ಸೋಮವಾರ, ಡಿಸೆಂಬರ್ 6, 2021
27 °C

ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ತಾಲ್ಲೂಕಿನ ಬಿಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಗೊಪ್ಪ ಗ್ರಾಮದ ನಿಟ್ಟೂರ ರಸ್ತೆಯಿಂದ ಕೋಣನತಲೆ ಗ್ರಾಮಕ್ಕೆ ಸಂಚರಿಸುವ ರಸ್ತೆ ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಬುಧವಾರ ರೈತರು ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಕೃಷ್ಣಮೂರ್ತಿ ಲಮಾಣಿ ಮಾತನಾಡಿ, ನರೇಗಾ ಯೋಜನೆ ಅಡಿಯಲ್ಲಿ ಒಟ್ಟು ₹8.50 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಗ್ರಾಮದ ಕೆಲವರು ತಕರಾರು ತೆಗೆದಿದ್ದರಿಂದ ಸದ್ಯಕ್ಕೆ ಈ ರಸ್ತೆ ಕಾಮಗಾರಿ ತಡೆ ಹಿಡಿಯಲಾಗಿದೆ. ಹೀಗಾಗಿ ರೈತರು ತಮ್ಮ ತಮ್ಮ ಜಮೀನುಗಳಿಗೆ ಸಾಗಲು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ತಾಲ್ಲೂಕು ಆಡಳಿತ ಮುಂದಾಗಿ ರಸ್ತೆ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಬಿಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೀರಪ್ಪ ಚೌಡಣ್ಣನವರ ಮಾತನಾಡಿ, ಗ್ರಾಮದ ಕೆಲವರ ಆಕ್ಷೇಪಣೆಯಿಂದಾಗಿ ತಾತ್ಕಾಲಿಕವಾಗಿ ತಡೆಯುಂಟಾಗಿದೆ. ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಹನುಮಂತಪ್ಪ ಚೌಡಣ್ಣನವರ, ರುದ್ರಪ್ಪ ಸಾವಜ್ಜಿ, ಭೀಮರಾಜ ಚೌಡಣ್ಣನವರ, ದುರಗಪ್ಪ ಮುಷ್ಠೂರ, ಶಿವಾನಂದ ಮಲ್ಲಾಡದ, ಮಂಜುನಾಥ ಚೌಡಣ್ಣನವರ, ಹನುಮಂತಪ್ಪ ಅಗಸಿಬಾಗಿಲ, ದುರಗಪ್ಪ ಮಲ್ಲಾಡದ, ಪರಮೇಶಪ್ಪ ಪೂಜಾರ, ಹನುಮಂತಪ್ಪ ಚೌಡಣ್ಣನವರ, ಸುರೇಶ, ನಾಗರಾಜ ಚೌಡಣ್ಣನವರ, ಬಿಲ್ಲಹಳ್ಳಿ, ಹಾರೋಗೊಪ್ಪ, ಕೋಣನತೆಲೆ ಗ್ರಾಮದ ರೈತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು