ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಶಕ್ತಿ ತುಂಬಿದ ವಿಜಯೇಂದ್ರ: ಅರುಣಕುಮಾರ ಪೂಜಾರ

Published 13 ಮಾರ್ಚ್ 2024, 15:41 IST
Last Updated 13 ಮಾರ್ಚ್ 2024, 15:41 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಲೋಕಸಭೆ ಚುನಾವಣೆಗೆ ಯಾರೇ ಪಕ್ಷದ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸುವ ಹೊಣೆ ನಮ್ಮದಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ ಚುಕ್ಕಾಣಿ ಹಿಡಿದ ನಂತರ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದು ಬಿಜೆಪಿಗೆ ಶಕ್ತಿ ತುಂಬಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.

ನಗರದ ಸ್ಟೇಶನ್‌ ರಸ್ತೆಯ ಬಿಜೆಪಿ ಕಚೇರಿ ಆವರಣದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಮಂಡಲ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾನ್ಯ ಕಾರ್ಯಕರ್ತರೂ ಉನ್ನತ ಹುದ್ದೆ ಅಲಂಕರಿಸುವ ಏಕೈಕ ಪಕ್ಷ ಬಿಜೆಪಿ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಾಗಿದ್ದು ಮನೆ ಮನೆಗಳಲ್ಲಿ ಬಿಜೆಪಿ ಬೇರೂರಬೇಕಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಬೇಕು’ ಎಂದರು.

‘ಪಕ್ಷದ ಸಂಘಟನೆಗೆ ಬಲ ನೀಡುವಲ್ಲಿ ಮೋರ್ಚಾಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲ ಸಮುದಾಯಗಳ ಜತೆಗೆ ಸಂಪರ್ಕ ಸಾಧಿಸಿ ಪಕ್ಷಕ್ಕೆ ಮತ್ತಷ್ಟು ಬಲ ನೀಡಬೇಕಿದೆ’ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶಪ್ಪ ಗೂಳಣ್ಣನವರ, ಸುಭಾಸ ಶಿರಗೇರಿ, ವಿಜಯಕುಮಾರ ನಲವಾಗಲ ಹಾಗೂ ನಗರ ಘಟಕದ ಅಧ್ಯಕ್ಷ ರಮೇಶ ಗುತ್ತಲ ಹಾಗೂ ಅಮೋಘ ಬದಾಮಿ, ಶ್ರೀನಿವಾಸ ಜಡಮಲಿ ಹಾಗೂ ಅವರ ತಂಡದವರು ಹಾಗೂ ವಿವಿಧ ಮೋರ್ಚಾದ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಕೇಲಗಾರ, ಬಿ.ಎನ್‌. ಕಲ್ಲೇಶ, ಸಂತೋಷಕುಮಾರ ಪಾಟೀಲ, ಚೋಳಪ್ಪ ಕಸವಾಳ, ಎಸ್‌.ಎಸ್‌.ರಾಮಲಿಂಗಣ್ಣನವರ, ರಮೇಶ ನಾಯಕ, ಮಂಜುನಾಥ ಓಲೇಕಾರ, ಬಸವರಾಜ ಚಳಗೇರಿ, ಚೋಳಪ್ಪ ಕಸವಾಳ, ಶಿವಕುಮಾರ ಮುದ್ದಪ್ಪಳವರ, ಅಮೋಘ ಬದಾಮಿ, ದೀಪಕ ಹರಪನಹಳ್ಳಿ, ಭಾರತಿ ಜಂಬಿಗಿ, ಭಾರತಿ ಅಳವಂಡಿ, ತ್ರಿವೇಣಿ ಪವಾರ, ಪ್ರಕಾಶ ಪೂಜಾರ, ಸುಜಾತಾ ಆರಾಧ್ಯಮಠ, ಮಲ್ಲಿಕಾರ್ಜುನ ಅಂಗಡಿ, ಶಿವಕುಮಾರ ಹಾರಕನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT