ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

Last Updated 11 ಆಗಸ್ಟ್ 2020, 16:32 IST
ಅಕ್ಷರ ಗಾತ್ರ

ಹಾವೇರಿ: ನಗರದ ರಾಜೇಂದ್ರನಗರದ ಕಾವ್ಯಾ ಕುಲಕರ್ಣಿ ಮತ್ತು ಚಂದ್ರಶೇಖರ ದಂಪತಿ ಆರು ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದು, ಮಂಗಳವಾರ ತಮ್ಮ ಮನೆಯಲ್ಲಿ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಿದರು.

ದುಬೈನಲ್ಲಿ ನೆಲೆಸಿರುವ ಕನ್ನಡಿಗರನ್ನು ತಮ್ಮ ಮನೆಗೆ ಕರೆಸಿ, ಅವರಿಗೆ ಸಿಹಿ ಖಾದ್ಯಗಳನ್ನು ಮಾಡಿ, ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದರು. ಕೃಷ್ಣನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.

‘ಪ್ರತಿ ವರ್ಷ ಗೌರಿ–ಗಣೇಶ, ವರಮಹಾಲಕ್ಷ್ಮಿ, ದೀಪಾವಳಿ... ಸೇರಿದಂತೆ ಪ್ರತಿಯೊಂದು ಹಬ್ಬಗಳನ್ನು ಸಂಪ್ರದಾಯಬದ್ಧವಾಗಿ ಆಚರಿಸುತ್ತೇವೆ. ಯಾವುದೇ ದೇಶದಲ್ಲಿದ್ದರೂ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮರೆಯಬಾರದು. ಮಹಿಳೆಯರಿಗೆ ಅರಿಸಿನ–ಕುಂಕುಮ ಕೊಡುವುದು, ಫಲ–ತಾಂಬೂಲ ನೀಡುವುದನ್ನು ರೂಢಿಸಿಕೊಂಡಿದ್ದೇವೆ. ಹೊರದೇಶದಲ್ಲಿರುವ ಕನ್ನಡಿಗರೆಲ್ಲ ಒಟ್ಟಿಗೆ ಸೇರಿ ಹಬ್ಬ ಆಚರಿಸುವುದು ತುಂಬಾ ಸಂತೋಷ ಕೊಡುತ್ತದೆ’ ಎಂದು ಕಾವ್ಯಾ ಕುಲಕರ್ಣಿ ಅವರು ‘ಪ್ರಜಾವಾಣಿ’ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT