ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಾಲು ಮರದ ತಿಮ್ಮಕ್ಕನ ಆದರ್ಶ ಪಾಲಿಸಿ’

Published 5 ಜೂನ್ 2024, 15:04 IST
Last Updated 5 ಜೂನ್ 2024, 15:04 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಪ್ರಕೃತಿ ಸಂರಕ್ಷಿಸಿದರೆ ನಮ್ಮನ್ನು ಸಂರಕ್ಷಿಸುತ್ತದೆ. ಪ್ರತಿಯೊಬ್ಬರೂ ಸಾಲುಮರದ ತಿಮ್ಮಕ್ಕನ ಆದರ್ಶವಾಗಿಟ್ಟುಕೊಂಡು ಪ್ರತಿ ವಿದ್ಯಾರ್ಥಿಗಳು ಒಂದೊಂದು ಮರ ನೆಟ್ಟು ಪೋಷಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಕುಬೇರಪ್ಪ ಗೋಣಿಮಠ ಹೇಳಿದರು.

ತಾಲ್ಲೂಕಿನ ಸುಣಕಲ್ಲಬಿದರಿ ಗ್ರಾಮದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಇಕೋ ಕ್ಲಬ್ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಗೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಉಪನ್ಯಾಸಕ ಎಚ್. ಶಿವಾನಂದ, ರವಿ ಕೆ.ಎಸ್, ಶಿವಮೂರ್ತಯ್ಯ ಎಚ್.ಎಂ, ಬಸವಣ್ಣೆಪ್ಪ ನೋಟದ, ಸುನಿತಾ ಕುಡುಪಲಿ, ಮಲ್ಲೇಶ ಸಿ. ಹೂರಗಿ, ಚಂದ್ರಶೇಖರ ಎಚ್.ಎಂ., ಪ್ರಕಾಶ ಸಿ., ಜೈಪ್ರಕಾಶ, ಸಂತೋಷ ಅಂಗಡಿ, ಪೂರ್ಣಿಮಾ ಮಾಕನೂರು, ಕವಿತಾ, ಎಸ್.ಎಂ. ಮಕಾಂದಾರ, ಪ್ರವೀಣಕುಮಾರ ಕೆ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT