ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗೆ ಅಭಿವೃದ್ಧಿಯೇ ಪ್ರಧಾನವಾಗಲಿ: ಶಿವಕುಮಾರ ಉದಾಸಿ

ಸಂಸದ ಶಿವಕುಮಾರ ಉದಾಸಿ ಸಲಹೆ
Last Updated 1 ಸೆಪ್ಟೆಂಬರ್ 2021, 16:33 IST
ಅಕ್ಷರ ಗಾತ್ರ

ಹಾನಗಲ್: ‘ಚುನಾವಣೆಯಲ್ಲಿ ಮಾತ್ರ ರಾಜಕೀಯ. ಬಳಿಕ ಎಲ್ಲವೂ ಅಭಿವೃದ್ಧಿ ಎಂಬ ಧ್ಯೇಯವನ್ನು ದಿ.ಸಿ.ಎಂ.ಉದಾಸಿ ಅವರಿಂದ ಕಲೆತುಕೊಂಡಿದ್ದೇನೆ. ಮತದಾರರು ಜಾಣರು, ರಾಜಕೀಯದಲ್ಲಿ ಯಾರು ಯೋಗ್ಯ ಎಂಬುದನ್ನು ಅವರು ಗ್ರಹಿಸುತ್ತಾರೆ’ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ತಾಲ್ಲೂಕಿನ ಮಂತಗಿ ಗ್ರಾಮದ ಕರಾರ್‌ ಶಾವಲಿ ದರ್ಗಾ ಆವರಣದಲ್ಲಿ ಬುಧವಾರ ವಕ್ತ್‌ ಬೋರ್ಡ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಭಕ್ತರ ಅನುಕೂಲಕ್ಕಾಗಿ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಲ್ಪಸಂಖ್ಯಾತರು ಅಧಿಕವಾಗಿರುವ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮೂಲ ಸೌಕರ್ಯದ ಕಾಮಗಾರಿಗಾಗಿ ₹ 20 ಕೋಟಿ ಅನುದಾನ ವ್ಯಯಿಸಲಾಗುತ್ತಿದೆ. ಅಲ್ಪಸಂಖ್ಯಾತರು ಎಲ್ಲ ರಂಗದಲ್ಲಿ ಪ್ರಗತಿ ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 15 ಅಂಶಗಳ ಕಾರ್ಯಕ್ರಮ ಜಾರಿಗೆ ತಂದಿದೆ’ ಎಂದರು.

ಮಂಗಳೂರಿನ ಮೌಲಾನಾ ಇಬ್ರಾಹಿಂ ಸಖಾಫಿ ಮಾತನಾಡಿ, ಎಲ್ಲ ಧರ್ಮದ ಸಂತರು, ಶರಣ ಜಗತ್ತಿಗೆ ಒಳ್ಳೆಯ ಸಂದೇಶಗಳನ್ನು ಸಾರಿದ್ದಾರೆ. ನಮ್ಮನ್ನು ನಾವು ಸುಧಾರಿಸಿಕೊಂಡಾಗ ಎಲ್ಲೆಡೆ ಅಭಿವೃದ್ಧಿ ಹರಡಿಕೊಳ್ಳಲು ಸಾಧ್ಯವಾಗಲಿದೆ ಎಂದರು.

ಮಂತಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹ್ಮದ್ಜಾಫರ್ ಹಿರೂರ, ಬಿಜೆಪಿ ಅಲ್ಪಸಂಖ್ಯಾತ ತಾಲ್ಲೂಕು ಘಟಕದ ಅಧ್ಯಕ್ಷ ಇರ್ಷಾದ್ಅಹ್ಮದ್ ಮತ್ತೇಖಾನ್, ಮುಖಂಡರಾದ ಅಬ್ದುಲ್‌ರೆಹಮಾನ್ ಸೌಧಾಗರ್, ಮಕ್ಬೂಲ್ಅಹ್ಮದ್ ತಂಡೂರ, ಅದ್ದೂಸಾಬ್ ಕುಂದಗೋಳ, ಮುನಾಫ್‌ಸಾಭ್ ಕೊಪ್ಪರಸಿಕೊಪ್ಪ, ಶಫಿವುಲ್ಲಾ ಅಂಗಡಿ, ಇಮಾಮ್‌ಸಾಬ್ ದೊಡ್ಡವಾಡ್, ಜಗದೀಶಗೌಡ ಪಾಟೀಲ, ಕಲ್ಯಾಣಕುಮಾರ ಶೆಟ್ಟರ, ಶಿವಲಿಂಗಪ್ಪ ತಲ್ಲೂರ, ರಾಜಣ್ಣ ಪಟ್ಟಣದ, ಮಾಲತೇಶ ಗಂಟೇರ, ಹನುಮಗೌಡ್ ಪಾಟೀಲ, ಅನೀಸ್ ಅಂಗಡಿ, ಆದೀಲ್‌ಷಾ ಯಳ್ಳೂರ, ರಫಿಕ್ ಮತ್ತೇಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT