ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ | ಕಲ್ಮೇಶ್ವರ ಜಾತ್ರೆ ನಾಳೆಯಿಂದ

Published 1 ಏಪ್ರಿಲ್ 2024, 15:45 IST
Last Updated 1 ಏಪ್ರಿಲ್ 2024, 15:45 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನ ಕಲ್ಲೆದೇವರು ಗ್ರಾಮದ ಕಲ್ಮೇಶ್ವರ ಜಾತ್ರಾ ಮಹೋತ್ಸವ ಏ.2ರಿಂದ ಏ.5ರವರೆಗೆ ಜರುಗಲಿದೆ.

ಏ.2ರಂದು ಬೆಳಿಗ್ಗೆ ಕಲ್ಮೇಶ್ವರನಿಗೆ ರುದ್ರಾಭಿಷೇಕ, ಕಂಕಣ ಕಟ್ಟುವುದು ಬಳಿಕ ಗ್ರಾಮದ ದೇವರುಗಳಿಗೆ ಉಡಿ ತುಂಬುವುದು. ರಾತ್ರಿ 10 ಗಂಟೆಗೆ ಹೂವಿನ ರಥೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಜರುಗಲಿದೆ. ಏ.3ರಂದು ರಾತ್ರಿ 10 ಗಂಟೆಗೆ ಮಹಾ ರಥೋತ್ಸವ ಆರಂಭಗೊಂಡು ಪುರವಂತರ ಒಡಪುಗಳು ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಅಹೋರಾತ್ರಿ ಸಾಗಲಿದೆ.

ಏ.4ರಂದು ಓಕಳಿ ನಂತರ ಬೆಲ್ಲದ ಬಂಡಿ ಸಾಗಲಿದೆ. ಏ.5ರ ಮಧ್ಯಾಹ್ನ 3.30ರಿಂದ ಮೂರು ದಿನಗಳ ಕಾಲ ಬಸಪ್ಪ ಪುಟ್ಟಪ್ಪ ಕರಿಯಪ್ಪನವರ ಸ್ಮರಣಾರ್ಥ ಬಯಲು ಜಂಗಿ ಕುಸ್ತಿಗಳು ನಡೆಯಲಿವೆ. ಏ.7ರಂದು ಜರುಗಲಿರುವ ಕೊನೆಯ ದಿನದ ಕುಸ್ತಿಯಲ್ಲಿ ವಿಜೇತರಾದವರಿಗೆ ಬೆಳ್ಳಿ ಗದೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Cut-off box - ಶರಣ ಬಸವೇಶ್ವರ ಜಾತ್ರಾ ಮಹೋತ್ಸವ ಶಿಗ್ಗಾವಿ: ತಾಲ್ಲೂಕಿನ ಶದಾಶಿವಪೇಟೆ ಶರಣಬಸವೇಶ್ವರ 44ನೇ ವರ್ಷದ ಪುರಾಣ ಪ್ರವಚನ ಸರ್ವಧರ್ಮ ಸಾಮೂಹಿಕ ವಿವಾಹ ಮತ್ತು ರಥೋತ್ಸವ ಭಕ್ತ ಸಮೂಹದ ನಡುವೆ ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು. ಶರಣ ಬಸವೇಶ್ವರ ದೇವಸ್ಥಾನದ ಶಿವದೇವ ಶರಣರು ಮತ್ತು ಶಿರಹಟ್ಟಿ ಫಕ್ಕೀರ ಸಿದ್ದರಾಮೇಶ್ವರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಜಾಂಜ್ ಮೇಳ ಡೋಳ್ಳು ಮೇಳ ಭಜನೆ ಕುದರಿ ಕುಣಿತ ಸೇರಿದಂತೆ ವಿವಿಧ ವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಮಹಿಳೆಯರು ಮಕ್ಕಳು ಹಣ್ಣು ಹೂ ಕಾಯಿಗಳಿಂದ ವಿಶೇಷ ಪೂಜೆ ಜಲ್ಲಿಸಿದರು. ಹರ ಹರ ಮಾಹಾದೇವ ಎಂಬ ಜಯಘೋಷಗಳು ಜನರಲ್ಲಿ ಭಕ್ತಿ ಪರಾಕಾಷ್ಟೆ ಮೂಡಿಸಿತು. ಕೆಲವು ಭಕ್ತರು ತಮ್ಮ ಹರಕೆ ತಿರಿಸುವ ಮೂಲಕ ಶ್ರದ್ಧಾಭಕ್ತಿ ಸಲ್ಲಿಸಿದರು. ಬೆಳಿಗ್ಗೆ ದೇವಸ್ಥಾನದಲ್ಲಿ ಶರಣ ಬಸವೇಶ್ವರ ಹಾಗೂ ಲಿಂಗೈಕ್ಯ ರೇವಣಸಿದ್ದೇಶ್ವರ ಶರಣರ ಗದ್ದುಗೆಗೆ ಮಹಾರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಹವನ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ನಾರಾಯಣಪುರ ಗ್ರಾಮ ಪಂಚಾಯ್ತಿ ಸದಸ್ಯ ಸಂಗಪ್ಪ ವಡವಿ ರಮೇಶ ಕಲಿವಾಳ ಸಿ.ವಿ.ಕಿವುಡನವರ ಎಸ್.ಜಿ.ಹಿರೇಮಠ ಶರಣಬಸಪ್ಪ ಕಿವುಡನವರ ಪ್ರಭಾಕರ ಬಡಿಗೇರ ಬಸವರಾಜ ಜಿಗರಿ ಶಂಭು ಕಿವುಡನವರ ಪುಟ್ಟಪ್ಪ ಬಾಗಣ್ಣವರ ವೀರಪ್ಪ ವಡವಿ ಮೌನೇಶ ಇಚ್ಚಂಗಿ ಗದಿಗೆಪ್ಪ ಕಿವುಡನವರ ಗುರುಲಿಂಗಯ್ಯ ನಂದಿಮಠ ವೀರಣ್ಣ ಶೆಟ್ಟರ ವೀರಪ್ಪ ರವದಿ ಎನ್.ಬಿ.ಚಿಗರಿ ರುದ್ರಪ್ಪ ಕಿವುಡನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT