ಬುಧವಾರ, ಜುಲೈ 28, 2021
29 °C

ಮದುವೆ ನಂಟು: 32 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ಮಾರುತಿನಗರದ ಮೌನೇಶ್ವರ ಕಲ್ಯಾಣ ಮಂಟಪದಲ್ಲಿ ಜೂನ್‌ 29ರಂದು ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 32 ಮಂದಿಗೆ ಸೋಂಕು ತಗುಲಿದ್ದು, ಆತಂಕ ಹೆಚ್ಚಿಸಿದೆ. 

ವರನ ತಂದೆ 55 ವರ್ಷದ ವ್ಯಕ್ತಿಗೆ ಜ್ವರ ಬಂದ ಕಾರಣ ಚಿಕಿತ್ಸೆಗೆಂದು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದಾಗ ಅವರಿಗೆ ಪಾಸಿಟಿವ್‌ ಇರುವುದು ದೃಢವಾಗಿತ್ತು. ನಂತರ ಜುಲೈ 7ರಂದು ಅವರು ಮೃತಪಟ್ಟಿದ್ದರು. ನಾಲ್ಕು ದಿನದ ನಂತರ, ಸೋಂಕು ತಗುಲಿದ್ದ ವರನ ತಾಯಿ ಕೂಡಾ ಮೃತಪಟ್ಟಿದ್ದಾರೆ. 

ವರನ ತಂದೆಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಪ್ರಾಥಮಿಕ ಸಂಪರ್ಕದಲ್ಲಿದ್ದ ಅವರ ಸಂಬಂಧಿಕರಾದ 38 ಮಂದಿಯನ್ನು ಅಂತರವಳ್ಳಿ ರಸ್ತೆಯ ಸರ್ಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಇವರಲ್ಲಿ ಶುಕ್ರವಾರ 32 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನೂ 6 ಮಂದಿಯ ವರದಿ ಬರುವುದು ಬಾಕಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು