ಶಿಗ್ಗಾವಿ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವುದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು, ರೈತರು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಬುಧವಾರವೂ ಮುಂದುವರಿಯಿತು.

ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ದೊರೆತು ಹಲವು ದಶಕ ಕಳೇದರೂ ಅನ್ನದಾತನ ಸಂಕಷ್ಟ ಪರಿಹಾರವಾಗಿಲ್ಲ. ರೈತರಿಂದ ದೇಶದ ವಿವಿಧ ವಲಯಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ. ಆದರೆ, ಕೃಷಿ ಕ್ಷೇತ್ರ ಹಿಂದುಳಿದಿದೆ’ ಎಂದರು.

‘ಭಾರತದಲ್ಲಿ ಶೇ 70ರಷ್ಟು ಜನರ ಮೂಲ ಉದ್ಯೋಗ ಕೃಷಿ ಆಗಿದೆ. ರೈತ ಸಮೂಹವು ಪ್ರತಿ ವರ್ಷ ಅತಿವೃಷ್ಟಿ, ಅನಾವೃಷ್ಟಿಯಿಂದ ಬಳಲುತ್ತಿದ್ದು, ಬೆಳೆಗಳಿಗೆ ಸೂಕ್ತ ಬೆಲೆಯೂ ಸಿಗುತ್ತಿ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರಗಳು ರೈತ ಪರ ಕಾನೂನು ಜಾರಿಗೆ ತರಬೇಕು. ಅನುಕೂಲ ಕಲ್ಪಿಸದಿದ್ದರೆ ತೀವ್ರ ಹೋರಾಟ ಅನಿವಾರ್ಯ’ ಎಂದು ಎಚ್ಚರಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಬಾರ್ಕಿ, ಮಂಜುನಾಥ ಕಂಕನವಾಡ, ಧರ್ಮನಗೌಡ ಹೊನ್ನಗೌಡ್ರ, ಕರೆಪ್ಪ ಆಳೂರ, ಶಶಿಧರ ಹೊನ್ನಣ್ಣವರ, ಬಸಣ್ಣ ಗೊಬ್ಬಿ, ಬಸಮ್ಮ ಬಾದಮಗಟ್ಟಿ, ರಮೇಶ ಜೋಳದ, ಚಂದ್ರಪ್ಪ ಸಾವಕ್ಕನವರ, ಪ್ರಕಾಶ ನಿಕಂ, ಶಿವಪ್ಪ ಗಬ್ಬೂರ, ಈಶ್ವರಗೌಡ ಪಾಟೀಲ, ಆಳಪ್ಪ ಬೇಟಗೇರಿ, ಖ್ವಾಜಾಸಾಬ್ ದರ್ಗಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.