ ತೆರೆಯುವ ಸಂಬಂಧ ಹಲವಾರು ಬಾರಿ ಟೆಂಡರ್ ಕರೆದರೂ ಯಾರೂ ಮುಂದೆ ಬರುತ್ತಿಲ್ಲ. ಕ್ಯಾಂಟೀನ್ ಕಟ್ಟಡ ಶವಾಗಾರದ ಮುಂದೆ ಇರುವುದೇ ಇದಕ್ಕೆ ಕಾರಣ. ಸರ್ಕಾರದ ನಿಯಮಾನುಸಾರ ಯಾರಾದರೂ ಮುಂದೆ ಬಂದರೆ ಕ್ಯಾಂಟೀನ್ ವ್ಯವಸ್ಥೆ ಆಗಲಿದೆ’ ಎಂದರು. ‘ತಜ್ಞ ವೈದ್ಯರ ಕೊರತೆ ಇದ್ದು ಸದ್ಯ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಒತ್ತಡದಲ್ಲಿದ್ದಾರೆ. ತಜ್ಞ ವೈದ್ಯರು ಮತ್ತು ತುರ್ತು ಚಿಕಿತ್ಸಾ ತಜ್ಞರನ್ನು ಸರ್ಕಾರ ಶೀಘ್ರ ನೇಮಕಾತಿ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು.