ಮಂಗಳವಾರ, ಜನವರಿ 28, 2020
21 °C

ಹಾವೇರಿಯಲ್ಲಿ "ಸ್ಪರ್ಧಾ ಮಾರ್ಗ "

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಸರಿಯಾದ ವೇಳೆಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡು ಆತ್ಮವಿಶ್ವಾಸದಿಂದ ಮುನ್ನಡೆದರೆ   ಯಶಸ್ಸು ಖಂಡಿತ ಸಿಗುತ್ತದೆ ಎಂದು ಎಸ್ಪಿ ಕೆ.ಜಿ.ದೇವರಾಜು ಅಭಿಪ್ರಾಯಪಟ್ಟರು. 

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ವತಿಯಿಂದ ಚಾಣಕ್ಯ ಕರಿಯರ್ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಿರುವ "ಸ್ಪರ್ಧಾ ಮಾರ್ಗ" ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, "ಇದು ಸಾಧ್ಯ. ನಾನು ಮಾಡಬಲ್ಲೆ" (It is possible, I can do it) ಎಂಬ ಮಂತ್ರ ಸದಾ ಜಪಿಸಬೇಕು. ಇದು ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. " ಶ್ರಮಕ್ಕೆ ಪರ್ಯಾಯವಿಲ್ಲ" ಎಂಬುದನ್ನೂ ನೆನಪಿಡಬೇಕು ಎಂದು ಹೇಳಿದರು.

ನಾನು ಕೆಎಎಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಿದ್ದು ಖಂಡಿತ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆ ಓದಿನಿಂದ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು