ರಾಣೆಬೆನ್ನೂರು: ತಾಲ್ಲೂಕಿನಾದ್ಯಂತ ಭಾನುವಾರ ನಾಗರಪಂಚಮಿ ಹಬ್ಬದ ಮುನ್ನಾ ದಿನ ರೊಟ್ಟಿ ಪಂಚಮಿ ಹಬ್ಬವನ್ನು ಭಾನುವಾರ ವಿಶೇಷವಾಗಿ ಆಚರಿಸಿದ್ದು ಕಂಡು ಬಂದಿತು. ಭಾನುವಾರ ಸಂತೆ ದಿನವಾಗಿದ್ದರಿಂದ ದೊಡ್ಡಪೇಟೆ, ಎಂ.ಜಿ. ರಸ್ತೆ, ಎಪಿಎಂಸಿ ಉಪಪ್ರಾಂಗಣದ ಈರುಳ್ಳಿ ಮಾರುಕಟ್ಟೆ, ನೆಹರು ಮಾರುಕಟ್ಟೆ ಮತ್ತು ದುರ್ಗಾ ತರಕಾರಿ ಮಾರುಕಟ್ಟೆಯ ಅಂಗಡಿಗಳಲ್ಲಿ ಪಂಚಮಿ ಹಬ್ಬದ ವ್ಯಾಪಾರ ವಹಿವಾಟು ಜೋರಾಗಿತ್ತು.

ಶೇಂಗಾ, ಎಳ್ಳು, ತೆಂಗಿನಕಾಯಿ, ಸಾವಯವ ಬೆಲ್ಲ, ವೀಳ್ಯದೆಲೆ, ವಿವಿಧ ಬಣ್ಣದ ಸೇವಂತಿಗೆ ಹೂ ಮತ್ತು ತರಕಾರಿಯನ್ನು ರೈತರು ಸಂತೆಗೆ ಮಾರಾಟಕ್ಕೆ ತಂದಿದ್ದರು. ಎಂ.ಜಿ. ರಸ್ತೆಯಲ್ಲಿ ಬಟ್ಟೆ ಅಂಗಡಿಯಲ್ಲಿ ಹೊಸ ಬಟ್ಟೆ ಖರೀದಿ, ಹೂ, ಬಾಳೆ ಹಣ್ಣು, ತೆಂಗಿನಕಾಯಿ, ತರಕಾರಿ ಕಿರಾಣಿ ಖರೀದಿಸಲು ಮುಂದಾಗಿದ್ದರು. ಸಂಚಾರಿ ಠಾಣೆ ಪೊಲೀಸರು ಸಂಚಾರ ಸುಗಮಗೊಳಿಸಲು ಮುಂದಾಗಿದ್ದರು.

ಪಂಚಮಿ ಹಬ್ಬ ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ರೊಟ್ಟಿ ಹಬ್ಬ, ಸೋಮವಾರ ನಾಗಪ್ಪಗೆ ಹಾಲು ಎರೆಯುವುದು. ಮಂಗಳವಾರ ಮೂರನೇ ದಿನ ಹೊಳೆಗಂಗವ್ವನ ಪೂಜೆ ಮಾಡಲಾಗುತ್ತದೆ. ಸ್ವಾಮಿಗಳು, ವಿವಿಧ ಬಾಬುದಾರರು ಮನೆ ಮನೆಗೆ ಕಂತಿ ಭಿಕ್ಷೆ ಮಾಡುವುದು ಕಂಡು ಬಂದಿತು.

ರೊಟ್ಟಿ ಪಂಚಮಿ ಹಬ್ಬ: ಈ ಹಬ್ಬವು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲ್ಪಡುತ್ತದೆ. ರೊಟ್ಟಿ ಪಂಚಮಿಯ ಗ್ರಾಮೀಣ ಸಂಸ್ಕೃತಿಯ ಆಚರಣೆಯಾಗಿದೆ. ರೊಟ್ಟಿ ಪಂಚಮಿಯು ಕೃಷಿ, ಭಕ್ತಿ, ಮತ್ತು ಸಾಮಾಜಿಕ ಸಾಮರಸ್ಯವನ್ನು ಒಳಗೊಂಡ ಸರಳ ಹಬ್ಬ. ಈ ಹಬ್ಬವು ಇಂದಿಗೂ ತನ್ನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯವನ್ನು ಕಾಪಾಡಿಕೊಂಡಿದೆ. ಈ ಹಬ್ಬವು ಕೃಷಿ ಸಂಸ್ಕೃತಿಯೊಂದಿಗೆ ಆಳವಾಗಿ ಬೆಸೆದುಕೊಂಡಿದ್ದು, ಜನರ ಜೀವನದಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.

ಎಲ್ಲರ ಮನೆಗಳಲ್ಲಿ ಎಳ್ಳುಹಚ್ಚಿದ ರೊಟ್ಟಿ, ಸಜ್ಜಿ ರೊಟ್ಟಿ, ಚಪಾತಿ, ಕಡಲೆ ಕಾಳು, ಮಡಕಿಕಾಳು ಮತ್ತು ಹೆಸರು ಕಾಳು ಮೊಳಕೆ ಪಲ್ಯ, ಮುಳಗಾಯಿ ಎಣ್ಣೆಗಾಯಿ ಪಲ್ಯ, ಪುಂಡಿ ಸೊಪ್ಪಿನ ಪಲ್ಯ, ಜುಣುಕಾ, ಬ್ಯಾಳಿ ಪಲ್ಯ, ದೊಣಗಾಯಿ ಪಲ್ಯ, ಶೇಂಗಾ ಚಟ್ನಿ, ಕುಚ್ಚಿದ ಕಾರ, ಗುರೆಳ್ಳು ಚಟ್ನಿ, ಅಗಸಿ ಚಟ್ನಿ, ಪುಠಾಣಿ ಚಟ್ನಿ, ಮೊಸರು ಬುತ್ತಿ, ಸಾಂಬಾರ ಬುತ್ತಿ, ಚಿತ್ರನ್ನ ಮಾಡಿದ್ದರು. ಮನೆ ಮಂದಿಯೆಲ್ಲ ಒಂದೆಡೆ ಸೇರಿ ರೊಟ್ಟಿ ಪಂಚಮಿಯ ಹಬ್ಬ ಊಟ ಸವಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.