ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ರಾಯರ ಆರಾಧನಾ ಮಹೋತ್ಸವ

Last Updated 10 ಆಗಸ್ಟ್ 2022, 15:41 IST
ಅಕ್ಷರ ಗಾತ್ರ

ಹಾವೇರಿ: ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವವು ನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ಆ. 11ರಿಂದ 14ರ ವರೆಗೆ ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಗುರುವಾರ ರಾಘವೇಂದ್ರ ಗುರು ಸಾರ್ವಭೌಮರ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ದೀಪಸ್ಥಾಪನೆ, ಅಷ್ಟೋತ್ತರ ಪಾರಾಯಣ, ಗಣ್ಯವ್ಯಕ್ತಿಗಳಿಂದ ಸಾಮೂಹಿಕ ಪ್ರಾರ್ಥನೆ, ಗಣಪತಿ ಹವನ ಹಾಗೂ ಮಧ್ಯಾಹ್ನ 12.30ಕ್ಕೆ ಹಸ್ತೋದಕ ನಡೆಯಲಿದೆ.

ಆ.12ರಂದು ಪೂರ್ವಾರಾಧನೆ, ಪಂಚಾಮೃತ, ತೇರುಬೀದಿ ಹನುಮಂತದೇವರ ದರ್ಶನ, ಅಷ್ಟೋತ್ತರ ಪಾರಾಯಣ, ಹಸ್ತೋಧಕ, ಅನ್ನಪೂರ್ಣೇಶ್ವರಿ ಪೂಜೆ, ತೀರ್ಥ ಪ್ರಸಾದ, ಚಕ್ರಾಭ್ಯ ಮಂಡಲ ಪೂಜೆ, ಹೂವಿನ ರಥೋತ್ಸವ, ನಗರ ಪ್ರದಕ್ಷಿಣೆ, ಮಹಾಮಂಗಲಾರತಿ ಕಾರ್ಯಕ್ರಮಗಳು ಜರಗುವುದು.

ಆ. 13ರಂದು ಮಧ್ಯಾರಾಧನೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಷ್ಟೋತ್ತರ ಪಾರಾಯಣ, ತೇರುಬೀದಿ ಹನುಮಂತ ದೇವರ ದರ್ಶನ, ಪಾದಪೂಜೆ, ಅಲಂಕಾರ ಪೂಜೆ, ಬೆಳ್ಳಿ ರಥೋತ್ಸವ, ಅನ್ನಪೂರ್ಣೇಶ್ವರಿ ಪೂಜೆ, ತೀರ್ಥಪ್ರಸಾದ, ಭದ್ರಕ ಮಂಡಲ ಪೂಜೆ, ಹೂವಿನರಥ ನಗರ ಪ್ರದಕ್ಷಿಣೆ, ಅಷ್ಟಾವಧಾನ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳು ಜರಗುವುವು.

ಆ. 14ರಂದು ಉತ್ತರಾರಾಧನೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ, ಅಷ್ಟೋತ್ತರ, ಹಸ್ತೋದಕ, ಮಹಾರಥೋತ್ಸವ, ಅನ್ನಪೂಣೇಶ್ವರಿ ಪೂಜೆ, ಮಹಾಪ್ರಸಾದ ವಿತರಣೆ, ಸವತೋಭದ್ರ ಮಂಡಲ ಪೂಜೆ, ಬೆಳ್ಳಿ ರಥೋತ್ಸವ ಅಷ್ಠಾವಧಾನ ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಲಿದ್ದು, ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಧರ್ಮದರ್ಶಿ ಹರಿಕೃಷ್ಣ ಜೋಯ್ಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT