ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಂಡಶಿ | ವೈದ್ಯರಿಲ್ಲದ ಪಶು ಆಸ್ಪತ್ರೆ, ಬಸ್‌ ಇಲ್ಲದ ಗ್ರಾಮ

ಪುಟ್ಟಪ್ಪ ಲಮಾಣಿ
Published 20 ಡಿಸೆಂಬರ್ 2023, 4:42 IST
Last Updated 20 ಡಿಸೆಂಬರ್ 2023, 4:42 IST
ಅಕ್ಷರ ಗಾತ್ರ

ಡಸ(ದುಂಡಶಿ): ಗ್ರಾಮೀಣ ಪ್ರದೇಶದಲ್ಲಿ ಜನ ಸಾಮಾನ್ಯರಿಗೆ ಮೂಲ ಸೌಕರ್ಯ ಸಿಗದೆ ಅನಾರೋಗ್ಯ ಮತ್ತು ಸರಿಯಾದ ಬಸ್ ಸೌಲಭ್ಯ ಹಾಗೂ ದನ, ಕರುಗಳನ್ನು ರಕ್ಷಿಸಿಕೊಳ್ಳಲು ರೈತರು ಪರಿತಪ್ಪಿಸುತ್ತಿರುವುದು ಹೀಗೆ ಸಾಲುಸಾಲು ಸಮಸ್ಯೆಗಳಿಂದ ದುಂಡಶಿ ಹೋಬಳಿಯ ಗ್ರಾಮಗಳು ಬಳಲುತ್ತಿವೆ.

ದುಂಡಶಿ ಹೋಬಳಿ ಗ್ರಾಮದ ರೈತರು ಜಮೀನುಗಳಿಗೆ ಹೋಗಲು ಸರಿಯಾದ ದಾರಿಗಳಿಲ್ಲದೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ದುಂಡಶಿ ತಾಂಡಾ ಹಾಗೂ ಕುನ್ನುರು ಗ್ರಾಮದಿಂದ ಅಯ್ಯನ ಕೆರೆಯ ರೈತರ ಹೊಲಗಳಿಗೆ ಹೋಗುವ ದಾರಿಯೂ ಮಳೆಗಾಲದಲ್ಲಿ ಕೆಸರಿನಿಂದ ಆವರಿಸುವುದರಿಂದ ರೈತರು ಸಂಚರಿಸಲು ಕಷ್ಟ ಅನುಭವಿಸುವಂತಾಗಿದೆ ಎಂದು ಸಾದೇವ ಬಿರೊಳ್ಳಿ ಆರೋಪಿಸಿದ್ದಾರೆ.

ಹಲವು ಗ್ರಾಮಗಳಿಗಿಲ್ಲ ಬಸ್ ಸೌಕರ್ಯ

ಶಿಗ್ಗಾವಿ ತಾಲ್ಲೂಕಿನ ದುಂಡಶಿ ಹೋಬಳಿಯ ಕಮಲಾನಗರ, ಮಮದಾಪುರ, ಶ್ಯಾಡಂಬಿ, ಅರಟಾಳ, ಬಸವನಕೊಪ್ಪ, ನೀರಲಗುಡ್ಡ, ಜೊಂಡಲಗಟ್ಟ ಗ್ರಾಮದ ಜನರು ಬಸ್ ಸೌಕರ್ಯ ಕಾಣದೆ ನಿತ್ಯ ಐದಾರು ಕಿ.ಮೀ ಶಾಲಾ ಮಕ್ಕಳು, ಅನಾರೋಗ್ಯ ಪೀಡಿತ ರೋಗಿಗಳು ನಡೆದುಕೊಂಡು ಸಂಚರಿಸಬೇಕಾಗಿದ್ದು, ಶಾಲಾ ಮಕ್ಕಳು ನಿತ್ಯ ಅನುಭವಿಸುವ ತೊಂದರೆಯನ್ನು ಅಧಿಕಾರಿಗಳು ನೋಡಿದರು ಸಂಬಂಧ ಪಡದವರಂತೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಹಲವು ಬಾರಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಗ್ರಾಮಗಳಿಗೆ ಬಸ್ಸಿನ ಸೌಕರ್ಯ ಕಲ್ಪಿಸಲು ಮನವಿ ಮಾಡಿದರು ಗ್ರಾಮಗಳಿಗೆ ಬಸ್‌ ಸೌಲಭ್ಯ ಕಲ್ಪಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ರೈತ ಸೇನೆ ಕರ್ನಾಟಕ ಹಾವೇರಿ ಜಿಲ್ಲಾಧ್ಯಕ್ಷ ವರುಣ್ ಪಾಟೀಲ ಆರೋಪಿಸಿದ್ದಾರೆ.

ಪೂರ್ಣಗೊಳ್ಳದ ಜಲ ಜೀವನ ಮಿಷನ್

ಕುನ್ನುರ ಗ್ರಾಮ ಹಾಗೂ ಮಮದಾಪೂರ ಹಳವ ತರ್ಲಗಟ್ಟ ಸೇರಿದಂತೆ ಜಲ ಜೀವನ ಮಿಷನ್ ಯೋಜನೆ ಪೂರ್ಣಗೊಳ್ಳದೆ ಕಂಗಾ ಲಾಗಿದ್ದು, ಮಾಡುತ್ತಿರುವ ಕಾಮಗಾರಿ ಕಳಪೆ ಆಗಿದೆ ಎಂದು ಆರೋಪಿಸಿದ್ದಾರೆ.

ಬೆಣ್ಣೆ ಹಳ್ಳ ಕಾಲುವೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದು, ಕಾಲುವೆ ಮಾಡಿ ರಾಡು ಹೋರ ಕಾಣುವಂತೆ ಬಿಟ್ಟಿದ್ದು, ಅಪಘಾತ ಸಂಭವಿಸುವ ಮುನ್ನ ಕಾಮಗಾರಿ ಪೂರ್ಣಗೊಳಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶ್ಯಾಡಾಂಬಿ ಗ್ರಾಮದ ರುದ್ರಪ್ಪ ಕಾಳಿ ಆಗ್ರಹಿಸಿದ್ದಾರೆ.

ಪಶು ಆಸ್ಪತ್ರೆಗಳಿ ಗಿಲ್ಲ ವೈದ್ಯರು

ತಾಲ್ಲೂಕಿನ ಹಲವು ಪಶುವೈದ್ಯ ಆಸ್ಪತ್ರೆಗಳಿಗೆ ವೈದ್ಯರಿಲ್ಲದೆ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಕಾಂಪೌಂಡಗಳ ಮೇಲೆ ಸರ್ಕಾರಿ ಆಸ್ಪತ್ರೆ ನಡೆಸುತ್ತಿದ್ದು, ದನ, ಕರುಗಳಿಗೆ ಸರಿಯಾಗಿ ಚಿಕಿತ್ಸೆ ನೀಡದ್ದರಿಂದ ಎಷ್ಟೊ ಪ್ರಾಣಿಗಳು ಮೃತಪಟ್ಟಿವೆ ಎಂದು ರೈತರು ಆರೋಪಿಸುತ್ತಿದ್ದಾರೆ.

ರೈತರ ಹೊಲಗದ್ದೆಗಳಿಗೆ ಹೋಗುವ ದಾರಿ, ಪಶು ವೈದ್ಯ ನೇಮಕ ಹಾಗೂ ಪ್ರತಿಯೊಂದು ಗ್ರಾಮಗಳಿಗೆ ಬಸ್ ಸೇವೆ ಅಧಿಕಾರಿಗಳು ಜನ ಪ್ರತಿನಿಧಿಗಳು ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಭ್ರಷ್ಟಾಚಾರ ನಿರ್ಮೂಲನ ಸಮಿತಿಯ ಅಧ್ಯಕ್ಷ ಈರಣ್ಣ ಸಾಮಾಗೊಂಡ ಹೇಳಿದರು.

ದುಂಡಶಿ ತಾಂಡಾ ದಿಂದ ಮಮದಾಪೂರ ಗ್ರಾಮದ ಹೊಲಗಳಿಗೆ ಹೋಗುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು.

ದುಂಡಶಿ ತಾಂಡಾ ದಿಂದ ಮಮದಾಪೂರ ಗ್ರಾಮದ ಹೊಲಗಳಿಗೆ ಹೋಗುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT