ಹಾವೇರಿ: ಜಿಲ್ಲೆಯಲ್ಲಿ ನಾಗರಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಜನರು ಸಜ್ಜಾಗಿದ್ದು, ಶನಿವಾರ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಜನರು, ಹಬ್ಬದ ವಸ್ತುಗಳನ್ನು ಖರೀದಿಸಿದರು.

ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಜಿಲ್ಲೆಯಾದ್ಯಂತ ಆಚರಿಸಲಾಗುತ್ತದೆ. ಹಬ್ಬಕ್ಕೆ ಅಗತ್ಯವಿರುವ ನಾಗರಹಾವಿನ ಮಣ್ಣಿನ ಮೂರ್ತಿಗಳು ಮಾರುಕಟ್ಟೆಗೆ ಬಂದಿದ್ದು, ಅವುಗಳನ್ನು ಜನರು ಖರೀದಿಸಿದರು. ರೊಟ್ಟಿ ಪಂಚಮಿ ಮೂಲಕ ಹಬ್ಬದ ಆಚರಣೆ ಶುರುವಾಗಲಿದ್ದು, ನಂತರ ಎರಡು ದಿನ ಹಬ್ಬದ ಸಂಭ್ರಮ ಇರಲಿದೆ.

ಭಾನುವಾರ ರೊಟ್ಟಿ ಪಂಚಮಿ ಆಚರಿಸಲಾಗುತ್ತದೆ. ಹಬ್ಬದ ಮೊದಲ ದಿನವಾದ ಸೋಮವಾರ ನಾಗಚತುರ್ಥಿಯಂದು ಮನೆಯಲ್ಲಿ ನಾಗರಹಾವಿನ ಮೂರ್ತಿಗೆ ಹಾಲೆರೆಯುವ ಸಂಪ್ರದಾಯವಿದೆ. ಎರಡನೇ ದಿನವಾದ ಮಂಗಳವಾರ ಹುತ್ತಕ್ಕೆ ಹಾಲೆರೆಯುವ ಹಾಗೂ ಹೊಳೆ ಗಂಗಮ್ಮನ ಪೂಜೆ ಇದೆ. ಜನರು, ಹೊಂಡ–ಹೊಳೆ–ಕೆರೆ ಹಾಗೂ ಇತರ ನೀರಿನ ಮೂಲಗಳ ಬಳಿ ಅಥವಾ ಹುತ್ತದ ಬಳಿ ಹೋಗಿ ಹಾಲೆರೆಯುವ ಪದ್ಧತಿ ಇದೆ. ನಂತರ, ಕೆರೆಕಟಂಬ್ಲಿ ಹಬ್ಬ ಮತ್ತು ವರ್ಷ ತೊಡಕು ಹಬ್ಬದ ಆಚರಣೆಗಳು ನಿರಂತರವಾಗಿ ನಡೆಯಲಿವೆ.

ನಾಗರಪಂಚಮಿಯನ್ನು ಹೆಣ್ಣು ಮಕ್ಕಳ ಹಬ್ಬವೆಂದು ಕರೆಯಲಾಗುತ್ತದೆ. ಹೀಗಾಗಿ, ಕುಟುಂಬ ಸಮೇತ ಹಬ್ಬವನ್ನು ಆಚರಿಸಲು ಸಜ್ಜಾಗಿರುವ ಮಹಿಳೆಯರು ಮಾರುಕಟ್ಟೆಗೆ ಹೋಗಿ ಹೊಸ ಬಟ್ಟೆಗಳನ್ನು ಖರೀದಿಸಿದರು. ಹಬ್ಬದ ವಿಶೇಷತೆಯಾದ ಉಂಡಿಗಳನ್ನು ತಯಾರಿಸಲು ಅಗತ್ಯವಿರುವ ಸಾಮಗ್ರಿಗಳನ್ನು ಕೊಂಡುಕೊಂಡರು.

ತರಹೇವಾರಿ ಉಂಡಿಗಳು: ನಾಗರ ಪಂಚಮಿಯ ವಿಶೇಷ ಖಾದ್ಯವಾದ ಉಂಡಿ ತಯಾರಿಯಲ್ಲಿ ಜನರು ನಿರತರಾಗಿದ್ದಾರೆ. ಹಬ್ಬದ ಉಂಡಿ ಕಟ್ಟಲು ಅಗತ್ಯವಿರುವ ವಸ್ತುಗಳನ್ನು ಮಾರುಕಟ್ಟೆಗಳಲ್ಲಿ ಖರೀದಿಸಿದರು. ಶೇಂಗಾ, ರವೆ, ಬೂಂದಿಕಾಳು, ಒಣ ಕೊಬ್ಬರಿ, ಎಳ್ಳು, ಪುಟಾಣಿ, ಕಡಲೆಹಿಟ್ಟಿನ ತರಹೇವಾರಿ ಉಂಡಿಗಳು ಹಬ್ಬದ ವಿಶೇಷವಾಗಿವೆ.

ಗ್ರಾಮೀಣ ಭಾಗದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಹಬ್ಬ ಆಚರಿಸಲಾಗುತ್ತದೆ. ನಿಂಬೆ ಹಣ್ಣು ಎಸೆಯುವುದು, ಅರ್ಧ ಜೋಕಾಲಿ, ಭಾರ ಎತ್ತುವುದು ಹಾಗೂ ಇತರ ಗ್ರಾಮೀಣ ಕ್ರೀಡೆಗಳಲ್ಲಿ ಜನರು ಭಾಗವಹಿಸುತ್ತಾರೆ. ಹಬ್ಬದಂದು ಹಲವು ಕಡೆಗಳಲ್ಲಿ ಜೋಕಾಲಿ ಕಟ್ಟುವ ಪದ್ಧತಿ ಇದೆ. ಮನೆ, ಮರಗಳಲ್ಲಿ ಜೋಕಾಲಿ ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.