ಹದಗೆಟ್ಟ ಯಕಲಾಸಪುರ-ಮೇಡ್ಲೇರಿ ರಸ್ತೆ: ದುರಸ್ತಿಗೆ ಸಾರ್ವಜನಿಕರ ಆಗ್ರಹ
ಮುಕ್ತೇಶ್ವರ ಪಿ. ಕೂರಗುಂದಮಠ
Published : 30 ಡಿಸೆಂಬರ್ 2024, 4:40 IST
Last Updated : 30 ಡಿಸೆಂಬರ್ 2024, 4:40 IST
ಫಾಲೋ ಮಾಡಿ
Comments
ರಾಣೆಬೆನ್ನೂರು ತಾಲ್ಲೂಕಿನ ಯಕಲಾಸಪುರ ರಸ್ತೆಯಿಂದ ಮೇಡ್ಲೇರಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಯಕಲಾಸಪುರ ರಸ್ತೆ ದುರಸ್ತಿ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಸದ್ಯಕ್ಕೆ ಓಡಾಡಲು ಅನುಕೂಲವಾಗುವಂತೆ ಪ್ಯಾಚ್ ವರ್ಕ್ ಮಾಡಿಸಲಾಗುವುದು. ಅನುದಾನ ಬಂದ ಮೇಲೆ ಸಂಪೂರ್ಣ ರಸ್ತೆ ದುರಸ್ತಿ ಪಡಿಸಲಾಗುವುದು
–ಮರಿಸ್ವಾಮಿ ಎಚ್.ವಿ. ಲೊಕೋಪಯೋಗಿ ಇಲಾಖೆ ಎಂಜಿನಿಯರ್
ಯಕಲಾಸಪುರದಿಂದ ಮೇಡ್ಲೇರಿ ರಸ್ತೆ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೂ ತಂದಿದ್ದೇವೆ. ಇದುವರೆಗೂ ಕಾಮಗಾರಿ ಕೈಗೊಂಡಿಲ್ಲ. ಕೂಡಲೇ ರಸ್ತೆ ದುರಸ್ತಿಗೆ ಅಧಿಕಾರಿಗಳು ಮುಂದಾಗಬೇಕು
–ದಿಳ್ಳೆಪ್ಪ ಅಣ್ಣೇರ ಮೇಡ್ಲೇರಿ ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ
‘ದುರ್ಗಾದೇವಿ ಜಾತ್ರೆಗೆ ಅನುಕೂಲ ಕಲ್ಪಿಸಿ’
ಜ.6 ರಿಂದ 10ರ ವರೆಗೆ ಮೇಡ್ಲೇರಿಯಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಇದೇ ಯಕಲಾಸಪುರ ಮಾರ್ಗವಾಗಿ ದಾವಣಗೆರೆ ಹರಿಹರ ಶಿವಮೊಗ್ಗ ಜಿಲ್ಲೆಯಿಂದ ಜನತೆ ಅಡ್ಡಾಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮೇಡ್ಲೆರಿ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಜಾತ್ರಾ ಮಹೋತ್ಸವದ ಅಧ್ಯಕ್ಷ ಮೇಡ್ಲೇರಿಯ ದಿಳ್ಳೆಪ್ಪ ಅಣ್ಣೇರ ಹಾಗೂ ರಮೇಶ ಭಜಂತ್ರಿ ಒತ್ತಾಯಿಸಿದ್ದಾರೆ.