ಮಂಗಳವಾರ, ಡಿಸೆಂಬರ್ 7, 2021
20 °C
ತಿಳವಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ

ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ: ಸಚಿವ ಸುನೀಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಳವಳ್ಳಿ: ಸಿ.ಎಂ. ಉದಾಸಿ ಅವರು ಹಾನಗಲ್ ಮತ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳು ಹಾಗೂ ನೀರಾವರಿಗೆ ಅವರು ನೀಡಿದ ಕೊಡುಗೆಯಿಂದ ಇಲ್ಲಿಯ ರೈತರು ಸಮೃದ್ಧವಾದ ಬೆಳೆ ಬೆಳೆಯಲು ಅನೂಕಲವಾಗಿದೆ, ಹಾಗಾಗಿ ಉದಾಸಿ ಅವರ ಋಣ ತೀರಿಸಲು ಈ ಚುನಾವಣೆಯಲ್ಲಿ ಶಿವರಾಜ ಸಜ್ಜನ ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ಇಲ್ಲಿಯ ಅಗಸರ ಓಣಿಯಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರವಾಗಿ ಮತಯಾಚಿಸಿ ಮಾತನಾಡಿದರು. ಹಾವೇರಿ ಜಿಲ್ಲೆಯವರೆ ಆದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿರುವುದರಿಂದ ಈ ಚುನಾವಣೆಯಲ್ಲಿ ಶಿವರಾಜ ಸಜ್ಜನರನ್ನು ಗೆಲ್ಲಿಸಿದರೆ ಅವರು ಸರ್ಕಾರದಿಂದ ಈ ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ತಂದು ಅಭಿವೃದ್ಧಿ ಪರ್ವ ಮುಂದುವರಿಸುತ್ತಾರೆ ಎಂದರು.

ಕಾಂಗ್ರೆಸ್ ನಾಯಕರು ಎಷ್ಟೇ ಹಾರಾಡಿದರೂ ಅವರ ಆಟ ನಡೆಯುವುದಿಲ್ಲ. ಹಾನಗಲ್‌ನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದು, ನಮ್ಮ ಸರ್ಕಾರದ ವಿಜಯಯಾತ್ರೆ ಮುಂದುವರೆಯಲಿದೆ ಎಂದರು.

ಚನ್ನಗಿರಿ ಶಾಸಕ ವಿರುಪಾಕ್ಷಪ್ಪ ಮಾಡಾಳ ಮಾತನಾಡಿ, ಬಿಜೆಪಿ ಶಿಸ್ತಿನ ಪಕ್ಷ. ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಇದೇ ಜಿಲ್ಲೆಯವರಾದ ಬಸವರಾಜ ಬೊಮ್ಮಾಯಿ ಅವರೆ ಮುಖ್ಯಮಂತ್ರಿಗಳಾಗಿದ್ದಾರೆ. ಅವರ ನೇತೃತ್ವದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡಲಿದೆ. ಕಾಂಗ್ರೆಸ್ ಬರೀ ಅಪಪ್ರಚಾರದಲ್ಲಿ ತೊಡಗಿದೆ. ಅದಕ್ಕೆ ಮತದಾರರು ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಉದಾಸಿ ಅವರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ಶಿವರಾಜ ಸಜ್ಜನರ ಗೆಲುವು ಖಚಿತ ಎಂದರು.

ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಶಿವಲಿಂಗಪ್ಪ ತಲ್ಲೂರ, ಗಣೇಶಪ್ಪ ಕೊಡಿಹಳ್ಳಿ, ಹನುಂತಪ್ಪ ಶಿರಾಳಕೊಪ್ಪ, ಹೆಚ್.ಎಸ್.ಕಲ್ಲೇರ, ರಮೇಶ ಉಪ್ಪಾರ, ವಿನಾಯಕ ಮಡಿವಾಳರ, ಕೆಂಚಪ್ಪ ಕನಕಣ್ಣನವರ, ವಿರೇಶ ಮಡಿವಾಳರ, ನಾಗರಾಜ ಮಡಿವಾಳರ, ನಾಗರಾಜ ದೋಣಿಕಲ್, ಮಹೇಶ ಬಣಕಾರ, ಶ್ರೀಕಾಂತ ಮಡಿವಾಳರ, ಉಮೇಶ ಮಡಿವಾಳರ, ಕಿಟ್ಟಿ ಮಡಿವಾಳ, ಕಿಟ್ಟಣ್ಣ ಮಡಿವಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು