ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಹಾವೇರಿ | ಅಧಿಕಾರಿಗಳ ನಿರ್ಲಕ್ಷ್ಯ: ಕಮರುತ್ತಿದೆ ‘ಹೈಟೆಕ್ ರಂಗಮಂದಿರ’ ಕನಸು

Published : 18 ನವೆಂಬರ್ 2024, 6:05 IST
Last Updated : 18 ನವೆಂಬರ್ 2024, 6:05 IST
ಫಾಲೋ ಮಾಡಿ
Comments
ಹಾವೇರಿ ಗೂಗಿಕಟ್ಟಿ ಬಳಿ ಹೈಟೆಕ್ ರಂಗಮಂದಿರ ಆವರಣದಲ್ಲಿರುವ ಸುಲಭ ಶೌಚಾಲಯ ಪಾಳು ಬಿದ್ದಿರುವುದು
ಹಾವೇರಿ ಗೂಗಿಕಟ್ಟಿ ಬಳಿ ಹೈಟೆಕ್ ರಂಗಮಂದಿರ ಆವರಣದಲ್ಲಿರುವ ಸುಲಭ ಶೌಚಾಲಯ ಪಾಳು ಬಿದ್ದಿರುವುದು
ಹಾವೇರಿ ಹೈಟೆಕ್ ರಂಗಮಂದಿರದ ನೆಲಮಾಳಿಗೆಯ ಪಾರ್ಕಿಂಗ್ ಸ್ಥಳದಲ್ಲಿ ನೀರು ತುಂಬಿಕೊಂಡು ಪಾಚಿ ಕಟ್ಟಿರುವುದು
ಹಾವೇರಿ ಹೈಟೆಕ್ ರಂಗಮಂದಿರದ ನೆಲಮಾಳಿಗೆಯ ಪಾರ್ಕಿಂಗ್ ಸ್ಥಳದಲ್ಲಿ ನೀರು ತುಂಬಿಕೊಂಡು ಪಾಚಿ ಕಟ್ಟಿರುವುದು
20 ಗುಂಟೆ ಜಾಗದಲ್ಲಿ ನಿರ್ಮಾಣ ಗೋದಾಮು ಮಾಡಿಕೊಂಡ ನಗರಸಭೆ ಕೆರೆಯಂತಾದ ಪಾರ್ಕಿಂಗ್ ಜಾಗ
ರಂಗಮಂದಿರ ನಿರ್ವಹಣೆಗೆ ಟೆಂಡರ್ ಕರೆಯಲಾಗಿದ್ದು ಒಬ್ಬರು ಮಾತ್ರ ಭಾಗವಹಿಸಿದ್ದಾರೆ. ಟೆಂಡರ್ ಬಗ್ಗೆ ಮುಂಬರುವ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು
ಶಶಿಕಲಾ ರಾಮು ಮಾಳಗಿ ನಗರಸಭೆ ಅಧ್ಯಕ್ಷೆ
ರಂಗಮಂದಿರವನ್ನು ಜನರ ಬಳಕೆಗೆ ಮುಕ್ತಗೊಳಿಸಬೇಕು. ಉಸ್ತುವಾರಿ ಸಮಿತಿಯೊಂದನ್ನು ರಚಿಸಿ ನಿರ್ವಹಣೆ ಜವಾಬ್ದಾರಿ ವಹಿಸಬೇಕು. ಸಂಘ–ಸಂಸ್ಥೆಗಳು ಹಾಗೂ ಇತರರಿಗೆ ಕಾರ್ಯಕ್ರಮ ಆಯೋಜಿಸಲು ರಂಗಮಂದಿರ ನೀಡಬೇಕು
ಲಿಂಗಯ್ಯ ಬಿ. ಹಿರೇಮಠ ಜಿಲ್ಲಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು
ರಂಗಮಂದಿರ ಆರಂಭಿಸಿದರೆ ಜಯಂತಿಗಳು ಸೇರಿದಂತೆ ಸರ್ಕಾರದ ಕಾರ್ಯಕ್ರಮ ನಡೆಸಲು ಅನುಕೂಲವಾಗುತ್ತದೆ. ರಂಗಮಂದಿರ ತೆರೆಯುವಂತೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಕೋರಲಾಗಿದೆ
ಆರ್‌.ಬಿ. ಚಿನ್ನಿಕಟ್ಟಿ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತ ಇಲಾಖೆ
ಸಾಹಿತ್ಯಿಕ ಹಾಗೂ ರಂಗಭೂಮಿ ಚಟುವಟಿಕೆ ನಡೆಸುವ ಉದ್ದೇಶದಿಂದ ನಿರ್ಮಿಸಿರುವ ಹೈಟೆಕ್ ರಂಗಮಂದಿರ ಪಾಳು ಬಿದ್ದಿರುವುದು ದುರಂತದ ಸಂಗತಿ. ತ್ವರಿತವಾಗಿ ರಂಗಮಂದಿರದ ಬಾಗಿಲು ತೆರೆದು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು
ಸಿದ್ದರಾಜು ಕಲಕೋಟಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಕೆರೆಯಂತದಾದ ಪಾರ್ಕಿಂಗ್ ಜಾಗ
ರಂಗಮಂದಿರದ ನೆಲ ಮಾಳಿಗೆಯಲ್ಲಿರುವ ಪಾರ್ಕಿಂಗ್ ಜಾಗದಲ್ಲಿ ನೀರು ತುಂಬಿಕೊಂಡಿದ್ದು ಕೆರೆಯಂತಾಗಿದೆ. ಇದೇ ನೀರಿನಲ್ಲಿ ಪಾಚಿ ಕಟ್ಟಿಕೊಂಡು ದುರ್ವಾಸನೆ ಬರುತ್ತಿದೆ. ಇದೇ ನೀರಿನ ಬಳಿ ಕೆಲವರು ಮಲ ವಿಸರ್ಜನೆ ಮಾಡುತ್ತಿದ್ದು ಇದರಿಂದ ಸ್ಥಳೀಯರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಕೆಲವರು ರಂಗಮಂದಿರ ಬಳಿ ಕುಳಿತು ಮದ್ಯದ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಈ ರಂಗಮಂದಿರ ಅನೈತಿಕ ಚಟುವಟಿಕೆ ತಾಣವಾಗಿಯೂ ಮಾರ್ಪಟ್ಟಿದೆ.
‘ಮೂರನೇ ಬಾರಿ ಟೆಂಡರ್‌ ಪ್ರಕ್ರಿಯೆ’
‘2021ರಂದು ಉದ್ಘಾಟನೆಗೊಂಡ ಹೈಟೆಕ್ ರಂಗಮಂದಿರವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಸಾಕಷ್ಟು ಬಾರಿ ಪ್ರಯತ್ನಿಸಲಾಗಿದೆ. ಎರಡು ಬಾರಿ ಟೆಂಡರ್ ಕರೆದರೂ ಯಾರೊಬ್ಬರೂ ಭಾಗವಹಿಸಿರಲಿಲ್ಲ. ಈಗ ಮೂರನೇ ಬಾರಿ ಟೆಂಡರ್‌ ಕರೆಯಲಾಗಿದ್ದು ಪ್ರಕ್ರಿಯೆ ನಡೆಯುತ್ತಿದೆ’ ಎಂದು ನಗರಸಭೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಸಾಹಿತ್ಯಿಕ ರಂಗಭೂಮಿ ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ಬಗೆಯ ಸಭೆ–ಸಮಾರಂಭಗಳನ್ನು ನಡೆಸಲು ರಂಗಮಂದಿರವನ್ನು ನಿರ್ಮಿಸಲಾಗಿದೆ. ನಿಗದಿತ ಉದ್ದೇಶಕ್ಕೆ ರಂಗಮಂದಿರ ಬಳಕೆಯಾಗಬೇಕೆಂಬ ಕಾಳಜಿ ಇದೆ’ ಎಂದು ಹೇಳಿದರು. ‘ಮೂರನೇ ಬಾರಿಯ ಟೆಂಡರ್‌ ಪ್ರಕ್ರಿಯೆಯಲ್ಲಿ ಒಬ್ಬರು ಭಾಗವಹಿಸಿದ್ದಾರೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಇದು ಮುಗಿದ ನಂತರ ಸಾಮಾನ್ಯ ಸಭೆ ನಡೆಸಿ ಟೆಂಡರ್‌ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT