ಹಾವೇರಿ: ಇಲ್ಲಿಯ ಶಿವಾಜಿ ನಗರದ ಸ್ವಧಾರಾ ಮಹಿಳಾ ವಸತಿ ಕೇಂದ್ರದಲ್ಲಿರುವ ಸಂತ್ರಸ್ತೆಯೊಬ್ಬರಗಂಡು ಮಗುವಿಗೆ ಮಂಗಳವಾರ ನಾಮಕರಣ ಕಾರ್ಯಕ್ರಮ ನಡೆಯಿತು.

ಇಡಾರಿ ಸೇವಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಅವರು ‘ಭೂಷಣ’ ಎಂದು ಮಗುವಿಗೆ ನಾಮಕರಣ ಮಾಡಿ ಸಮಾಜಕ್ಕೆ ಭೂಷಣನಾಗಿ ಬೆಳೆಯಲಿ ಎಂದು ಹಾರೈಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ ಮಾತನಾಡಿ, ಯಾವುದೇ ಸಂದರ್ಭದಲ್ಲೂ ಮಹಿಳೆಯೆರು ಆತ್ಮ ವಿಶ್ವಾಸವನ್ನು ಕಳೆದುಕೊಳ್ಳದೆ, ಎದುರಾದ ಸವಾಲನ್ನು ಧೈರ್ಯವಾಗಿ ಎದುರಿಸಿ ಬದುಕಬೇಕು. ಜಿಲ್ಲಾ ಆಡಳಿತ ಎಲ್ಲ ರೀತಿಯಿಂದಲೂ ಸಹಾಯ ಹಸ್ತ ಚಾಚುತ್ತದೆ ಎಂದರು.

ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ವೈ. ಶೆಟ್ಟಪ್ಪನವರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ಇದ್ದರು. ಇಡಾರಿ ಸೇವಾ ಸಂಸ್ಥೆಯ ಅಧ್ಯಕ್ಷೆ ಪರಿಮಳಾ ಜೈನ್ ಸ್ವಾಗತಿಸಿದರು. ಗಿರಿಜಾ ದೈವಜ್ಞ ಕಾರ್ಯಕ್ರಮ ನಡೆಸಿದರು. ಶೈಲಾ ಎ.ಎನ್. ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.