ಮಂಗಳವಾರ, ಜುಲೈ 27, 2021
26 °C

‘ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆಗೆ ಸಕಲ ಸಿದ್ಧತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣ ಸಮಾರಂಭದ ನೇರಪ್ರಸಾರ ವೀಕ್ಷಿಸಲು, ಜಿಲ್ಲೆಯಲ್ಲಿ ಸುಮಾರು 100 ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ ತಿಳಿಸಿದರು. 

ಹಾವೇರಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ ಕಚೇರಿ, ಮೈಲಾರ ಮಹದೇವಪ್ಪ ಸರ್ಕಲ್‌, ಸುಭಾಷ್‌ ಸರ್ಕಲ್‌, ಇಜಾರಿಲಕಮಾಪುರದ ದುಂಡಿ ಬಸವೇಶ್ವರ ಸಭಾಭವನ ಮತ್ತು ನಾಗೇಂದ್ರಮಟ್ಟಿಯ ಸಮುದಾಯ ಭವನ ಸೇರಿದಂತೆ ಒಟ್ಟು ಐದು ಕಡೆ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು. 

223 ಗ್ರಾಮ ಪಂಚಾಯ್ತಿ, ಎರಡು ನಗರಸಭೆ, 5 ಪುರಸಭೆ ಮತ್ತು ಮೂರು ಪಟ್ಟಣ ಪಂಚಾಯ್ತಿಗಳಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಅಂತರ ಕಾಯ್ದುಕೊಂಡು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನೇರಪ್ರಸಾರ ವೀಕ್ಷಿಸಲು ಅನುಕೂಲ ಕಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು. ನಂತರ ಕಾರ್ಯಕ್ರಮ ವೀಕ್ಷಿಸಿದವರು ಕೆಪಿಸಿಸಿಯಿಂದ ಕೊಟ್ಟಿರುವ ಮೊಬೈಲ್‌ ನಂಬರ್‌ಗೆ ಮಿಸ್ಡ್‌ ಕಾಲ್‌ ಕೊಡಲಿದ್ದಾರೆ. ಸುಮಾರು ಹತ್ತು ಸಾವಿರ ಮಂದಿ ಕಾರ್ಯಕ್ರಮ ವೀಕ್ಷಿಸಲಿದ್ದಾರೆ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.