ಬ್ಯಾಡಗಿ: ಸರ್ಕಾರಿ ಉದ್ಯೋಗದಲ್ಲಿ ಶೇ 2 ರಷ್ಟು ಮೀಸಲಾತಿ ಘೋಷಣೆಯಿಂದ ಕ್ರೀಡಾಪಟುಗಳಿಗೆ ಬದುಕಿನ ಭದ್ರತೆಯ ಜೊತೆಗೆ ಆತ್ವವಿಶ್ವಾಸವನ್ನು ಹೆಚ್ಚಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ ಹೇಳಿದರು.

ಇಲ್ಲಿಯ ಎಸ್ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ತಾ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಭಾನುವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ರೀಡೆ ಒಂದು ಉದ್ಯಮವಾಗಿ ಬೆಳೆಯುತ್ತಿದೆ. ಸಾಕಷ್ಟು ಉದ್ಯಮಿಗಳು ಕ್ರೀಡಾಪಟುಗಳ ಮೇಲೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಕ್ರೀಡಾಪಟುಗಳು ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ ಎಂದರು.

ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿ.ಜಿ.ಚಕ್ರಸಾಲಿ ಮಾತನಾಡಿದರು. ಕೊಕ್ಕೊದಲ್ಲಿ ಬ್ಯಾಡಗಿಯ ಸೈನ್ ಸ್ಪೋರ್ಟ್ಸ್ ಕ್ಲಬ್ ಪ್ರಥಮ, ಇಂಡಿಯನ್ ಸ್ಪೋರ್ಟ್ಸ್ ಕ್ಲಬ್ ತರೇದಹಳ್ಳಿ ಪಡೆದುಕೊಂಡಿತು.

ಈ ವೇಳೆ ಶಿವಾನಂದ ಯಮನಕ್ಕನವರ, ಕೆ.ಎಸ್.ಪಮ್ಮಾರ, ಕಬಡ್ಡಿ ಕೋಚ್ ಮಂಜುಳಾ ಭಜಂತ್ರಿ, ಕೊಕ್ಕೊ ರಾಷ್ಟ್ರಮಟ್ಟದ ತೀರ್ಪುಗಾರ ಜಿತೇಂದ್ರ ಸುಣಗಾರ, ದೈಹಿಕ ಶಿಕ್ಷಣ ಶಿಕ್ಷಕ ಎ.ಟಿ.ಪೀಠದ, ಎಸ್.ಯು.ಮಾಸ್ತಿ, ಎಂ.ಎಸ್.ಕರ್ಜಗಿ, ಬಸವರಾಜ ಬಸಪ್ಪನವರ, ಎಸ್.ಆರ್.ಬಡ್ಡಿ, ವಿ.ಡಿ.ಅಕ್ಕೂರ, ಮಲ್ಲಿಕಾರ್ಜುನ ಕೋಡಿಹಳ್ಳಿ ಮುಂತಾದವರು ಪಾಲ್ಗೊಂಡಿದ್ದರು.

ಅಂತರರಾಷ್ಟ್ರೀಯ ಕ್ರೀಡಾಪಟುಗಳಾಗಿ: ಪಠಾಣ ಹಾರೈಕೆ

ತಡಸ: ಮಕ್ಕಳು ಭಾವಿ ಭವಿಷ್ಯದ ಪ್ರಜೆಗಳು, ಮನಸ್ಸು ಮಾಡಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡು ದೊಡ್ಡ ಕನಸು ಕಾಣಬೇಕು, ಸತತ ಪ್ರಯತ್ನದಿಂದ ಸೋಲು ಗೆಲುವು ಸಮವಾಗಿ ಸ್ವೀಕರಿಸಬೇಕು ಎಂದು ಶಾಸಕ ಯಾಶೀರ್ಅಹ್ಮದಖಾನ್ ಪಠಾಣ ಹೇಳಿದರು.

ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರಕ್ಕೆ 3 ಕೆಪಿಎಸ್ಸಿ ಶಾಲೆ ಮಂಜೂರು ಮಾಡಲಾಗಿದೆ. ಕೋಣನಕೇರಿ, ಹಿರೇಬೆಂಡಿಗೇರಿ, ಮಾವೂರಗಳಲ್ಲಿ ಶಾಲೆಗೆ ಅನುಮತಿ ನೀಡಲಾಗಿದೆ. ಶಿಗ್ಗಾವಿ ಹಾಗೂ ಹುರಳಿಕೊಪ್ಪಿಗೆ ನೀಡುವದಾಗಿ ಭರವಸೆ ನೀಡಿದ್ದಾರೆ ಎಂದರು.

ತಡಸ ಗ್ರಾಮಕ್ಕೂ ಮೌಲಾನ್ ಆಜಾದ ಶಾಲೆ ಮಂಜೂರಾಗಿದೆ. ಸ್ಥಳ ಪರಿಶೀಲನೆ ನಡೆದಿದೆ. ಶಿಗ್ಗಾವಿ–ಸವಣೂರ ತಾಲ್ಲೂಕು ಕ್ರೀಡಾಂಗಣಕ್ಕೆ ₹1 ಕೋಟಿ ಬಿಡುಗಡೆ ಮಾಡಲಾಗಿದೆ. ಗ್ರಾಮದ ಪಿಯು ಕಾಲೇಜಿಗೆ ಕಾಂಪೌಂಡ್ ಹಾಗೂ ಕ್ರೀಡಾ ಸಾಮಗ್ರಿ ನೀಡಲಾಗುವುದು ಎಂದರು.

ಅಂಕಲಕೋಟಿ ಪಿಯು ಕಾಲೇಜಿನ ಪ್ರಾಚಾರ್ಯ ವಾಲಿ ಗುರೂಜಿ ಮಾತನಾಡಿದರು. ತಡಸ ಪಂಚಾಯಿತಿ ಅಧ್ಯಕ್ಷ ಗೌಸೀಯಾ ಹುಬ್ಬಳ್ಳಿ, ಉಪಾಧ್ಯಕ್ಷ ಪ್ರಭು ನಂಜಪ್ಪನವರ, ಕಾಲೇಜು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಮೆಹಬೂಬಸಾಬ ಇಂಗಳಗಿ, ಸಿ.ಎಸ್.ಪಾಟೀಲ್, ಪುರಸಭೆ ಸದಸ್ಯೆ ವಸಂತ ಬಾಗೂರ, ಅಬ್ದುಲ್ಮಜೀದ ಕೊಲ್ಲಾಪುರ, ಬಾಬಾರ ಬೂವಾಜೀ , ಸಿಖಂಧರ ಪಲ್ಲೇದ, ಆನಂದ ಲಮಾಣಿ, ಮಲ್ಲೇಶಪ್ಪ ದುಂಡಪ್ಪನವರ, ಪ್ರಾಚಾರ್ಯ ಪಾರ್ವತಿ ಜೋಶಿ ಇತರರು ಇದ್ದರು.

ಸರ್ಕಾರಗಳು ಕ್ರೀಡೆ ಮತ್ತು ಕ್ರೀಡಾಂಗಣ ನಿರ್ಮಾಣಕ್ಕೆ ಸಾಕಷ್ಟು ಅನುದಾನ ನೀಡಿದ್ದು ಅವುಗಳನ್ನು ಯುವಕರು ಸದ್ಬಳಕೆ ಮಾಡಿಕೊಳ್ಳಬೇಕು
ಸಿ.ಜಿ.ಚಕ್ರಸಾಲ ಅಧ್ಯಕ್ಷ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್

ಬಾಲಕಿಯರ ಸಾಧನೆ

ತಿಳವಳ್ಳಿ: ಕೂಸನೂರಿನಲ್ಲಿ ಇತ್ತಿಚೇಗೆ ನಡೆದ ಕೂಸನೂರು ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಮಾರಿಕಾಂಬಾ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. 100 ಮೀಟರ್ ಓಟದ ಸ್ಪರ್ಧೆಯಲ್ಲಿ ಅರ್ಪಣಾ ಹಿತ್ತಲಮನಿ ದ್ವಿತೀಯ 200 ಮೀಟರ್ ಓಟದಲ್ಲಿ ಅರ್ಪಣಾ ಹಿತ್ತಲಮನಿ ದ್ವಿತೀಯ ಗುಂಡು ಎಸೆತದಲ್ಲಿ ರೇಷ್ಮಾ ಚಿಕ್ಕಣ್ಣನವರ ಪ್ರಥಮ ಉದ್ದ ಜಿಗಿತ ಸ್ಪರ್ಧೆಯಲ್ಲಿ ಸುಮತಿ ಲಂಕೇರ ದ್ವಿತೀಯ ಜಾವಲಿನ್ ಎಸೆತದಲ್ಲಿ ದೀಪಾ ಹರದವರ ಪ್ರಥಮ ಸೃಷ್ಠಿ ಕಾಡಪ್ಪನವರ ತೃತೀಯ ಚಕ್ರ ಎಸೆತ ರೇಶ್ಮಾ ಚಿಕ್ಕಣ್ಣನವರ ಪ್ರಥಮ ದೀಪಾ ಈಳಿಗೇರ ತೃತೀಯ 3000 ಮೀಟರ್ ಓಟದಲ್ಲಿ ಸಂಗೀತಾ ಮಡಿವಾಳರ ತೃತೀಯ ತ್ರಿವಿಧ ಜಿಗಿತದಲ್ಲಿ ಸುಮತಿ ಲಂಕೇರ ದ್ವಿತೀಯ 3000ಮೀಟರ್ ನಡಿಗೆಯಲ್ಲಿ ಅನನ್ಯಾ ನಾಗರವಳ್ಳಿ ದ್ವಿತೀಯ ಗುಂಪು ಆಟಗಳಲ್ಲಿ ವಾಲಿಬಾಲ್ ಪ್ರಥಮ ಥ್ರೋ ಬಾಲ್ ಪ್ರಥಮ ಕಬ್ಬಡ್ಡಿ ದ್ವಿತೀಯ ಸ್ಥಾನ ಹಾಗೂ ಖೋಖೋ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ರೇಷ್ಮಾ ಚಿಕ್ಕಣ್ಣನವರ ವೈಯಕ್ತಿಕ ವೀರಾಗ್ರಣಿ ಪಡೆದಿದ್ದಾರೆ. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಲಮಾಣಿ ಮುಖ್ಯಶಿಕ್ಷಕ ಬಸವರಾಜ ಕುರಿಯವರ ಶಿಕ್ಷಕ ಪ್ರಕಾಶ ಲಮಾಣಿ ತಾರಕೇಶ ಮಠದ ಶಾಂತಪ್ಪ ಲಂಕೇರ ವೀರಭದ್ರಪ್ಪ.ಕೆ ಜಲಾನಿ ಹೊಂಕಣ ರಶ್ಮಿ ಕುಲಕರ್ಣಿ ಚಂದ್ರಕಲಾ ಅಂಬಕ್ಕಿ ಗುತ್ತೇಪ್ಪ ಮಾಯಕ್ಕನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.