ಗುರುವಾರ , ಜೂನ್ 24, 2021
25 °C
₹1 ಸಾವಿರ ಕೋಟಿ ಬಿಡುಗಡೆ: ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿಕೆ

ಕಿಸಾನ್‌ ಸಮ್ಮಾನ್‌: 50 ಲಕ್ಷ ರೈತರಿಗೆ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ‘ಕಿಸಾನ್‌ ಸಮ್ಮಾನ್’‌ ಯೋಜನೆಯಡಿ ₹1 ಸಾವಿರ ಕೋಟಿಯನ್ನು ಬಿಡುಗಡೆ ಮಾಡಿದ್ದು, 50 ಲಕ್ಷ ರೈತರು ಪ್ರಯೋಜನ ಪಡೆಯಲಿದ್ದಾರೆ. ಪ್ರತಿಯೊಬ್ಬ ರೈತರ ಖಾತೆಗೆ ಹಣ ಹಾಕುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. 

ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಶನಿವಾರ ಬೆಳೆ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳೆ ಸಮೀಕ್ಷೆಯಲ್ಲಿ ಕೆಲವು ವ್ಯತ್ಯಾಸವಾದ ಕಾರಣ 2019–20ನೇ ಸಾಲಿನಲ್ಲಿ ‘ಬೆಳೆ ವಿಮೆ’ ಹಣ ಕೆಲವು ರೈತರಿಗೆ ಸಿಕ್ಕಿರಲಿಲ್ಲ. ಈಗ ಎಲ್ಲ ಸಮಸ್ಯೆಗಳು ನಿವಾರಣೆಯಾಗಿದ್ದು, ಮಂಗಳವಾರದಿಂದ ‘ಬೆಳೆ ವಿಮೆ’ಯ ಸಂಪೂರ್ಣ ಹಣ ರೈತರ ಖಾತೆಗೆ ನೇರವಾಗಿ ಹೋಗಲಿದೆ ಎಂದು ತಿಳಿಸಿದರು. 

2015–16ನೇ ಸಾಲಿನಲ್ಲಿ ಮೋಟೆಬೆನ್ನೂರು ಮತ್ತು ಬ್ಯಾಡಗಿಯಲ್ಲಿ ಕಾರಣಾಂತರದಿಂದ ಒಟ್ಟು ₹7.18 ಕೋಟಿ ‘ಬೆಳೆ ವಿಮೆ’ ರೈತರಿಗೆ ತಲುಪದೇ ಬಾಕಿ ಉಳಿದಿತ್ತು. ಸಚಿವನಾದ ಮೇಲೆ ರೈತಸಂಘದ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಂಡೆ. ಹಣಕಾಸು ಇಲಾಖೆಯಿಂದ ಶೀಘ್ರದಲ್ಲೇ ಹಣ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ. ₹1.92 ಲಕ್ಷಕ್ಕೆ ಸಂಬಂಧಿಸಿದಂತೆ ಕೃಷಿ ವಿಮಾ‌ ಕಂಪನಿಯೊಂದು ಪ್ರಕರಣ ದಾಖಲಿಸಿತ್ತು. ಈಗ ಪ್ರಕರಣವನ್ನು ಕಂಪನಿ ಹಿಂತೆಗೆದುಕೊಂಡಿದೆ. ನ್ಯಾಯಾಲಯದ‌ ಆದೇಶ ಬಂದ ತಕ್ಷಣ ಬೆಳೆ ವಿಮೆ ಹಣ ರೈತರ ಕೈ ಸೇರಲಿದೆ ಎಂದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.