ರಾಣೆಬೆನ್ನೂರು: ತಾಲ್ಲೂಕಿನ ಕುಪ್ಪೇಲೂರು ಗ್ರಾಮದಲ್ಲಿ ಮೆಕ್ಕೆಜೋಳ ಖರೀದಿ, ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಆಗ್ರಹಿಸಿ ಗುರುವಾರ ಮೆಕ್ಕೆಜೋಳ ಸಾಗಿಸುತ್ತಿದ್ದ ಲಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.

ನಂತರ ಹಲಗೇರಿ ಗ್ರಾಮೀಣ ಪೊಲೀಸ್ ಠಾಣೆ ಎಎಸ್ಐ ಕೆ.ಎಂ ಮಕಾನದಾರ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಕುಪ್ಪೇಲೂರು ಗ್ರಾಮದಲ್ಲಿ ಮೆಕ್ಕೆಜೋಳ ಖರೀದಿ ಮಾಡಿ ಸ್ಥಳದಲ್ಲೇ ರೈತರಿಗೆ ಹಣ ಪಾವತಿಸುತ್ತಿದ್ದ ದಾವಣಗೆರೆ ಮೂಲದ ವ್ಯಾಪಾರಸ್ಥರು ಮತ್ತು ಹಮಾಲರು ಹಾಗೂ ಸ್ಥಳೀಯ ಏಜೆಂಟರಿಂದ ತೂಕದಲ್ಲಿ ಮೋಸ ಮಾಡಿದ್ದು ರೈತರಿಗೆ ಗೊತ್ತಾಗಿದೆ. ಪ್ರತಿ ಕ್ವಿಂಟಲ್ ಮೆಕ್ಕಜೋಳದಲ್ಲಿ 15-20 ಕೆಜಿ ಕಡಿಮೆ ತೂಕ ತೋರಿಸಿ, ರೈತರಗಿ ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಸ್ಥಳದಲ್ಲೇ ಹಣ ಪಾವತಿಸುತ್ತೇವೆ. ದಲಾಲಿ, ಹಮಾಲಿ ಮುರಿಯುವುದಿಲ್ಲ ಎಂದು ಹೇಳಿ ರೈತರನ್ನು ನಂಬಿಸಿ ವಂಚಿಸುವ ದೊಡ್ಡ ಗ್ಯಾಂಗ್ ಇದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ಮೋಸ ಮಾಡಿದ ವ್ಯಾಪಾರಸ್ಥರು, ಏಜೆಂಟರು, ಹಮಾಲರ ಮೇಲೆ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಕೊಡಿಸಬೇಕು’ ಎಂದರು.

ಕಳೆದ ವರ್ಷವೂ ಇದೇ ರೀತಿ ಮೆಕ್ಕೆಜೋಳವನ್ನು ಇದೇ ಗ್ರಾಮದಲ್ಲಿ ಖರೀದಿ ಮಾಡಲಾಗಿತ್ತು. ಆದರೆ ಮೋಸ ಗೊತ್ತಾಗಿರಲಿಲ್ಲ. ತೂಕದಲ್ಲಿ ಮೋಸ ಮಾಡುತ್ತಿರುವ ವಿಷಯ ತಿಳಿದು ಎಲ್ಲಾ ರೈತರು ಘಟನಾ ಸ್ಥಳಕ್ಕೆ ಬಂದಾಗ ಏಜೆಂಟರು ಮತ್ತು ಹಮಾಲರು ಮೆಕ್ಕೆಜೋಳ ಹೇರಿದ ಲಾರಿ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಈ ವರ್ಷ ಕುಪ್ಪೇಲೂರು ಗ್ರಾಮದ ಒಂದರಿಂದಲೇ ಇದೇ ವರ್ಷ 10ಕ್ಕೂ ಹೆಚ್ಚು ಲೋಡ್ ಮೆಕ್ಕೆಜೋಳವನ್ನು ಖರೀದಿಸಿ ದಾವಣೆಗೆರೆಗೆ ಸಾಗಿಸಿದ್ದಾರೆ. ಈ ರೀತಿ ಮೋಸ ಮಾಡುವ ಏಜೆಂಟರ್, ಹಮಾಲರನ್ನು ಪೊಲೀಸರು ಪತ್ತೆ ಮಾಡಿ ರೈತರಿಗೆ ಹಣವನ್ನು ಮರಳಿ ಕೊಡಿಸಬೇಕು. ಇಲ್ಲದಿದ್ದಲ್ಲಿ ಜ.2ರಂದು ಕುಪ್ಪೇಲೂರು ಗ್ರಾಮದ ಹತ್ತಿರ ಗದಗ-ಹೊನ್ನಾಳಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶಂಕ್ರಪ್ಪ ಮೆಣಸಿನಹಾಳ ಪಾಲಾಕ್ಷಪ್ಪ ಕಡೇಮನಿ, ಹನುಮಂತಪ್ಪ ಸಂಕಣ್ಣನವರ, ಅಶೋಕ ಮಣಕೂರ, ಯಲ್ಲಪ್ಪ ಬಾನುವಳ್ಳಿ, ಮಾಂತೇಶ ನ್ಯಾಮತಿ, ಲಚ್ಚಪ್ಪ ದಾಸರ, ಅಶೋಕಪ್ಪ ಜಿಗಳಿ, ಮಂಜಪ್ಪ ಅಳಲಗೇರಿ, ಜಗದೀಶ ಪಟ್ಟರಡ್ಡಿ, ಬಸವರಾಜ ನ್ಯಾಮತಿ, ವೆಂಕಟೇಶ ಗೋಡಿಹಾಳ, ನೂರ ಅಹ್ಮದ ದೊಡ್ಮನಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.