ಭಾನುವಾರ, ಜೂನ್ 20, 2021
29 °C

ಲಾಕ್‌ಡೌನ್‌ ತೆರವು: ಗರಿಗೆದರಿದ ವ್ಯಾಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಭಾನುವಾರದ ಲಾಕ್‌ಡೌನ್‌’ ಅನ್ನು ರಾಜ್ಯ ಸರ್ಕಾರ ತೆರವುಗೊಳಿಸಿದ ಕಾರಣ, ನಗರದಲ್ಲಿ ವ್ಯಾಪಾರ ವಹಿವಾಟು ಗರಿಗೆದರಿತು.

ಬಟ್ಟೆ, ಎಲೆಕ್ಟ್ರಾನಿಕ್, ಪ್ಲಾಸ್ಟಿಕ್‌, ಕಿರಾಣಿ, ಸ್ಟೇಷನರಿ, ಬೇಕರಿ ಮಳಿಗೆಗಳು ಹಾಗೂ ಹೋಟೆಲ್‌ಗಳನ್ನು ತೆರೆಯಲಾಗಿತ್ತು. ಜನರು ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು. ರಸ್ತೆಗಳು ಮತ್ತು ವೃತ್ತಗಳಲ್ಲಿ ವಾಹನ ಸಂಚಾರ ಅಧಿಕವಾಗಿತ್ತು. ಗ್ರಾಮೀಣ ಪ್ರದೇಶದ ಜನರು ಕೃಷಿ ಸಲಕರಣೆ ಮತ್ತು ಕಿರಾಣಿ ವಸ್ತುಗಳನ್ನು ಖರೀದಿಸಿದರು.

ಭಾನುವಾರ ರಜಾದಿನವಾದ ಕಾರಣ ಸರ್ಕಾರಿ ಕಚೇರಿ, ಬ್ಯಾಂಕ್, ಪತ್ತಿನ ಸಹಕಾರ ಸಂಘಗಳು ಬಾಗಿಲು ಮುಚ್ಚಿದ್ದವು. ತರಕಾರಿ, ಹಾಲು, ಔಷಧ, ಆಸ್ಪತ್ರೆಗಳನ್ನು ಎಂದಿನಂತೆಯೇ ತೆರೆಯಲಾಗಿತ್ತು. ಹೊರ ಜಿಲ್ಲೆಗಳಿಂದ ಬಂದ ಸರಕು ಸಾಗಣೆ ವಾಹನಗಳಿಂದ ಕಾರ್ಮಿಕರು ಗೋದಾಮುಗಳಿಗೆ ಸಾಮಗ್ರಿಯನ್ನು ಇಳಿಸಿಕೊಂಡರು.   

ರಾಖಿ ವ್ಯಾಪಾರ: ಸೋಮವಾರ ನಡೆಯಲಿರುವ ರಕ್ಷಾಬಂಧನ ಹಬ್ಬದ ಅಂಗವಾಗಿ ಮಕ್ಕಳು, ಯುವತಿಯರು, ಮಹಿಳೆಯರು ರಾಖಿಗಳನ್ನು ಖರೀದಿಸುತ್ತಿದ್ದ ದೃಶ್ಯ ನಗರದ ಎಂ.ಜಿ.ರಸ್ತೆಯಲ್ಲಿ ಕಂಡು ಬಂದಿತು.

‘ಕಳೆದ ವರ್ಷ ₹50 ಸಾವಿರ ರಾಖಿಗಳ ವ್ಯಾಪಾರವಾಗಿತ್ತು. ಈ ಬಾರಿ ಒಂದು ವಾರದಿಂದ ಬರೀ ₹15 ಸಾವಿರ ವ್ಯಾಪಾರವಾಗಿದೆ. ಶಾಲಾ–ಕಾಲೇಜು ರಜೆ ಇರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಮತ್ತು ಯುವತಿಯರು ಈ ಬಾರಿ ರಾಖಿ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ಲಾಕ್‌ಡೌನ್‌ನಲ್ಲಿ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ದೆವು. ಈಗ ನಿರೀಕ್ಷಿತ ವ್ಯಾಪಾರವಾಗುತ್ತಿಲ್ಲ’ ಎಂದು ಬೀದಿಬದಿ ವ್ಯಾಪಾರಿ ಶಿವಲಿಂಗನ ಗೌಡ ಪಾಟೀಲ ಸಮಸ್ಯೆ ತೋಡಿಕೊಂಡರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು