ಹಾವೇರಿ: ‘ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿ ಹಾಗೂ ಇತರೆ ಹಣಕಾಸು ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ವಿಶ್ರಾಂತ ನ್ಯಾಯಮೂರ್ತಿ ಉಮೇಶ್ ಅಡಿಗ ನೇತೃತ್ವದಲ್ಲಿ ಸಮಿತಿ ರಚಿಸಿ ರಾಜ್ಯಪಾಲರು ಆದೇಶ ಹೊರಡಿಸಿರುವುದು ಸ್ವಾಗತಾರ್ಹ’ ಎಂದು ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಶಿವಸೋಮಪ್ಪ ನಿಟ್ಟೂರು ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ಬಗ್ಗೆ ನಿರಂತರವಾಗಿ ಹೋರಾಟ ಮಾಡಿದ್ದರ ಫಲವಾಗಿ, ಈಗ ತನಿಖೆ ಮಾಡಲು ಆದೇಶ ಹೊರಬಿದ್ದಿದೆ. ಸಮಿತಿಯು ಎಲ್ಲ ಅಂಶಗಳನ್ನು ಪರಿಗಣಿಸಿ, ಅಕ್ರಮಗಳನ್ನು ಪುರಾವೆ ಸಮೇತ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೋಡಿಕೊಳ್ಳಬೇಕು’ ಎಂದರು.

‘ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯದಲ್ಲಿಯೇ ಅಕ್ರಮ ನೇಮಕಾತಿ ನಡೆದಿರುವುದು ನೋವಿನ ಸಂಗತಿ. ಸಹಾಯಕ ಕುಲಸಚಿವ ಶಹಜಾನ್ ಮುದಕವಿ ಅವರು ಪದವಿಗೆ ಸಮಾನವಲ್ಲದ ಅಂಕಪಟ್ಟಿ ನೀಡಿ ಹುದ್ದೆ ಪಡೆದಿರುವುದು ಅಕ್ರಮಕ್ಕೆ ಸಾಕ್ಷಿ. ಈ ಅಕ್ರಮದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಧರಣಿ ನಡೆಸಿದ್ದೇವೆ. ಈಗ ತನಿಖೆ ಆರಂಭವಾಗುತ್ತಿದ್ದು, ನ್ಯಾಯ ಸಿಗುವ ಭರವಸೆ ಮೂಡಿದೆ’ ಎಂದರು.

‘2023ರ ಮೇನಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿಯೇ ನೇಮಕಾತಿ ನಡೆಸಲಾಗಿದೆ. ನೇಮಕಾತಿಗೆ ತಾತ್ಕಾಲಿಕ ತಡೆ ನೀಡಿದರೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಪೂರ್ಣ ಪ್ರಮಾಣದಲ್ಲಿ ಸದಸ್ಯರು ಇಲ್ಲದಿದ್ದರೂ 2023ರ ಮೇ 29ರಂದು ಅಕ್ರಮವಾಗಿ ಸಿಂಡಿಕೇಟ್ ಸಭೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ, ಪ್ರಧಾನ ಕಾರ್ಯದರ್ಶಿ ಪರವಾಗಿ ಸಭೆಯಲ್ಲಿ ಬೇರೆಯವರ ಕಡೆಯಿಂದ ಸಹಿ ಮಾಡಿಸಲಾಗಿದೆ’ ಎಂದು ಶಿವಸೋಮಪ್ಪ ದೂರಿದರು.

‘ಸಿ.ಟಿ. ಗುರುಪ್ರಸಾದ್ ಅವರು ಕುಲಸಚಿವರಾಗಿದ್ದ ಸಂದರ್ಭದಲ್ಲಿ, ತಮ್ಮ ಶಿಷ್ಯ ಬಳಗವನ್ನೇ ನೇಮಕಾತಿ ಮಾಡಿಕೊಂಡಿರುವ ಆರೋಪವಿದೆ. ಕುಲಪತಿಯವರು ತಮ್ಮ ಸಹೋದರನ ಮಗನನ್ನು ನೇಮಕಾತಿ ಮಾಡಿಕೊಂಡಿರುವ ದೂರಿದೆ. ಈ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಯಬೇಕು’ ಎಂದು ಅವರು ಆಗ್ರಹಿಸಿದರು.

ಉಪಾಧ್ಯಕ್ಷ ನಾಗರಾಜ್ ಎಸ್. ಮಾತನಾಡಿ, ‘ಜಾನಪದ ವಿವಿಯ ಅಕ್ರಮದ ಬಗ್ಗೆ ದಾಖಲೆ ಸಹಿತವಾಗಿ ಹೋರಾಟ ಮಾಡುತ್ತಿದ್ದೇವೆ. ತನಿಖೆಗೆ ಆದೇಶ ಹೊರಡಿಸಿರುವ ರಾಜ್ಯಪಾಲರಿಗೆ ಧನ್ಯವಾದ. ತನಿಖೆಯು ಪ್ರಾಮಾಣಿಕವಾಗಿ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಬಸವರಾಜ ದುಗಾಣಿ ಪತ್ರಿಕಾಗೋಷ್ಠಿಯಲ್ಲಿದ್ದರು.

ವಜಾಕ್ಕೆ ಆಗ್ರಹ: ವಿಚಾರಣೆ ಫೆ. 19ರಂದು

‘ಸಹಾಯಕ ಕುಲಸಚಿವ ಶಹಜಾನ್ ಮುದಕವಿ ಅವರ ನೇಮಕಾತಿಯನ್ನು ಪರಿಶೀಲಿಸಿ ಅವರನ್ನು ಕೆಲಸದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಂಡಿಕೇಟ್ ಸದಸ್ಯರು ಮನವಿ ಸಲ್ಲಿಸಿದ್ದಾರೆ.

ಇದರ ವಿಚಾರಣೆ ನಡೆಸುವ ಹೊಣೆಯನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ವಹಿಸಲಾಗಿದೆ. ಸಿಂಡಿಕೇಟ್ ಸದಸ್ಯರಾದ ಬಿ.ಎಂ. ಪುಟ್ಟಯ್ಯ ಗೊರವಾಲೆ ಚಂದ್ರಶೇಖರ್ ಜ್ಯೋತಿಲಕ್ಷ್ಮಿ ಡಿ.ಪಿ. ಸಹನ ಪಿಂಜಾರ್ ರಾಮಪ್ಪ ಲಮಾಣಿ ಹಾಗೂ ಮೋಹನ ಕುಮಾರ ಅವರಿಗೆ ಫೆ. 13ರಂದು ತಿಳಿವಳಿಕೆ ಪತ್ರ ಕಳುಹಿಸಿರುವ ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ. ಅವರು ‘ವಿಶ್ವವಿದ್ಯಾಲಯದಲ್ಲಿ ಫೆ. 19ರಂದು ವಿಚಾರಣೆ ನಡೆಸಲಾಗುವುದು. ಅಗತ್ಯ ದಾಖಲೆಗಳ ಸಮೇತ ತಪ್ಪದೇ ಹಾಜರಾಗಿ’ ಎಂದು ಕೋರಿದ್ದಾರೆ.

‘ಷಹಜಾನ್ಸಾಬ್ ಮುದಕವಿ ಅವರು 2023ರಲ್ಲಿ ನಕಲಿ ದಾಖಲೆಗಳನ್ನು ಕೊಟ್ಟು ಸಹಾಯಕ ಕುಲಸಚಿವ ಹುದ್ದೆ ಪಡೆದಿದ್ದಾರೆ. ಈ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಮಾಡಿದ್ದರೂ ಕುಲಪತಿಯವರು ಆ ವಿಷಯವನ್ನು ನಡವಳಿಯಲ್ಲಿ ಸೇರಿಸಿಲ್ಲ. ಆದ್ದರಿಂದ ನೇಮಕಾತಿ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಸಿಂಡಿಕೇಟ್ ಸದಸ್ಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.