ಡಿಕೆಶಿಗೂ ಲಿಂಗಾಯತ ಧರ್ಮಕ್ಕೂ ಸಂಬಂಧವೇ ಇಲ್ಲ!: ಬಸವರಾಜ ಹೊರಟ್ಟಿ

ಭಾನುವಾರ, ಏಪ್ರಿಲ್ 21, 2019
26 °C

ಡಿಕೆಶಿಗೂ ಲಿಂಗಾಯತ ಧರ್ಮಕ್ಕೂ ಸಂಬಂಧವೇ ಇಲ್ಲ!: ಬಸವರಾಜ ಹೊರಟ್ಟಿ

Published:
Updated:

ಹಾವೇರಿ: ‘ಸಚಿವ ಡಿ.ಕೆ. ಶಿವಕುಮಾರ್‌ಗೂ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ, ಕ್ಷಮೆ ಕೇಳುವ ಅವಶ್ಯಕತೆಯೇ ಇರಲಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

‘ಅವರು (ಡಿಕೆಶಿ) ಹೋರಾಟದಲ್ಲಿ ಭಾಗವಹಿಸಿಲ್ಲ. ಕಾಂಗ್ರೆಸ್‌ ಅಧ್ಯಕ್ಷರು ಅಥವಾ ಮುಖ್ಯಮಂತ್ರಿಯೂ ಅಲ್ಲ. ಅನಗತ್ಯವಾಗಿ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಇದು ಜನರ ಮನಸ್ಸಿನಲ್ಲಿ ಅನ್ಯತಾ ಭಾವನೆ ಮೂಡಿಸುತ್ತದೆ’ ಎಂದು ಮಂಗಳವಾರ ಇಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಲಿಂಗಾಯತ’ ಸಮುದಾಯದ ಬಡವರು, ವಿದ್ಯಾರ್ಥಿಗಳು ಸಾಂವಿಧಾನಿಕ ಸೌಲಭ್ಯ ಪಡೆದು ಅಭಿವೃದ್ಧಿಯಾಗಲಿ ಎಂದು ನಾವು ಹೋರಾಟದಲ್ಲಿ ಪಾಲ್ಗೊಂಡೆವು. ಯಾವುದೇ ಶೋಷಿತರು, ಬಡವರಿಗೆ ಸಾಂವಿಧಾನಿಕ ಸೌಲಭ್ಯ ಕಲ್ಪಿಸಲು ಹೋರಾಡಿದರೆ, ‘ಧರ್ಮ ಒಡೆಯುವ ಕಾರ್ಯ’ ಎಂದು ಆರೋಪಿಸುತ್ತಾರೆ. ಹಾಗಿದ್ದರೆ, ಬಡವರು, ಶೋಷಿತರಿಗಾಗಿ ಶ್ರಮಿಸುವುದು ‘ಧರ್ಮ’ ಅಲ್ಲವೇ? ಎಂದು ಪ್ರಶ್ನಿಸಿದರು.

‘ಹೋರಾಟಕ್ಕೆ ರಾಜಕೀಯ ಲೇಪ ನೀಡುತ್ತಿರುವ ಕಾರಣ ನಾವೆಲ್ಲ ರಾಜಕಾರಣಿಗಳು ಹೊರಗೆ ನಿಂತಿದ್ದೇವೆ. ಸಮಿತಿಯವರು ಕಾನೂನಾತ್ಮಕ ಹೋರಾಟ ಮುಂದುವರಿಸುತ್ತಾರೆ’ ಎಂದ ಅವರು, ‘ಲಿಂಗಾಯತ’ ಹೋರಾಟಕ್ಕೂ, ಚುನಾವಣೆ ಅಥವಾ ಯಾವುದೇ ಪಕ್ಷಗಳಿಗೂ ಸಂಬಂಧ ಇಲ್ಲ. ಹೋರಾಟಗಾರರ ನಿರ್ಣಯದಲ್ಲಿ ನಾವು ಕೈ ಹಾಕುವುದಿಲ್ಲ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !