ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಶೇಷಗಿರಿ ಕಲಾತಂಡ ರಂಗಭೂಮಿಗೆ ಮಾದರಿ’

Published : 29 ಆಗಸ್ಟ್ 2024, 14:55 IST
Last Updated : 29 ಆಗಸ್ಟ್ 2024, 14:55 IST
ಫಾಲೋ ಮಾಡಿ
Comments

ಅಕ್ಕಿಆಲೂರು: ‘ಶೇಷಗಿರಿಯ ಕಲಾತಂಡ ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಪರಿಕಲ್ಪನೆಗೆ ಒಂದು ದೊಡ್ಡ ಮಾದರಿ. ಪ್ರತಿಭೆಗಳು ಹುಟ್ಟುವುದೇ ಹಳ್ಳಿಗಳಲ್ಲಿ. ಇಂದು ನಾಡಿನ ಅನೇಕ ಪ್ರತಿಭಾ ಶಾಲಿಗಳು ಬಂದದ್ದು ಗ್ರಾಮೀಣ ಮೂಲದಿಂದಲೇ’ ಎಂದು ಧಾರವಾಡ ರಂಗಾಯಣದ ಅಧ್ಯಕ್ಷ ರಾಜು ತಾಳಿಕೋಟಿ ಹೇಳಿದರು.

ಹಾನಗಲ್ ತಾಲ್ಲೂಕಿನ ಶೇಷಗಿರಿಯಲ್ಲಿ ನವೀಕರಣಗೊಳ್ಳುತ್ತಿರುವ ದಿ.ಸಿ.ಎಂ.ಉದಾಸಿ ಕಲಾಕ್ಷೇತ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, 

ಶೇಷಗಿರಿ ಕಲಾ ತಂಡದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರತಿಭೆಗಳನ್ನು ಬೆಳಗಿಸಲು ಶೇಷಗಿರಿ ಸರಿಯಾದ ಸ್ಥಳ. ಶೇಷಗಿರಿ ಕಲಾ ತಂಡ ಆಧುನಿಕತೆಗೆ ಒಡ್ಡಿಕೊಂಡು ಮುನ್ನಡೆಯುತ್ತದೆ. ಇಂತಹ ಹಳ್ಳಿಯಲ್ಲಿ ಇಂತದ್ದೊಂದು ರಂಗ ತರಬೇತಿ ಪ್ರದರ್ಶನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ರಂಗಾಯಣ ಇಂತಹ ಪ್ರತಿಭೆಗಳನ್ನು ಹುಡುಕುತ್ತಿದೆ’ ಎಂದರು.

ರಂಗಾಯಣದ ಆಡಳತಾಧಿಕಾರಿ ಶಶಿಕಲಾ ಹುಡೇದ ಮಾತನಾಡಿ, ‘ಕಳೆದ 4 ದಶಕಗಳಿಂದ ಹೆಮ್ಮರವಾಗಿ ಬೆಳೆದಿರುವ ಶೇಷಗಿರಿ ಗಜಾನನ ಯುವಕ ಮಂಡಳದ ಕಲಾತಂಡ ನವೀಕರಣಗೊಂಡ ಕಲಾಮಂದಿರದಲ್ಲಿ ಇನ್ನಷ್ಟು ರಂಗ ಚಟುವಟಿಕೆಗಳನ್ನು ನಡೆಸಲಿ’ ಎಂದು ಹಾರೈಸಿದರು.

ಸಾಹಿತಿ ಸತೀಶ ಕುಲಕರ್ಣಿ, ಕಲಾವಿದರಾದ ಮಧುಕರ ಹರಿಜನ, ಬಾಲಚಂದ್ರ ಅಂಬಿಗೇರ, ಹಾವೇರಿಯ ಡಾ.ಅಂಬಿಕಾ ಹಂಚಾಟೆ, ಮಂಜುನಾಥ ಸಣ್ಣಿಂಗಮ್ಮನವರ, ಶೇಷಗಿರಿ ಕಲಾತಂಡದ ಪ್ರಭು ಗುರಪ್ಪನವರ, ಶಂಕರಣ್ಣ ಗುರಪ್ಪನವರ, ನಾಗರಾಜ ಧಾರೇಶ್ವರ, ಸಿದ್ದಪ್ಪ ರೊಟ್ಟಿ, ಶಿವಮೂರ್ತಿ ಹುಣಸಿಹಳ್ಳಿ, ಸಿದ್ದು ಕೊಂಡೋಜಿ, ಸಣ್ಣಪ್ಪ ಗೊರವರ, ಶಂಭು ಬಣಕಾರ, ಸಿದ್ದಪ್ಪ ಅಂಬಿಗೇರ, ಮಹಾಂತೇಶ ರೊಟ್ಟಿ, ಅರುಣ ಕೊಂಡೋಜಿ, ನಿಂಗಪ್ಪ ಹರಿಜನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT