ಮಂಗಳವಾರ, ಸೆಪ್ಟೆಂಬರ್ 29, 2020
21 °C

ಚರ್ಚೆ ಹುಟ್ಟುಹಾಕಿದ ಹಾವೇರಿ ಸಂಸದ 'ನಾಪತ್ತೆ' ಪೋಸ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಸಂಸದ ಶಿವಕುಮಾರ ಉದಾಸಿ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಟ್ಟವರಿಗೆ ಸಿಂಗಪುರದಲ್ಲಿ ಒಂದು ಗುಂಟೆ ಸೈಟ್‌ ಅನ್ನು ಬಹುಮಾನವಾಗಿ ನೀಡಲಾಗುವುದು ಎಂಬ ಪೋಸ್ಟ್‌‌‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಈ ಪೋಸ್ಟ್‌ ಅನ್ನು ಕೆಪಿಸಿಸಿ ಹಾವೇರಿ, ಹಾವೇರಿ ಯೂತ್‌ ಕಾಂಗ್ರೆಸ್‌, ಯೂತ್‌ ಕಾಂಗ್ರೆಸ್‌ ಹಾನಗಲ್‌, ಹಾವೇರಿ ಗದಗ ಲೋಕಸಭೆ ಮತ್ತು ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಸೇರಿದಂತೆ ಹಲವರಿಗೆ ಶೇರ್‌ ಮಾಡಲಾಗಿದೆ. 

‘ಸಂಸದರ ಲೋಕಸಭಾ ಕ್ಷೇತ್ರದ ಬ್ಯಾಡಗಿ ತಾಲ್ಲೂಕಿನಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಆಗಬೇಕಾದ ಹಲವಾರು ರಸ್ತೆ ಮತ್ತು ರೈಲ್ವೆ ಸೇತುವೆ ಕಾಮಗಾರಿಗಳು ಕಳಪೆ ಆಗಿವೆ. ಭ್ರಷ್ಟಾಚಾರ ನಡೆದಿದೆ ಹಾಗೂ ಅನೇಕ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಜನರ ಸಮಸ್ಯೆಗೆ ಸ್ಪಂದಿಸದೆ ಸಂಸದರು ಪಲಾಯನ ಮಾಡಿದ್ದಾರೆ. ಲೋಕಸಭೆ ಚುನಾವಣೆ ಇದ್ದಾಗ ಹಾಗೂ ಇವರ ಪಕ್ಷದ ಕಾರ್ಯಕ್ರಮ ಇದ್ದಾಗ ಬ್ಯಾಡಗಿಗೆ ಬಂದದ್ದು ಬಿಟ್ಟರೆ, ಇದುವರೆಗೂ ಬ್ಯಾಡಗಿ ಜನರ ಸಮಸ್ಯೆಗೆ ಸ್ಪಂದನೆ ನೀಡದೆ ಕಾಣೆಯಾಗಿದ್ದಾರೆ’ ಎಂಬ ವಿವರವನ್ನು ಹಂಚಿಕೊಳ್ಳಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು