ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಸ್ತು, ಶ್ರದ್ಧೆ, ಗುರುಗಳಲ್ಲಿ ನಂಬಿಕೆಯಿಂದ ಒಲಿಯಲಿದೆ ವಿದ್ಯೆ’

Published 25 ಮೇ 2024, 14:13 IST
Last Updated 25 ಮೇ 2024, 14:13 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಶಿಸ್ತು, ಶ್ರದ್ಧೆ, ಗುರುಗಳಲ್ಲಿ ನಂಬಿಕೆ ಇದ್ದರೆ ಮಾತ್ರ ವಿದ್ಯೆ ಒಲಿಯುತ್ತದೆ. ವಿದ್ಯಾರ್ಥಿಯ ಜೀವನವನ್ನು ಬಂಗಾರ ಮಯವಾಗಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿ ಇದೆ’ ಎಂದು ದಾವಣಗೆರೆ ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ದೊಡ್ಡಪೇಟೆಯ ಪಟ್ಟಣಶೆಟ್ಟಿ ಅವರ ಓಣಿಯ ಆವರಗೊಳ್ಳ ಗುರುಕಾರುಣ್ಯ ಮಂದಿರದಲ್ಲಿ ಶುಕ್ರವಾರ ನಡೆದ ದಾವಣಗೆರೆ ಮಿರಾಕಲ್‌ ಎಜುಕೇಶನ್‌ ಸಂಸ್ಥೆಯ ಡಿಬಿಎಸ್‌ ಮೆಡಿಕಲ್‌ ಅಕಾಡೆಮಿಯಿಂದ ಎರಡು ತಿಂಗಳ ಕಾಲ ಏರ್ಪಡಿಸಿ ಬೇಸಿಗೆ ಶಿಬಿರದ ಎಸ್‌ಎಸ್‌ಎಲ್‌ಸಿ ಪಠ್ಯಕ್ರಮದ ಪೂರ್ವ ಬಾವಿ ಬೋಧನೆಯ ಕಾರ್ಯಾಗಾರದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜೆಡಿಎಸ್‌ ಮುಖಂಡ ಮಂಜುನಾಥ ಗೌಡಶಿವಣ್ಣನವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಜಿ.ಬಿ.ಮಾಸಣಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಇಸಿಒ ಸುನೀತಾ ಡಿ.ಬಿ, ದೇವರಗುಡ್ಡ ಇಂದಿರಾಗಾಂಧಿ ವಸತಿ ಶಾಲೆಯ ಮಂಜುನಾಥ ಬುಕ್ಕಶೆಟ್ಟರ ಮತ್ತು ವಿಜ್ಞಾನ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭು ಎರೇಶಿಮಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ನಂತರ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹೇಳಿದರು.

ಪ್ರಾಚಾರ್ಯ ರುದ್ರಗೌಡ ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬನಶಂಕರಿ ಶಿಕ್ಷಣ ಸಮಿತಿ ಅಧ್ಯಕ್ಷ ವಿರೇಶ ಬಣಕಾರ, ಪ್ರಕೃತಿ ಕಲ್ಲಪ್ಪಗೌಡ್ರ, ಸವಿತಾ ಲಮಾಣಿ, ವೀಣಾ ಲಮಾಣಿ, ಶಿವಾನಂದ ಬುಳ್ಳಮ್ಮನವರ, ಮಲ್ಲಿಕಾರ್ಜುನ ಹೊರಕೇರಿ, ಪ್ರಕಾಶ, ಶಕುಂತಲಾ, ಮಾಲತೇಶ ಗರಡೀಮನಿ, ಶಿವಪುತ್ರಪ್ಪ ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT