ಶನಿವಾರ, ಅಕ್ಟೋಬರ್ 23, 2021
25 °C

‘ಸಂಘದಲ್ಲಿ ನಂಬಿಕೆಯೇ ವಹಿವಾಟಿನ ಬುನಾದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಬ್ಯಾಂಕು ಅಥವಾ ಯಾವುದೇ ಸಂಸ್ಥೆಗಳಲ್ಲಿ ಸಾರ್ವಜನಿಕ ಆರ್ಥಿಕ ವಹಿವಾಟು ವ್ಯಾಪಾರಿ ಮನೋಭಾವದಿಂದ ಕೂಡಿರುತ್ತದೆ. ಆದರೆ ಕ.ವಿ.ಪ್ರ.ನಿ.ನಿ ಮತ್ತು ಹು.ವಿ.ಸ.ಕಂ.ನಿ ನೌಕರರ ಸಹಕಾರ ಸಂಘದಲ್ಲಿ ನಂಬಿಕೆಯೇ ವಹಿವಾಟಿನ ಬುನಾದಿ ಆಗಿರುತ್ತದೆ. ನೌಕರರ ಹಿತಾಸಕ್ತಿ ಕಾಪಾಡುವದೇ ಸಹಕಾರಿ ತತ್ವದ ಮೂಲ ಸಂದೇಶವಾಗಬೇಕು’ ಎಂದು ಹಾವೇರಿ ವೃತ್ತದ ಪ್ರಭಾರ ಅಧೀಕ್ಷಕ ಎಂಜಿನಿಯರ್‌ ಎ.ಪಿ. ಫಣಿರಾಜ ಗುಪ್ತಾ ತಿಳಿಸಿದರು. 

ಇಲ್ಲಿಯ ಕೆ.ಪಿ.ಟಿ.ಸಿ.ಎಲ್ ಸಮುದಾಯ ಭವನದಲ್ಲಿ ಶನಿವಾರ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಮತ್ತು ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯ ನೌಕರರ ಸಹಕಾರ ಸಂಘದ 43ನೇ ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಂಘದ ಅಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ‘ಸಹಕಾರಿ ಸಂಘದಲ್ಲಿ ಲಾಭ ಮುಖ್ಯವಲ್ಲ, ಎಲ್ಲ ಸದಸ್ಯರಿಗೆ ಅದರ ಲಾಭ ತಲುಪಬೇಕು. ಸದಸ್ಯರ ಆರ್ಥಿಕ ಅಭಿವೃದ್ಧಿಯೇ ಮುಖ್ಯ. ಸಾಲಗಾರರಿಗೆ ಸಾಕ್ಷಿ ಹಾಕುವಾಗ ಪ್ರತಿ ಸದಸ್ಯ ಎಚ್ಚರಿಕೆಯಿಂದ ಅವನ ಪೂರ್ವಾಪರ ತಿಳಿದುಕೊಂಡು ಸಹಿ ಹಾಕಬೇಕು’ ಎಂದು ಸಲಹೆ ನೀಡಿದರು.

ವೈ.ಎನ್. ನಿಟ್ಟೂರ, ಮಹಮದ್‌ ಅಮಾನುಲ್ಲಾ, ಎಚ್.ಎಸ್.ಬಸವರಾಜಯ್ಯ, ಎ.ಕೆ.ಯಮನೂರ, ಪುಷ್ಪಾ ಹೆಬ್ಬಾಳ, ಸಿ.ಎನ್.ಬಡ್ನಿ, ಎಮ್.ಎಸ್.ಕುಮ್ಮೂರ ಎಸ್.ಎಸ್. ಜಿಂಗಾಡೆ, ಸತೀಶ ಕುಲಕರ್ಣಿ ಮಾತನಾಡಿದರು.

ಸನ್ಮಾನ: ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸಾದ 63 ನೌಕರರ ಮಕ್ಕಳಿಗೆ ಗೌರವಧನ ಮತ್ತು ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಲಾಯಿತು. 

ಸಹಕಾರಿ ಪತ್ತಿನ ಕಾರ್ಯದರ್ಶಿ ವರದಿ, ಲಾಭ ಹಾನಿ ಪತ್ರಿಕೆ, ಲಾಭ ಹಾನಿ ವಿಂಗಡಣೆ, ಮುಂಗಡ ಪತ್ರ ಮುಂತಾದವುಗಳನ್ನು ಸಂಘದ ನಿರ್ದೇಶಕರಾದ ಗಣೇಶ ಎಸ್. ಬಿ, ಬಸವರಾಜ ಕೋಟಿ, ಎಸ್.ಎಂ.ಶೆಟ್ಟರ, ಜೆ.ಎಲ್. ಕಮತದವರು ಮಂಡಿಸಿದರು. ಸಂಘದ ಕಾರ್ಯದರ್ಶಿ ಬಸವರಾಜ ಕೋಟಿ ಸ್ವಾಗತಿಸಿದರು. ಎ.ಕೆ.ಯಮನೂರ ನಡೆಸಿದರು. ಕೆ.ಎನ್.ಅಗಡಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.