ಹಾನಗಲ್: ಅಖಿಲ ಭಾರತ ವಕೀಲರ ಒಕ್ಕೂಟದ ಕರ್ನಾಟಕ ರಾಜ್ಯ ಸಮಿತಿಯ ನೇತೃತ್ವದಲ್ಲಿ ವಕೀಲರ ಬೇಡಿಕೆಗಳ ಈಡೇರಿಕೆಗಾಗಿ ವಕೀಲರು ಸಹಿ ಸಂಗ್ರಹಣೆ ನಡೆಸಿದರು. ಬಳಿಕ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.

ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆ (ಎಐಬಿಇ) ರದ್ದುಪಡಿಸಬೇಕು. ರಾಜ್ಯದ ಎಲ್ಲ ತಾಲ್ಲೂಕು ವಕೀಲರ ಸಂಘಗಳಿಗೆ ಪ್ರತಿ ವರ್ಷ ₹ 5 ಲಕ್ಷ, ಜಿಲ್ಲಾ ವಕೀಲರ ಸಂಘಕ್ಕೆ ₹10 ಲಕ್ಷ ಅನುದಾನ ಬಿಡುಗಡೆ ಮಾಡಬೇಕು. ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು. ವಕೀಲರ ಸಂರಕ್ಷಣೆ ಕಾಯ್ದೆ 2024ಕ್ಕೆ ತಿದ್ದುಪಡಿಯಾಗಬೇಕು. ವಕೀಲರಿಗೆ ವೈದ್ಯಕೀಯ, ಜೀವವಿಮಾ ಸೌಲಭ್ಯ ಒದಗಿಸಬೇಕು. ಎಲ್ಲ ನ್ಯಾಯಾಲಯಗಳಲ್ಲಿ ವಕೀಲರಿಗೆ ಚೆಂಬರ್ ಸ್ಥಾಪಿಸಬೇಕು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕಚೇರಿಯನ್ನು ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಲಾಗಿದೆ.

ವಕೀಲರಾದ ಕೆ.ಜಿ.ಸವದತ್ತಿ, ಬಸವರಾಜ ದೊಡ್ಡಮನಿ, ಎಂ.ಸಿ.ಮಹಾಂತಿನಮಠ, ಎಸ್.ಎಚ್.ಸವಣೂರ, ಅಣ್ಣಪ್ಪ ಚಿಕ್ಕಣ್ಣನವರ, ರಮೇಶ ತಳವಾರ, ಶಿವಾನಂದ ಹರಿಜನ, ವೀಣಾ ಬ್ಯಾತನಾಳ, ಸದಾಶಿವ ಹೂಗಾರ, ಕೆ.ಪಿ.ಬೋಸ್ಲೆ, ರಂಗನಾಥ ಅಕ್ಕಿವಳ್ಳಿ, ಸಂತೋಷ ಪವಾರ, ಸೋಮಶೇಖರ ಕೊತಂಬರಿ, ಜೆ.ಬಿ.ಕೊಂಡೋಜಿ, ಮಧು ಪಾಣಿಗಟ್ಟಿ, ಸಹದೇವ ಲಕ್ಮಾಪೂರ, ಸಂತೋಷ ಸುಣಗಾರ, ರಾಘವೇಂದ್ರ ಗುರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.