ಜಂಗಮ ಶಿವಸ್ವರೂಪಿ. ಸಮಾಜದ ಕೊಳೆ ಹಾಕಿಸಿಕೊಳ್ಳಲು ನಮಗೆ ಜೋಳಿಗೆ ನೀಡಿದ್ದಾನೆ. ಕೆಟ್ಟದನ್ನು ಹೊಡೆದೋಡಿಸಲು ದಂಡವನ್ನು ಶಿವ ನಮಗೆ ನೀಡಿದ್ದಾನೆ
ಎಂ.ಎಂ.ಹಿರೇಮ ಕಾಂಗ್ರೆಸ್ ಮುಖಂಡ
‘ಆಂಜನೇಯ ವಿರೋಧ ಸರಿಯಲ್ಲ’
‘2017ರಲ್ಲಿ ಎಚ್.ಆಂಜನೇಯ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಸಂದರ್ಭದಲ್ಲಿ ಜಂಗಮ ಸಮಾಜದ ಚೇತನ ಹಿರೇಮಠ ಎಂಬ ವಿದ್ಯಾರ್ಥಿಗೆ ಬೇಡ ಜಂಗಮ ಪ್ರಮಾಣಪತ್ರ ನೀಡಿ ವಿದೇಶದಲ್ಲಿ ಶಿಕ್ಷಣಕ್ಕೆ ₹48 ಲಕ್ಷ ಶಿಷ್ಯವೇತನ ನೀಡಿದ್ದರು. ಈಗ ಅದೇ ಆಂಜನೇಯ ಅವರು ಯಾವ ಮಾನದಂಡದ ಆಧಾರದ ಮೇಲೆ ಬೇಡ ಜಂಗಮರನ್ನು ಎಸ್‌ಸಿ ಪಟ್ಟಿಗೆ ಸೇರಿಸುತ್ತಿರಿ ಎಂದು ವಿರೋಧ ವ್ಯಕ್ತಪಡಿಸಿದ್ದಲ್ಲದೆ ಬೇಡ ಜಂಗಮರ ವಿರುದ್ಧ ಹೋರಾಟ ಮಾಡುತ್ತಿರುವುದು’ ಏಕೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ ಪ್ರಶ್ನಿಸಿದರು. ‘ನಾವು ಬೇಡ ಜಂಗಮರು ಅಲ್ಲ ಎಂದು ಮಾಜಿ ಸಚಿವರು ಸಾಬೀತು ಮಾಡಲಿ’ ಎಂದು ಸವಾಲು ಹಾಕಿದರು. ‘ನಮ್ಮ ಸಮಾಜ ಎದುರು ಹಾಕಿಕೊಂಡರೆ ಏನಾಗುತ್ತದೆ’ ಎಂದು ನೋಡಿದ್ದೀರಿ ಎಂದು ಎಚ್ಚರಿಕೆ ನೀಡಿದರು.