ಹಾವೇರಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸೊರಬ ತಾಲ್ಲೂಕು ಉದ್ರಿ ಗ್ರಾಮದ ಚಂದ್ರಪ್ಪ ಈರಪ್ಪ ಗಂಗಳ್ಳೇರ (42) ಎಂಬಾತನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹1.60 ಲಕ್ಷ ದಂಡ ವಿಧಿಸಿ ಹಾವೇರಿಯ ವಿಶೇಷ ಸೆಷನ್ಸ್ ನ್ಯಾಯಾಲಯದ (ಶೀಘ್ರಗತಿ ನ್ಯಾಯಾಲಯ-1) ನ್ಯಾಯಾಧೀಶರಾದ ನಿಂಗೌಡ ಪಾಟೀಲ ಆದೇಶ ನೀಡಿದ್ದಾರೆ.

ಬಾಲಕಿಯನ್ನು ಫೋನಿನ ಮೂಲಕ ಪರಿಚಯ ಮಾಡಿಕೊಂಡು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಜುಲೈ 2020ರಂದು ಅಪಹರಿಸಿಕೊಂಡು ಹೋಗಿದ್ದ. ಚಿಕ್ಕಮಗಳೂರು ಮತ್ತು ಸಕಲೇಶಪುರ ಸಮೀಪದ ಕಾಫಿ ಎಸ್ಟೇಟ್‌ನಲ್ಲಿರುವ ಮನೆಯಲ್ಲಿ ಬಾಲಕಿಯ ಇಚ್ಛೆಯ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಾಗಿ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಬ್ಯಾಡಗಿ ವೃತ್ತ ತನಿಖಾಧಿಕಾರಿ ಸಿಪಿಐ ಬಸವರಾಜ ಪಿ.ಎಸ್. ಅವರು ತನಿಖೆ ನಡೆಸಿ, ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ದಂಡದ ಹಣದಲ್ಲಿ ನೊಂದ ಬಾಲಕಿಗೆ ₹1.50 ಲಕ್ಷ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ₹4 ಲಕ್ಷ ಪರಿಹಾರ ನೀಡಲು ಆದೇಶ ಮಾಡಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿಜಯಕುಮಾರ ಶಂಕರಗೌಡ ಪಾಟೀಲ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.