ರಟ್ಟೀಹಳ್ಳಿ: ‘ಶಂಕರಾಚಾರ್ಯರನ್ನು ಭಾರತೀಯ ಪರಂಪರೆಯಲ್ಲಿ ಶಿವನ ಅವತಾರ ಎಂದು ಹೇಳಲಾಗುತ್ತದೆ. ಅದ್ವೈತ ವೇದಾಂತವನ್ನು ಜಗತ್ತಿಗೆ ತಿಳಿಸಿಕೊಟ್ಟ ಮಹಾನ್ ದಾರ್ಶನಿಕ ಅವರು’ ಎಂದು ಬ್ರಾಹ್ಮಣ ಸಮಾಜದ ಮುಖಂಡ ಸುಶೀಲ ನಾಡಿಗೇರ ಹೇಳಿದರು.

ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ತಾಲ್ಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಶಂಕರಾಚಾರ್ಯರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಶಂಕರ ಸೇವಾ ಸಮಿತಿ ಕಾರ್ಯದರ್ಶಿ ಪ್ರದೀಪ ಕುಲಕರ್ಣಿ ಮಾತನಾಡಿ, ‘ಶಂಕರಾಚಾರ್ಯರು ಕೇವಲ 32 ವರ್ಷಗಳ ಜೀವಿತಾವಧಿಯಲ್ಲಿ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ಶ್ರಮಿಸಿದವರು. ಹಲವಾರು ಭಕ್ತಿ ಪ್ರಾರ್ಥನೆಗಳನ್ನು ರಚಿಸಿದರು. ದ್ವಾರಕಾ, ಕಾಶ್ಮೀರ, ಶೃಂಗೇರಿ, ಮತ್ತು ಪುರಿಯಲ್ಲಿ ನೆಲೆಗೊಂಡಿರುವ ಪ್ರಮುಖ ಮಠಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.

ವಿಜೇಂದ್ರ ಶಿರೋಳ, ಪ್ರಸನ್ನ ಬಿದರಳ್ಳಿ, ವಿಶ್ವನಾಥ ಅಧ್ಯಾಪಕ, ನರಸಿಂಹ ಆದ್ವಾನಿ, ರಮಾಬಾಯಿ, ದೀಪಾ ಕುಲಕರ್ಣಿ, ಸುರಭಿ ನಾಡಗೇರ, ಶಕುಂತಲಾ ನಾಡಗೇರ, ಲಕ್ಷ್ಮಿ ಆದ್ವಾನಿ, ಗಿರಿಜಾ ನಾಡಗೇರ, ಶುಭಾ ಗುಂಡಾಭಟ್ಟರ, ಮಹೇಶ ಕಮ್ಮಾರ, ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಎಂ.ಎಸ್. ಜಗತಾಪ್, ಆರಾಧನಾ ಬಾನಾವಳಿಕರ, ರಾಜು ಪೂಜಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.