ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಭಾಷಾ ಉಪನ್ಯಾಸಕ ಅಮಾನತು

Published 3 ಜುಲೈ 2024, 14:13 IST
Last Updated 3 ಜುಲೈ 2024, 14:13 IST
ಅಕ್ಷರ ಗಾತ್ರ

ಸವಣೂರು: ಪಟ್ಟಣದ ಸರ್ಕಾರಿ ಮಜೀದ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಭಾಷಾ ಉಪನ್ಯಾಸಕ ರಮೇಶ ತಳವಾರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಮಹಿಳಾ ಪ್ರಾಚಾರ್ಯರಿಗೆ ಆಡಳಿತಾತ್ಮಕವಾಗಿ ತೊಂದರೆ ನೀಡಿರುವುದು, ವೇಳೆಗೆ ಸರಿಯಾಗಿ ಕಾಲೇಜಿಗೆ ಹಾಜರಾಗದಿರುವುದು, ಪರೀಕ್ಷೆ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಂದಲೇ ಮೌಲ್ಯಮಾಪನ ಮಾಡಿಸುವುದು, ಪ್ರಶ್ನಿಸಿದರೆ ಅಸಂವಿಧಾನಿಕ ಶಬ್ದಗಳನ್ನು ಬಳಸಿ ಅನುಚಿತವಾಗಿ ವರ್ತಿಸುವುದು, ಸಭಾ ಗೌರವ ಮತ್ತು ನಿರ್ಣಯ ಪಾಲಿಸದೇ ಇರುವುದು, ನೋಟಿಸ್ ನೀಡಿದರೆ ತಿರಸ್ಕರಿಸಿ ಉದ್ದಟತನ ತೋರಿಸುವುದು ಸೇರಿದಂತೆ ಹಲವು ಕಾರಣಗಳಿಂದ ಅಮಾನತುಗೊಳಿಸಲಾಗಿದೆ.

ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ಸಿವಿಲ್ ಸೇವಾ ನಿಯಮಗಳು 1957ರ ನಿಯಮ 10ರನ್ವಯ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT