ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಾವರಿ ಯೋಜನೆ ನೀಡಿದ ಬಿಜೆಪಿ: ಬೊಮ್ಮಾಯಿ

Published 6 ಏಪ್ರಿಲ್ 2024, 15:45 IST
Last Updated 6 ಏಪ್ರಿಲ್ 2024, 15:45 IST
ಅಕ್ಷರ ಗಾತ್ರ

ತಿಳವಳ್ಳಿ: ತಿಳವಳ್ಳಿ ಭಾಗದಲ್ಲಿ ಅನೇಕ ಏತ ನೀರಾವರಿಗಳಾಗಿವೆ. ತಿಳವಳ್ಳಿ ಏತ ನೀರಾವರಿ, ಬಾಳಂಬೀಡ ಏತ ನೀರಾವರಿಗಳು ಉದಾಸಿಯವರ ಕೊಡುಗೆಯಾಗಿದೆ. ನಾನು ನೀರಾವರಿ ಮಂತ್ರಿ ಆದಾಗ ಬಸಾಪೂರ ಏತ ನೀರಾವರಿ ಅರ್ದಕ್ಕೆ ನಿಂತಿತ್ತು. ಅದಕ್ಕೆ ಹಣ ಬಿಡುಗಡೆ ಮಾಡಿ ನೀರಾವರಿ ಕೆಲಸವನ್ನು ಪೂರ್ಣಗೊಳಿಸಿದೆ. ಆದರೆ ನಿರ್ವಹಣೆಗೆ ಈಗಿನ ಸರ್ಕಾರ ಹಣ ಬಿಡುಗಡೆ ಮಾಡದೆ 5600 ಎಕರೆಗೆ ನೀರಾವರಿ ಸೌಲಭ್ಯ ಒದಗಿಸುವ ಕೆಲಸ ಮಾಡಲಿಲ್ಲ’  ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿಯ ಸುಬ್ರಮಣ್ಯ ಮೂಡಿ ಅವರ ಮನೆಯ ಆವರಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ರೈತ ವಿರೋಧಿ ಸರ್ಕಾರವಾಗಿದ್ದು, ಹಿಂದೆ ಬಿಜಿಪಿ ಸರ್ಕಾರ ನೀಡುತ್ತಿದ್ದ ₹4 ಸಾವಿರ ಸಹಾಯ ಧನವನ್ನು ಬಂದ್ ಮಾಡಿದೆ.  ರೈತ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ, ರೈತರಿಗೆ ಯಶಸ್ವಿನಿ ಯೋಜನೆಗಳನ್ನು ನಿಲ್ಲಿಸಲಾಗಿದೆ. ಜೀವ ಉಳಿಸಿದ ನರೇಂದ್ರ ಮೊದಿಯವರ ಉಪಕಾರ ತೀರಿಸಲು ಮೋದಿಯವರಿಗೆ ಮತ ಹಾಕಬೇಕು’ ಎಂದು ಮನವಿ ಮಾಡಿಕೊಂಡರು.

ಮಾಜಿ ಶಾಸಕ ಮನೋಹರ ತಹಸೀಲ್ದಾರ ಮಾತನಾಡಿ, ‘ದೇಶದಲ್ಲಿ ಕಾಂಗ್ರೆಸ್‌ಗೆ ನೆಲೆ ಇಲ್ಲದಂತಾಗಿದೆ. ದೇಶದ ಚುಕ್ಕಾಣಿ ಹಿಡಿಯಲು 10 ಪಕ್ಷಗಳ ಜೊತೆ ಇಂಡಿಯಾ ಮೈತ್ರಿ ಮಾಡಿಕೊಂಡಿತು. ಆದರೆ ಈಗ ಈ ಮೈತ್ರಿ ಕೂಟದಿಂದ ಒಂದೊಂದೆ ಪಕ್ಷಗಳು ಕಾಲುಕೀಳುತ್ತಿವೆ’ ಎಂದರು.

‘ಕಾಂಗ್ರೆಸ್‌ನವರಿಗೆ ದೇಶದಲ್ಲಿ ಲೊಕಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳೇ ಸಿಗುತ್ತಿಲ್ಲ. ಚುನಾವಣೆಗೂ ಮೊದಲೇ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂದು ಘೋಷಿಸಲಿ’ ಎಂದು ಕಾಂಗ್ರೆಸ್ ನವರಿಗೆ ಸವಾಲು ಹಾಕಿದರು.

ಮಾಜಿ ಶಾಸಕರಾದ ಶಿವಾರಾಜ ಸಜ್ಜನರ, ಮಹೇಶ ಕಮಡೊಳ್ಳಿ, ರಾಜಶೇಖರ ಕಟ್ಟೇಗೌಡ್ರ, ಶಿವಲಿಂಗಪ್ಪ ತಲ್ಲೂರ, ರಾಘವೇಂದ್ರ ತಹಸೀಲ್ದಾರ, ಗಣೇಶಪ್ಪ ಕೋಡಿಹಳ್ಳಿ, ಬಸವರಾಜ ಹಾದಿಮನಿ, ಹನುಮಂತಪ್ಪ ಶಿರಾಳಕೊಪ್ಪ, ಭೋಜರಾಜ ಕರೂದಿ, ಕುಮಾರ ಲಕ್ಮೋಜಿ, ರಮೇಶ ಉಪ್ಪಾರ, ದಯಾನಂದ ಹಾವೇರಿ, ಗುತ್ತೇಪ್ಪ ಬಾರ್ಕಿ, ಮಾರುತಿ ಈಳಿಗೇರ, ಸೋಮನಗೌಡ ಪಾಟೀಲ, ನಾಗನಗೌಡ ಪಾಟೀಲ, ರಾಮನಗೌಡ ಪಾಟೀಲ, ಚಂದ್ರಪ್ಪ ಹರಿಜನ, ಮಾಲತೇಶ ಸೊಪ್ಪಿನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT