ರಟ್ಟೀಹಳ್ಳಿ: ಇಲ್ಲಿಯ ಪಟ್ಟಣ ಪಂಚಾಯಿತಿಯ ವಾರ್ಡ್ ಸದಸ್ಯರ ಆಯ್ಕೆಗಾಗಿ ಭಾನುವಾರ ಮತದಾನ ಶಾಂತಿಯುತವಾಗಿ ಜರುಗಿತು. ಪಂಚಾಯಿತಿ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಶೇ 80.63ರಷ್ಟು ಮಂದಿ ಮತ ಚಲಾವಣೆ ಮಾಡಿದರು.

ಪಟ್ಟಣದ 15 ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಮತದಾನ ನಡೆಯಿತು. ಉತ್ಸಾಹದಿಂದಲೇ ಮತಗಟ್ಟೆಗೆ ಬಂದ ಜನರು, ಮತದಾನ ಮಾಡಿ ತೆರಳಿದರು. ಕೆಲ ಮತಗಟ್ಟೆಗಳಲ್ಲಿ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿತ್ತು. ಅದರ ನಡುವೆಯೇ ಮತದಾನ ಸರಾಗವಾಗಿ ನಡೆಯಿತು.

ಭಾನುವಾರ ಬೆಳಿಗ್ಗೆಯಿಂದಲೇ ಜಿಟಿ ಜಿಟಿ ಮಳೆ ಶುರುವಾಗಿತ್ತು. ಇದರಿಂದಾಗಿ ಮತಗಟ್ಟೆಗಳಿದ್ದ ಶಾಲೆಯ ಆವರಣದಲ್ಲಿ ನೀರು ನಿಂತು, ಕೆಸರು ಹೆಚ್ಚಾಗಿತ್ತು. ಕೆಸರಿನಲ್ಲೇ ನಡೆದುಕೊಂಡು ಮತದಾರರು, ಮತಗಟ್ಟೆಗೆ ತಲುಪಿದರು. ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

11,815 ಮತದಾರರು (ಗಂಡು –5917 ಹಾಗೂ ಹೆಣ್ಣು– 5897) ಮತದಾನಕ್ಕೆ ಅರ್ಹತೆ ಪಡೆದಿದ್ದರು. ಅದರಲ್ಲಿ 9,527 ಮಂದಿ (ಗಂಡು– 4874 ಹಾಗು ಹೆಣ್ಣು–4653) ಮತದಾನ ಮಾಡಿದರು.

ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಸಂಗತಿಯಾಗಿದ್ದ ಚುನಾವಣೆ ಮುಕ್ತವಾಯಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ. ಆಗಸ್ಟ್ 20ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.

ಅವ್ಯವಸ್ಥೆ ಕಂಡು ಆಯುಕ್ತ ಗರಂ: ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯ ವೀಕ್ಷಣೆಗಾಗಿ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರು ಭೇಟಿ ನೀಡಿದ್ದರು. ಮತಗಟ್ಟೆಗಳಲ್ಲಿದ್ದ ಅವ್ಯವಸ್ಥೆ ಕಂಡು, ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಗರಂ ಆದರು.

ಪಟ್ಟಣ ಪಂಚಾಯಿತಿಯ 9 ಮತ್ತು 10ನೇ ವಾರ್ಡ್ನ ಮತಗಟ್ಟೆಗೆ ತೆರಳಿದ್ದ ಸಂಗ್ರೇಶಿ, ಅಲ್ಲಿಯ ಅವ್ಯವಸ್ಥೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮತಗಟ್ಟೆ ಕೇಂದ್ರದ 100 ಮೀಟರ್ ಒಳಗೆಯೇ ವಾಹನಗಳ ನಿಲುಗಡೆಗೆ ಅವಕಾಶ ನೀಡಿದ್ದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಾಥಮಿಕ ಶಾಲೆಯಲ್ಲಿಯ 4ನೇ ವಾರ್ಡ್ ಹಾಗೂ 5ನೇ ವಾರ್ಡ್ನ ಮತಗಟ್ಟೆಗೆ ತೆರಳಿದ್ದ ಆಯುಕ್ತ ಸಂಗ್ರೇಶಿ, ಮೈದಾನ ಸಂಪೂರ್ಣ ಕೆಸರು ಗದ್ದೆಯಾಗಿದ್ದನ್ನು ಕಂಡರು. ಕೆಸರಿನಲ್ಲಿ ನಡೆದುಕೊಂಡು ಮತಗಟ್ಟೆಗೆ ತೆರಳಲು ಮತದಾರರು ಪರದಾಡುತ್ತಿರುವುದನ್ನು ಗಮನಿಸಿದರು.

ಸ್ಥಳದಲ್ಲೇ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಂಗ್ರೇಶಿ, ’ಚುನಾವಣೆ ನಿರ್ವಹಣೆಯಲ್ಲಿ ಸಾಕಷ್ಟು ಬೇಜವಾಬ್ದಾರಿ ತೋರಿಸಿದ್ದೀರಾ. ಇಲ್ಲಿ ಎಲ್ಲವೂ ಅವ್ಯವಸ್ಥೆಯಾಗಿದೆ. ಮತದಾರರಿಗೆ ನೀಡಬೇಕಾದ ಸೌಲಭ್ಯವನ್ನು ನೀವು ನೀಡಿಲ್ಲ. ಕೂಡಲೇ ಮತದಾರರು, ಮತಗಟ್ಟೆಗಳಿಗೆ ಸುಗಮವಾಗಿ ಹೋಗಲು ವ್ಯವಸ್ಥೆ ಮಾಡಿಸಿ’ ಎಂದು ಸೂಚಿಸಿದರು.

ಸರ್ಕಾರಿ ಪಿ.ಯು. ಕಾಲೇಜಿನ ಮತಗಟ್ಟೆ ಕೇಂದ್ರ ಸಂಖ್ಯೆ 1ಕ್ಕೆ ತೆರಳಿದ್ದ ಆಯುಕ್ತ, ಅಲ್ಲಿಯ ಕೆಸರು ಗದ್ದೆಯಂತಾದ ಆವರಣ ನೋಡಿ ಪುನಃ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.

ಎಚ್ಚೆತ್ತ ಅಧಿಕಾರಿಗಳು: ಆಯುಕ್ತ ಎಚ್ಚರಿಕೆಯಿಂದ ಎಚ್ಚೆತ್ತ ಅಧಿಕಾರಿಗಳು, ಕೆಸರು ಕಡಿಮೆ ಮಾಡಲು ಜಲ್ಲಿಕಲ್ಲು ಹಾಕಿದರು. ಮತಗಟ್ಟೆಗೆ ಬಂದು ಹೋಗಲು ಮತದಾರರಿಗೆ ವಾಹನದ ವ್ಯವಸ್ಥೆ ಮಾಡಿಸಿದರು.

‘ಜಿಲ್ಲಾಧಿಕಾರಿ ವಿರುದ್ಧ ಶಿಸ್ತುಕ್ರಮ’:

‘ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ನಡೆಸುವಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹಲವೆಡೆ ಅವ್ಯವಸ್ಥೆ ಕಂಡು ಬೇಸರವಾಯಿತು. ಈ ಸಂಬಂಧ ಜಿಲ್ಲಾಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮತಗಟ್ಟೆಗಳಿಗೆ ರಾಜ್ಯ ಆಯುಕ್ತ ಬಂದಿದ್ದರೂ ಜಿಲ್ಲಾಧಿಕಾರಿಯವರು ಭೇಟಿಯಾಗಿಲ್ಲ. ಸ್ಥಳಕ್ಕೂ ಬರಲಿಲ್ಲ’ ಎಂದರು. ‘ಮತಗಟ್ಟೆಗಳಲ್ಲಿ ವೃದ್ಧರು ಹಾಗೂ ಮಹಿಳೆಯರಿಗೆ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ವೃದ್ಧರು ಮತಗಟ್ಟೆ ಆವರಣದಲ್ಲಿದ್ದ ಕೆಸರಿನಲ್ಲೇ ನಡೆದುಕೊಂಡು ಪರದಾಡುತ್ತ ಬರುತ್ತಿರುವುದನ್ನು ನೋಡಿ ಮನಸ್ಸಿಗೆ ಬೇಸರವಾಯಿತು’ ಎಂದರು.

‘ಚುನಾವಣೆ ಪೂರ್ವ ಸಿದ್ದತೆ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ಕಾಟಾಚಾರಕ್ಕೆ ಚುನಾವಣಾ ಕರ್ತವ್ಯ ನಿರ್ವಹಿಸಿದ್ದಾರೆ. ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಮತ್ತು ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ನೋಟಿಸ್ ನೀಡಿ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.