ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಹಿರಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಸಬಾವಿಯಲ್ಲಿ ಅಲೆಮಾರಿ ಸಿಂಧೋಳು ಸಮುದಾಯದವರು ವಾಸವಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಅಲ್ಲಿಯ ಅವ್ಯವಸ್ಥೆ ಕಂಡು ಮರುಗಿದರು. ಸಮುದಾಯದವರಿಗೆ ಸರ್ಕಾರದ ಸೌಲಭ್ಯ ತಲುಪಿಸಲು ವಿಫಲರಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪ್ರವಾಸದಲ್ಲಿರುವ ನಾಗಲಕ್ಷ್ಮಿ ಅವರು ನಿಗದಿಯಂತೆ ಹಂಸಬಾವಿಗೆ ಭೇಟಿ ನೀಡಿದರು. ಸಿಂಧೋಳು ಸಮುದಾಯದ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದರು. ಸ್ಥಳದಲ್ಲಿ ಕೆಸರು ಹೆಚ್ಚಾಗಿದ್ದರಿಂದ ಸಮುದಾಯದ ಬಾಲಕಿಯೊಬ್ಬಳು ಅಧ್ಯಕ್ಷರ ಕೈ ಹಿಡಿದು ಮೆಲ್ಲನೆ ಮುಂದಕ್ಕೆ ಕರೆದೊಯ್ದು ವಾಸ್ತವದ ಚಿತ್ರಣ ತೋರಿಸಿದಳು.

‘ಸಮುದಾಯದವರು ವಾಸವಿರುವ ಜಾಗ, ಕೆರೆ ಪ್ರದೇಶದಂತಿದೆ. ಕೇಸರಿನಲ್ಲೇ ಜೋಪಡಿ ಕಟ್ಟಿಕೊಂಡು ವಾಸವಿದ್ದು, ವೃದ್ಧರು ಹಾಗೂ ಮಕ್ಕಳಿಗೆ ಜೀವ ಭಯವಿದೆ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ನಮ್ಮಲ್ಲಿ ಇಂದಿಗೂ ಬಯಲು ಶೌಚವೇ ಗತಿ’ ಎಂದು ಮಹಿಳೆಯರು ಅಳಲು ತೋಡಿಕೊಂಡರು.

‘ವಾಸಕ್ಕೆ ಯೋಗ್ಯವಾದ ಮನೆಗಳಿಲ್ಲ. ಶಾಶ್ವತ ಸೂರು ಸಿಗುವ ಭರವಸೆಯೇ ಹೋಗಿದೆ. ಮಳೆ ಬಂದರೆ, ಜೋಪಡಿ ಇರುವ ಸ್ಥಳದಲ್ಲಿ ಓಡಾಡಲು ಆಗುವುದಿಲ್ಲ. ಇಲ್ಲಿಯ ಗರ್ಭಿಣಿಯವರಿಗೆ ಮಾತೃವಂದನ ನೋಂದಣಿ ಮಾಡಿಲ್ಲ. ಅವರಿಗೆ ಲಸಿಕೆಯನ್ನೂ ಹಾಕಿಸಿಲ್ಲ. ಅರ್ಹರಿಗೆ ವಿಧವಾ ವೇತನ, ಏಕ ಪೋಷಕ ಮಕ್ಕಳಿಗೆ ಪ್ರಾಯೋಜಕತ್ವ ಯೋಜನೆಯ ಸೌಲಭ್ಯವೂ ಸಿಕ್ಕಿಲ್ಲ’ ಎಂದು ಮಹಿಳೆಯರು ಹೇಳಿದರು.

ದಾಖಲೆ ನೀಡಲು ಲಂಚ; ‘ನಮ್ಮ ಪ್ರದೇಶಕ್ಕೆ ಯಾವ ಅಧಿಕಾರಿಯೂ ಬರುವುದಿಲ್ಲ. ನಮಗೆ ಯಾವುದೇ ಜಾತಿ ಪ್ರಮಾಣ ಪತ್ರವೂ ಇಲ್ಲ. ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯನ್ನೂ ನೀಡುತ್ತಿಲ್ಲ. ಅವುಗಳನ್ನು ಮಾಡಿಸಲು ಸಂಬಂಧಪಟ್ಟ ಕಚೇರಿಯ ಕೆಲವರು ಲಂಚ ಕೇಳುತ್ತಿದ್ದಾರೆ’ ಎಂದು ಮಹಿಳೆಯರು ದೂರಿದರು.

‘ಆಧಾರ್ ಕಾರ್ಡ್ ಮಾಡಿಸಲು ₹ 9,000, ವಿಧವಾ ವೇತನ ಮಾಡಿಸಲು ₹ 20,000 ಲಂಚ ಕೇಳುತ್ತಾರೆ. ಒಂದು ಹೊತ್ತಿನ ಊಟಕ್ಕೂ ನಿತ್ಯವೂ ದುಡಿಯುತ್ತಿರುವ ನಾವು, ಎಲ್ಲಿಂದ ಲಂಚ ಕೊಡುವುದು. ಆಧಾರ್ ಕಾರ್ಡ್ ಇಲ್ಲದಿದ್ದರಿಂದ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುತ್ತಿಲ್ಲ. ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದರು.

‘ಶುದ್ಧ ಕುಡಿಯುವ ನೀರು ನೀಡುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದ್ದೇವೆ. ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೂಡಲೇ ನಮ್ಮ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಸಬೇಕು. ಜಾತಿ ಪ್ರಮಾಣ ಪತ್ರ ಮಾಡಿಸಿಕೊಡಬೇಕು’ ಎಂದು ಕೋರಿದರು.

ನೋಟಿಸ್ ನೀಡಲು ಸೂಚನೆ: ಮಹಿಳೆಯರ ಅಳಲು ಆಲಿಸಿದ ನಾಗಲಕ್ಷ್ಮಿ, ‘ಅಲೆಮಾರಿ, ಅರೇ ಅಲೆಮಾರಿ ಜನರಿಗೆ ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಅಧಿಕಾರಿಗಳಿಗೆ ತಿಳಿಹೇಳಿದರು.

‘ಸಿಂಧೋಳು ಸಮುದಾಯದ ಜನರಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಯಾವುದೇ ಮಹಿಳೆ ಕಚೇರಿಗೆ ಬಂದರೆ, ಅವರಿಗೆ ಸರಿಯಾಗಿ ಸ್ಪಂದಿಸಬೇಕು. ಅವರ ಸಮಸ್ಯೆ ಆಲಿಸಿ ಅದನ್ನು ಪರಿಹರಿಸಲು ಜವಾಬ್ದಾರಿಯಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಯಾರೂ ಸರಿಯಾಗಿ ಕೆಲಸ ಮಾಡುವುದಿಲ್ಲವೋ ಅವರಿಗೆ ನೋಟಿಸ್ ನೀಡಿ ಎಚ್ಚರಿಕೆ ಕೊಡಬೇಕು . ತಾಲ್ಲೂಕು ಆಡಳಿತದಿಂದ ಸಿಂಧೋಳು ಸಮುದಾಯದವರ ಸಮಸ್ಯೆ ಬಗೆಹರಿಸಲು ಆಗದಿದ್ದರೆ, ಇಲ್ಲಿಯ ಅವ್ಯವಸ್ಥೆ ಬಗ್ಗೆ ರಾಜ್ಯ ಸರ್ಕಾರಕ್ಕೆ ನಾನೇ ವರದಿ ಸಲ್ಲಿಸುತ್ತೇನೆ’ ಎಂದು ನಾಗಲಕ್ಷ್ಮಿ ಅವರು ತಹಶೀಲ್ದಾರ್ ಅವರಿಗೆ ತಿಳಿಸಿದರು.

ತಾಲ್ಲೂಕು ಆಸ್ಪತ್ರೆ: ನೂರೆಂಟು ಸಮಸ್ಯೆ’

ಹಿರೇಕೆರೂರು: ಇಲ್ಲಿಯ ತಾಲ್ಲೂಕು ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಬುಧವಾರ ಭೇಟಿ ನೀಡಿ ಮಹಿಳಾ ರೋಗಿಗಳು ಹಾಗೂ ಮಹಿಳಾ ಸಿಬ್ಬಂದಿಯ ಅಹವಾಲು ಆಲಿಸಿದರು. ‘ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿಲ್ಲ. ವೈದ್ಯರು ಮತ್ತು ಸಿಬ್ಬಂದಿ ರೋಗಿಗಳನ್ನು ಕಾಳಜಿಯಿಂದ ನೋಡಿಕೊಳ್ಳುವುದಿಲ್ಲ. ಶೌಚಾಲಯ ನಿರ್ವಹಣೆ ಶೋಚನೀಯವಾಗಿದ್ದು ನಿತ್ಯವೂ ದುರ್ವಾಸನೆ ಬರುತ್ತದೆ’ ಎಂದು ರೋಗಿಗಳು ಅಳಲು ತೋಡಿಕೊಂಡರು ‘ಆಸ್ಪತ್ರೆಯಲ್ಲಿ ಬಿಸಿ ನೀರಿಲ್ಲ. ಸ್ವಚ್ಛತೆ ಕೊರತೆಯೂ ಇದೆ. ಸಮರ್ಪಕವಾಗಿ ಔಷಧಿ ದೊರೆಯುವುದಿಲ್ಲ. ಸ್ಕ್ಯಾನಿಂಗ್ ವ್ಯವಸ್ಥೆಯೂ ಇಲ್ಲ. ರಾತ್ರಿ ಸಮಯದಲ್ಲಿ ವೈದ್ಯರು ಇರುವುದಿಲ್ಲ. ರೋಗಿಗಳಿಗೆ ಸಣ್ಣ ಸಮಸ್ಯೆಯಿದ್ದರೂ ಶಿವಮೋಗ್ಗ ಹಾಗೂ ಹಾವೇರಿ ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದಾರೆ. 108 ಆಂಬುಲೆನ್ಸ್ ಸೌಲಭ್ಯವೂ ಇಲ್ಲ’ ಎಂದು ಸಮಸ್ಯೆ ಹೇಳಿಕೊಂಡರು. ‘ಐಸಿಯು ಇದ್ದರೂ ಇಲ್ಲದಂಥ ಸ್ಥಿತಿಯಿದೆ. ರಕ್ತ ಮೂತ್ರದ ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆಯಿಲ್ಲ. ಹೊರಗಡೆ ಪರೀಕ್ಷೆಗೆ ಬರೆದುಕೊಡುತ್ತಾರೆ. ವೈದ್ಯರು ಹಾಗೂ ಸಿಬ್ಬಂದಿ ನಿಗದಿತ ಸಮಯದಲ್ಲಿ ಆಸ್ಪತ್ರೆಯಲ್ಲಿ ಇರುವುದಿಲ್ಲ’ ಎಂದು ಜನರು ದೂರಿದರು. ಆಸ್ಪತ್ರೆಯಲ್ಲಿ ಕೆಲಸ ಮಾಡುವ ಶುಶ್ರೂಷಕಿ ಹಾಗೂ ಡಿ ಗ್ರೂಪ್ ನೌಕರರು ಸಹ ತಮ್ಮ ವೇತನ ಪಾವತಿ ವಿಳಂಬವಾಗುತ್ತಿರುವ ಬಗ್ಗೆ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.