ಗುರುವಾರ , ಅಕ್ಟೋಬರ್ 22, 2020
23 °C

‘ಆರ್‌ಪಿಐನಿಂದ ಸಾಮಾಜಿಕ ನ್ಯಾಯ ಸಾಧ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಅಲ್ಪ ಸಂಖ್ಯಾತರಿಗೆ, ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಹುಸಿಯಾಗಿದೆ. ದೇಶಕ್ಕೆ ಸಂವಿಧಾನ ನೀಡಿದ ಡಾ. ಅಂಬೇಡ್ಕರ್ ಮಾರ್ಗದರ್ಶನದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಮಾತ್ರ ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ’ ಎಂದು ಆರ್‌ಪಿಐ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ ವೆಂಕಟಸ್ವಾಮಿ ಹೇಳಿದರು.

ನಗರದ ಖಾಸಗಿ ಹೊಟೆಲಿನಲ್ಲಿ ಆಯೋಜಿಸಿದ್ದ ಆರ್‌ಪಿಐ ಪಕ್ಷದ ಜಿಲ್ಲಾ ಮಟ್ಟದ ಕಾರ್ಯಕರ್ತರು ಹಾಗೂ ಸಮತಾ ಸೈನಿಕ ದಳ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಪಕ್ಷವನ್ನು ಬೂತ್ ಮಟ್ಟದಿಂದ ಭದ್ರವಾಗಿ ಕಟ್ಟಬೇಕಾಗಿದೆ ಎಂದರು.

ಆರ್‌ಪಿಐ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಐ ರಾಯಚೂರ ಮಾತನಾಡಿದರು. ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಎನ್.ಎನ್ ಗಾಳೆಮ್ಮನವರ ಹಾಗೂ ಬಸವರಾಜ ಹಾದಿಮನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಲಘುಮಯ್, ಹೋರಾಟಗಾರ ಚಿದಾನಂದ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷರಾದ ಧರ್ಮಣ್ಣ ಕಿವುಡನವರ, ಬಸವರಾಜ ಹಾಳಕೇರಿ, ಯಮನಪ್ಪ ಲಮಾಣಿ, ನೀಲಪ್ಪ ಮಾದರ, ತಿಮ್ಮಣ್ಣ ಹಿರೇಮನಿ, ನಿಂಗಪ್ಪ ರಾಟಿ, ಸಿದ್ದಪ್ಪ ತಳವಾರ, ನಾಗಸೇನಾ ಮೈರ್ಯ, ದುರಗಪ್ಪ ಮಾಳಮ್ಮನವರ, ಸಂತೋಷ ಕನ್ನಮ್ಮನವರ ಹಾಗೂ ನೂತನವಾಗಿ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.