ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯಲು ನೀರು ಕೊಡದಿರುವ ದರಿದ್ರ ಸರ್ಕಾರ ರಾಜ್ಯದಲ್ಲಿದೆ: ಬಸವರಾಜ ಬೊಮ್ಮಾಯಿ

Published 15 ಮಾರ್ಚ್ 2024, 13:07 IST
Last Updated 15 ಮಾರ್ಚ್ 2024, 13:07 IST
ಅಕ್ಷರ ಗಾತ್ರ

ಹಾವೇರಿ( ರಾಣೆಬೆನ್ನೂರು): ರಾಜ್ಯದ ಜನರಿಗೆ ಕುಡಿಯಲು ನೀರು ಕೊಡದಿರುವಂತಹ ದರಿದ್ರ ಸರ್ಕಾರ ರಾಜ್ಯದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ರಾಣೆಬೆನ್ನೂರಿನಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ವರ್ಗದವರಿಗೂ ಯೋಜನೆಗಳನ್ನು ಜಾರಿಗೆ ತಂದಿದೆ.

ದೇಶದಲ್ಲಿ 13 ಕೋಟಿಗಿಂತ ಹೆಚ್ಚು ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬಂದಿವೆ. ಇದಕ್ಕೆ ಮಾನದಂಡ ಏನಂದರೆ 12 ಕೋಟಿ ಶೌಚಲಯ, 9 ಕೋಟಿ ಗ್ಯಾಸ್ ಸಂಪರ್ಕ, 4 ಕೋಟಿ ಮನೆಗಳ ನಿರ್ಮಾಣ, ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿದೆ. ಅದನ್ನು ಸಿದ್ದರಾಮಯ್ಯ ತಮ್ಮ ಅಕ್ಕಿ ಎಂದು ಹೇಳಿಕೊಳ್ಳುತ್ತಿದ್ದಾರೆ. ರೈತರಿಗೆ ಕಳೆದ ನಾಲ್ಕು ವರ್ಷದಲ್ಲಿ 60 ಲಕ್ಷ ರೈತರಿಗೆ 14000 ಕೋಟಿ ರೂ. ನೇರವಾಗಿ ಅವರ ಅಕೌಂಟ್ ಗೆ ಬಂದಿದೆ ಎಂದರು.

ಸ್ತ್ರೀ ಶಕ್ತಿ ಸಂಘಕ್ಕೆ ನೇರವಾಗಿ ಒಂದು ಲಕ್ಷ ರೂ. ಅವರ ಅಕೌಂಟ್ ಗೆ ಬಂದಿದೆ. ಅಲ್ಪ ಸಂಖ್ಯಾತ ಮಹಿಳೆಯರಿಗೆ ತ್ರಿಬಲ್ ತಲಾಖ್ ಎನ್ನುವ ಅನಿಷ್ಠವನ್ನು ತೆಗೆದು ಹಾಕುವ ಮೂಲಕ ಅವರಿಗೆ ಗೌರವ ಸಲ್ಲುವಂತೆ ಮಾಡಿದ್ದಾರೆ. ಮಹಿಳೆಯರಿಗೆ ಮುಂದಿನ ಸಂಸತ್ತು ಚುನಾವಣೆಯಲ್ಲಿ ಶೇ 33% ಮೀಸಲಾತಿ ನೀಡಿದ್ದಾರೆ. ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 60 ಲಕ್ಷ ಜನರು ಲಾಭ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಆದರೆ, ಇನ್ನೊಂದೆಡೆ ಸುಳ್ಳು ಭರವಸೆ ನೀಡಿ ರಾಜ್ಯ ಸರ್ಕಾರ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದಾರೆ. ನರೇಂದ್ರ‌ಮೋದಿಯವರ ಐದು ಕೆಜಿ ಅಕ್ಕಿ ಬಿಟ್ಟರೆ ಬೇರೆ ಅಕ್ಕಿ ಇಲ್ಲ. ಎಲ್ಲರಿಗೂ 200 ಯುನಿಟ್ ವಿದ್ಯುತ್ ಫ್ತೀ ಅಂತ ಹೇಳಿದ್ದಾರೆ. ಆದರೆ, ಯಾರಿಗೂ 30 ಯುನಿಟ್ ಗಿಂತ ಹೆಚ್ಚು ವಿದ್ಯುತ್ ನೀಡಿಲ್ಲ. ಬಸ್ ನಲ್ಲಿ ವಿದ್ಯಾರ್ಥಿಗಳಿಗೆ ಹತ್ತಲು ಅವಕಾಶ ಇಲ್ಲ. ನಾವು ಕೊಡುತ್ತಿದ್ದ ವಿದ್ಯಾನಿಧಿ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.

ದರಿದ್ರ ಸರ್ಕಾರ

ರಾಜ್ಯದಲ್ಲಿ ಇಷ್ಟು ದೊಡ್ಡ ಬರ ಬಂದಿದೆ. ಜನರಿಗೆ ಕುಡಿಯುವ ನೀರು ಕೊಡಲಾರದಷ್ಟು ದರಿದ್ರ ಸರ್ಕಾರ ಇದು. ಇವರ ಖಜಾನೆ ಖಾಲಿ ಇದೆ. ಭಾಷಣದಲ್ಲಿ ಸರ್ಕಾರದ ಖಜಾನೆ ತುಂಬಿದೆ. ಸಿದ್ದರಾಮಯ್ಯ ಒಂದು ಲಕ್ಷ ಕೋಟಿ ಸಾಲ ಮಾಡಿದ್ದಾರೆ‌. ಅದನ್ನು ರಾಜ್ಯದ ಜನರು ತೀರಿಸಬೇಕು. ಇದೊಂದು ದರಿದ್ರ ಸರ್ಕಾರ ಬಂದಿದೆ ಎಂದು ಜನರು ಶಾಪ ಹಾಕುತ್ತಿದ್ದಾರೆ ಎಂದರು.

ಪ್ರಧಾನಮಂತ್ರಿ ನರೇದ್ರ ಮೋದಿಯವರು ಅಭಿವೃದ್ಧಿಯನ್ನು ಶಿಖರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇನ್ನೊಂದೆಡೆ ರಾಜ್ಯ ಸರ್ಕಾರ ಅಭಿವೃದ್ಧಿ ಯನ್ನು ಪಾತಾಳಕ್ಕೆ ತಗೆದುಕೊಂಡು ಹೋಗಿದೆ ಎಂದು ಆರೋಪಿಸಿದರು.

ನನಗೆ ರಾಣೆಬೆನ್ನೂರಿನ ಜೊತೆಗೆ ನಂಟಿದೆ. 1983 ರಲ್ಲಿ ಇಲ್ಲಿ ಚುನಾವಣೆ ಮಾಡಿದ್ದೆ. ತುಂಗಾ ಮೇಲ್ದಂಡೆ ಯೋಜನೆಯಿಂದ ಹಾವೇರಿ, ರಾಣೆಬೆನ್ನೂರು, ದಾವಣಗೆರೆಗೆ ನೀರು ಕೊಡುತ್ತೇನೆ ಎಂದು ಹೇಳಿದ್ದೆ. ಆಗ ಹಿರಿಯ ನೀರಾವರಿ ಹೋರಾಟಗಾರ ಬನ್ನಿಕೊಪ್ಪ ಅವರು ಯೋಜನೆ ಸಾಧ್ಯ ಇಲ್ಲ ಅಂತ ಹೇಳಿದರು. ವಾಸ್ತವ ಹಾಗೇ ಇತ್ತು. ಬಹಳ ಆಳದಿಂದ ನೀರು ಎತ್ತಬೇಕಿತ್ತು. ನಾನು ನೀರಾವರಿ ಸಚಿವನಾಗಿ ಒಂದು ಲಕ್ಷ ಎಕರೆ ಜಮೀನಿಗೆ ಹಾವೇರಿ ಜಿಲ್ಲೆಯಲ್ಲಿ ನೀರಾವರಿಯಾಗಿದೆ ಎಂದರು.

ನಾನು ಮಾಡಿರುವ ಕೆಲಸಕ್ಕಿಂತ ಮಾಡುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಬರುವ ದಿನಗಳಲ್ಲಿ ಹಾವೇರಿ ಗದಗ ಜಿಲ್ಲೆ ಗಳಿಗೆ ಕೇಂದ್ರದಿಂದ ಬರುವ ಯೋಜನೆಗಳನ್ನು ತಂದು ದೊಡ್ಡ ಪ್ರಮಾಣದ ಬದಲಾವಣೆ ಮಾಡುತ್ತೇನೆ. ರಾಣೆಬೆನ್ನೂರನ್ನು ಉತ್ತರ ಕರ್ನಾಟಕದ ದೊಡ್ಡ ವಾಣಿಜ್ಯ ನಗರವನ್ನಾಗಿ ಮಾಡುತ್ತೇನೆ ಎಂದು ಹೇಳಿದರು.

ರಾಣೆಬೆನ್ನೂರು ತಾಲೂಕಿನಲ್ಲಿ ದೊಡ್ಡ ಬೃಹತ್ ಕೈಗಾರಿಕೆ ಯೋಜನೆ ತರಲು ಅವಕಾಶ ಇದೆ. ರಾಣೆಬೆನ್ನೂರು ತಾಲೂಕಿನ ಋಣ ಬಹಳಷ್ಟಿದೆ. ದೊಡ್ಡ ಪ್ರಮಾಣದಲ್ಲಿ ಕಮಲಕ್ಕೆ ಮತ ಹಾಕಿ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT