ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಕಾಲಕ್ಕೆ ಸಾಲ ಮರುಪಾವತಿಗೆ ಮನವಿ

Published : 26 ಸೆಪ್ಟೆಂಬರ್ 2024, 14:39 IST
Last Updated : 26 ಸೆಪ್ಟೆಂಬರ್ 2024, 14:39 IST
ಫಾಲೋ ಮಾಡಿ
Comments

ಬ್ಯಾಡಗಿ : ಪಟ್ಟಣದ ವೀರಶೈವ ಲಿಂಗಾಯತ ಪಂಚಮಸಾಲಿ ಪತ್ತಿನ ಸೌಹಾರ್ದ ಸಹಕಾರಿ ಕಳೆದ ಹಣಕಾಸು ವರ್ಷದಲ್ಲಿ ₹ 10.73 ಲಕ್ಷ ಲಾಭ ಗಳಿಸಿದೆ ಎಂದು ಅಧ್ಯಕ್ಷ ಜಯದೇವ ಶಿರೂರ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘₹ 8.95 ಲಕ್ಷ ಷೇರು ಬಂಡವಾಳದೊಂದಿಗೆ ಆರಂಭವಾದ ಸಹಕಾರ ಸಂಸ್ಥೆ ಅತಿ ಕಡಿಮೆ ಅವಧಿಯಲ್ಲಿ ₹ 1.02 ಕೋಟಿ ಠೇವಣಿ ಸಂಗ್ರಹಿಸಿದೆ. ₹ 77.24 ಲಕ್ಷ ಸಾಲ ನೀಡಲಾಗಿದೆ. ಪಡೆದ ಸಾಲವನ್ನು ನಿಗದಿತ ಸಮಯಕ್ಕೆ ಮರುಪಾವತಿ ಮಾಡಿದರೆ ಮಾತ್ರ ಸಹಕಾರ ಸಂಸ್ಥೆ ಪ್ರಗತಿ ಹೊಂದಲಿದೆ’ ಎಂದರು.

ಉಪಾಧ್ಯಕ್ಷ ಚನ್ನವೀರಪ್ಪ ಬಳ್ಳಾರಿ, ನಿರ್ದೇಶಕರಾದ ವೀರಭದ್ರಪ್ಪ ಗೊಡಚಿ, ಬಸವರಾಜ ಕಡೇಕೊಪ್ಪ, ವೀರಣ್ಣ ಅಂಗಡಕಿ, ತಿರಕಪ್ಪ ಮರಬಸಣ್ಣನವರ, ಉಮೇಶ ಚೌಧರಿ, ಹನುಮಂತಪ್ಪ ಕುರಡಣ್ಣನವರ, ಶಿವಪ್ಪ ಹರಮಗಟ್ಟಿ, ಶೋಭಾ ಹೊಸಮನಿ, ಪಾರ್ವತೆಮ್ಮ ಗಡಾದ ಇದ್ದರು. ಮುಖ್ಯ ಕಾರ್ಯನಿರ್ವಾಹಕ ಲೋಹಿತ್ ಸೊಲಭಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT