ರಾಣೆಬೆನ್ನೂರು: ‘ವಿದ್ಯೆ ನಮ್ಮಲ್ಲಿರುವ ಸುಪ್ತ ಸಂಪತ್ತು. ಭೌತಿಕ ಸಂಪತ್ತು ಖರ್ಚು ಮಾಡಿದಷ್ಟು ಕಡಿಮೆಯಾಗುತ್ತದೆ. ಆದರೆ ಜ್ಞಾನ ಸಂಪತ್ತು ಖರ್ಚು ಮಾಡಿದಷ್ಟು ಹೆಚ್ಚಾಗುತ್ತದೆ. ನಿರಂತರ ಅನ್ನದಾಸೋಹದ ಜತೆಗೆ ನಿರಂತರ ಜ್ಞಾನ ದಾಸೋಹ ಪ್ರತಿ ಮಾಸಿಕ ಜ್ಞಾನವಾಹಿನಿಯ ಮೂಲಕ ನಡೆದಿದೆ. ಮಕ್ಕಳ ಚಿತ್ತ ಪ್ರಗತಿಪತದತ್ತ ಸಾಗಲಿ’ ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಮೃತ್ಯುಂಜಯನಗರದ ಚೆನ್ನೇಶ್ವರಮಠದ ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಗುರುವಾರ ಆಗಿಹುಣ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಜ್ಞಾನವಾಹಿನಿ, ಮಾಸಿಕ ಧರ್ಮಸಭೆ, ವಚನ ಸ್ಪರ್ಧೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿದ್ದಲಿಂಗಸ್ವಾಮಿ ವಿ ಉಜ್ಜಯಿನಿಮಠ ವಿಶೇಷ ಉಪನ್ಯಾಸ ನೀಡಿದರು.

ಕನ್ನಡ ಮಾಧ್ಮಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ರಾಣೆಬೆನ್ನೂರು ತಾಲ್ಲೂಕಿನ ವಿದ್ಯಾರ್ಥಿಗಳಾದ ಚಂದನಾ ಆರ್.ಎಲ್. ಸರ್ಕಾರಿ ಪ್ರೌಢಶಾಲೆ ಹಿರೇಬಿದರಿ (ಪ್ರಥಮ ಸ್ಥಾನ), ಕುಮಾರ ಲಿಂಗರಾಜ ಬಿದರಿ ಲಯನ್ಸ್ ಪ್ರೌಢಶಾಲೆ ರಾಣೆಬೆನ್ನೂರು (ದ್ವಿತೀಯ), ಗಾಯತ್ರಿ ಕುಪ್ಪೇಲೂರ ಬಿ. ಏ.ಜೆ.ಎಸ್. ಎಸ್ ಪ್ರೌಢಶಾಲೆ ನಿಟ್ಟೂರ (ತೃತೀಯ ಸ್ಥಾನ) ಪಡೆದ ಇವರಿಗೆ ನಿವೃತ್ತ ಲಿಂಗಾವಂತ ಸಮಾಜ ನೌಕರರ ಸಂಘದಿಂದ ಬಹುಮಾನ ವಿತರಿಸಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿ ನಿಮಿತ್ತ ನಡೆದ ವಚನ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಲಾವಿದರಾದ ಗುಡ್ಡಪ್ಪ ಹಿಂದಲಮನಿ , ಗಣಪ್ಪ ಕುಲಕರ್ಣಿ, ಅನುಸೂಯ ರಾಠೋಡ, ಸಂಗೀತ ಕುಮಾರ, ಯುವರಾಜ್, ಸೋಮನಾಥ ಹಿರೇಮಠ ಅವರು ಸಂಗೀತ ಸೇವೆ ಸಲ್ಲಿಸಿದರು.

ಚೆನ್ನೇಶ್ವರಮಠದ ಉಪಾಧ್ಯಕ್ಷ ಬಸವರಾಜಪ್ಪ ಪಟ್ಟಣಶೆಟ್ಟಿ , ಬಿದ್ದಾಡೆಪ್ಪ ಚಕ್ರಸಾಲಿ, ಅಮೃತ ಗೌಡ ಹಿರೇಮಠ, ಜಗದೀಶ ಮಳಿಮಠ, ನಿವೃತ್ತ ಲಿಂಗವಂತ ಸಮಾಜ ನೌಕರರ ಸಂಘದ ಅಧ್ಯಕ್ಷ ಎಸ್ ಎನ್. ಜಂಗಳೇರ, ವಿಶ್ವನಾಥಯ್ಯ ಗುರುಪಾದದೇವರ ಮಠ , ಶಿವಯೋಗಿ ಹಿರೇಮಠ, ನಿವೃತ್ತ ಶಿಕ್ಷಕ ವಿ ವಿ ಹರಪನಹಳ್ಳಿ, ಕಸ್ತೂರೆಮ್ಮ ಪಾಟೀಲ, ವಿ ಎಂ ಕರ್ಜಗಿ, ಜ್ಯೋತಿ ಬಣ್ಣದ, ಚನ್ನವೀರ ಗೌಡ ಪಾಟೀಲ, ಸೋಮನಾಥ ಹಿರೇಮಠ, ಮೃತ್ಯುಂಜಯ ಪಾಟೀಲ, ರಾಚಯ್ಯ ಶಾಸ್ತ್ರಿ, ಗೌರಿಶಂಕರ ಸ್ವಾಮಿ ನೆಗಳೂರು ಮಠ. ಎಂಕೆ ಹಾಲಸಿದ್ದಯ್ಯ ಗಾಯತ್ರಿ ಕುರುವತ್ತಿ, ಭಾಗ್ಯಶ್ರಿ ಗುಂಡಗಟ್ಟಿ ಹಾಗೂ ತಾಲ್ಲೂಕು ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘ ಮತ್ತು ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.