ಹಾವೇರಿ: ‘ರಾಜ್ಯದ ಕೆಲ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಕಟಾವು ತ್ಯಾಜ್ಯದ ಹೆಸರಿನಲ್ಲಿ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಆರೋಪದ ಬದಲು ನಿಖರವಾಗಿ ದೂರು ನೀಡಿದಲ್ಲಿ ₹ 5 ಲಕ್ಷ ಬಹುಮಾನ ನೀಡಲಾಗುವುದು’ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಪದ ಬಗ್ಗೆ ಬಾಯಿ ಮಾತಿನಲ್ಲಿ ಹೇಳಿ ಸುಮ್ಮನಾಗಬಾರದು. ದೂರು ನೀಡಲು ರೈತರು ಮುಂದೆ ಬರಬೇಕು’ ಎಂದರು.

‘ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ಕಬ್ಬುಅರೆಯುವಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಕಬ್ಬು ಅರೆಯಲು ಹಿಂದೆ 6 ತಿಂಗಳು ಸಮಯ ಬೇಕಾಗುತಿತ್ತು. ಈಗ ಮೂರೇ ತಿಂಗಳಲ್ಲಿ ಕಬ್ಬು ಖಾಲಿ ಆಗುತ್ತಿದೆ. ನಿಯಮಬಾಹಿರ ಪ್ರಕರಣಗಳ ಬಗ್ಗೆ ದೂರು ನೀಡಿದ್ದಲ್ಲಿ, ತನಿಖೆ ನಡೆಸುತ್ತೇವೆ. ಆರೋಪ ಸಾಬೀತಾದಲ್ಲಿ, ಕಾರ್ಖಾನೆಯ ಪರವಾನಗಿಯನ್ನು ರದ್ದುಪಡಿಸುತ್ತೇವೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.