ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿಕ ದೀಪೋತ್ಸವಕ್ಕೆ ಚಾಲನೆ

Last Updated 4 ಡಿಸೆಂಬರ್ 2020, 14:18 IST
ಅಕ್ಷರ ಗಾತ್ರ

ಹಾವೇರಿ: ಕೊರೊನಾ ಪಿಡುಗು ಜನರ ಜೀವನ ತಲ್ಲಣಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿವೆ.ಬದುಕಿನ ಅಂಧಕಾರ ಕಳೆಯುವ ಈ ದಿನ ಎಲ್ಲರ ಬಾಳಲ್ಲಿ ಜ್ಯೋತಿಯನ್ನು ಬೆಳಗುವಂತಾಗಲಿ ಎಂದು ಸಣ್ಣ ಹಾಲಸ್ವಾಮಿಗಳು ಹೇಳಿದರು.

ಹಾವೇರಿ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಗುರುವಾರ ನಡೆದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ತಿಕೋತ್ಸವ ಎಂಬುದು ಮನುಷ್ಯ ತನ್ನ ಬದುಕಿನಲ್ಲಿ ಬರುವ ಅಂಧಕಾರವನ್ನು ತೊರೆದು ಹಾಕಿ ಅಜ್ಞಾನವೆಂಬ ದುಃಖವನ್ನು ಜ್ಞಾನವೆಂಬ ಹಣತೆಯ ಮೂಲಕ ಹೊಡೆದೊಡಿಸುವ ಸಂಕೇತವಾಗಿದೆ. ದೀಪವೆಂಬ ಜ್ಯೋತಿ ಬೆಳಗಿಸಿ ತನ್ನ ಜೀವನವನ್ನು ಯಶಸ್ವಿಯಾಗಿ ನಡೆಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಷಣ್ಮುಖ ಬ್ಯಾಹಳ್ಳಿಮಠ, ರುದ್ರಯ್ಯ, ಮೃತ್ಯುಂಜಯ ಮುಷ್ಟಿ, ಜಯಪ್ಪ ಪೂಜಾರ, ಕನಕಪ್ಪ ಆರ್ ಡಿ, ಬಸವರಾಜ ರಿತ್ತಿ, ಶಿವನಗೌಡ ಎಲ್, ಈಶಪ್ಪ ಕೋಡಿಹಳ್ಳಿ, ಶಿವಪ್ಪ ಕೊಳುರ, ಹಾಲಪ್ಪ ಬಾಲಕ್ಕನವರ, ರಮೇಶ್ ಭಂಗಿ, ಪರಮೇಶ ಕೊಳೂರ, ಹಾಲಪ್ಪ ಕೊಳೂರ ಸೇರಿದಂತೆ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT