ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೂರ ಸಕ್ಕರೆ ಕಾರ್ಖಾನೆ: ಅಧಿಕಾರಿಗಳನ್ನು ಕೂಡಿಹಾಕಿದ ಕಾರ್ಮಿಕರು

ಸಂಗೂರ ಸಕ್ಕರೆ ಕಾರ್ಖಾನೆ: ‘ಅರಿಯರ್ಸ್‌’ ನೀಡಲು ಆಗ್ರಹ
Last Updated 22 ಜನವರಿ 2021, 16:25 IST
ಅಕ್ಷರ ಗಾತ್ರ

ಹಾವೇರಿ: ‘ಅರಿಯರ್ಸ್‌’ ಅನ್ನು ನೀಡದ ಕಾರಣಕ್ಕೆತಾಲ್ಲೂಕಿನ ಸಂಗೂರು ಗ್ರಾಮದ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯಸ್ವಯಂ ನಿವೃತ್ತಿ ಪಡೆದ ಕಾರ್ಮಿಕರು ಶುಕ್ರವಾರ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಸದಸ್ಯರನ್ನು ಕೂಡಿಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ತಮಗೆ ಬರಬೇಕಾದ ಬಾಕಿ ವೇತನವನ್ನು ಕೊಡಿ ಎಂದು ಆಗ್ರಹಿಸಿದ ವೇಳೆ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆಯಿತು.

ಸ್ವಯಂ ನಿವೃತ್ತಿ ಪಡೆದಿದ್ದ ಕಾರ್ಮಿಕರು ಹಲವಾರು ವರ್ಷಗಳಿಂದ ಬರಬೇಕಿದ್ದ ವೇತನ ನೀಡುವಂತೆ ಆಗ್ರಹಿಸಿದರೂ ಸಹ ಬಾಕಿ ವೇತನ ನೀಡದಸಂಗೂರು ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ನಾಗಪ್ಪ ಕುಮ್ಮೂರು, ಅಧ್ಯಕ್ಷ ಗುರುನಾಥ್ ದೇಶಪಾಂಡೆ ಅವರನ್ನು ಕೂಡಿ ಹಾಕಿ ಕಚೇರಿಗೆ ಬೀಗ ಜಡಿದರು.

ಈ ವೇಳೆ ಅಧಿಕಾರಿ ಹಾಗೂ ಆಡಳಿತ ಮಂಡಳಿಯವರು ಬಾಕಿ ವೇತನದ ಚೆಕ್‌ ಕೊಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾರ್ಮಿಕರು ಪ್ರತಿಭಟನೆಯನ್ನು ಕೈಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT