ಹಿರೇಕೆರೂರ: ತಾಲ್ಲೂಕಿನ ಸಾತೇನಹಳ್ಳಿ ಗ್ರಾಮದ ಶಾಂತೇಶ (ಮಾರುತಿ) ದೇವರ ಹೆಸರಿನಲ್ಲಿ ಸಂತಾನ ಭಾಗ್ಯಕ್ಕೆ ನೀಡುವ ಔಷಧಿ ಮತ್ತು ಆಶೀರ್ವಾದ ಕಾಯಿ ಪಡೆಯಲು ಗುರುವಾರ ರಾಜ್ಯದ ವಿವಿಧ ಕಡೆಗಳಿಂದ ಸಾವಿ ರಾರು ಸಂತಾನ ರಹಿತ ಮಾತೆಯರು ಆಗಮಿಸಿದ್ದರು.

ವಿಜಯ ದಶಮಿಯಂದು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಆತನ ಹೆಸರಿನಲ್ಲಿ ನೀಡುವ ಆಶೀರ್ವಾದ ಕಾಯಿ ಮತ್ತು ಬಾಳೆ ಹಣ್ಣಿನಲ್ಲಿ ನೀಡುವ ಔಷಧಿ ಯನ್ನು ಸೇವಿಸಿದರೆ ಸಂತಾನ ರಹಿತರು ಸಂತಾನ ಭಾಗ್ಯ ಪಡೆಯುವುದು ಖಂಡಿತ ಎಂಬ ನಂಬಿಕೆ ಇದೆ. ಕಾರಣ ವಿವಾಹವಾಗಿ ಅನೇಕ ವರ್ಷ ಕಳೆದರೂ ದೊರೆಯದ ಸಂತಾನ ಫಲಕ್ಕಾಗಿ ಎಲ್ಲ ಜಾತಿ, ಧರ್ಮದ ಮಹಿಳೆಯರು ಪಾಲ್ಗೊಳ್ಳುತ್ತಾರೆ.

ಇಲ್ಲಿನ ಪ್ರಸಾದದಿಂದ ಮಕ್ಕಳಾದ ದಂಪತಿಗಳು ತಮ್ಮ ಸಂತಾನದೊಂದಿಗೆ ಆಗಮಿಸಿ ಶಾಂತೇಶ ಸ್ವಾಮಿಗೆ ಪೂಜೆ ಸಲ್ಲಿಸುತ್ತಿರುವುದು ಸಾಮಾನ್ಯವಾಗಿತ್ತು.

ಬೆಳಿಗ್ಗೆ ಶಾಂತೇಶನಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ ನಡೆದು, ಮಧ್ಯಾಹ್ನ ಆಶೀರ್ವಾದ ಕಾಯಿ ಹಾಗೂ ಔಷಧಿ ವಿತರಣೆ ಆರಂಭವಾ ಗುತ್ತಿದ್ದಂತೆ ಭಾರಿ ಜನದಟ್ಟಣಿ ಕಂಡು ಬಂದಿತು. ರಾಜ್ಯ ವಿವಿಧ ಕಡೆಗಳಿಂದ ಸಾವಿರಾರು ಜನ ಆಗಮಿಸಿದ್ದರು. ಗರ್ಭ ಧರಿಸದ ಜಾನುವಾರುಗಳಿಗೆ ಸಹ ಇಲ್ಲಿ ಔಷಧಿ ನೀಡುತ್ತಿರುವುದರಿಂದ ಅನೇಕ ಜಾನುವಾರು ಮಾಲೀಕರು ಸಹ ರಾಸುಗಳೊಂದಿಗೆ ಆಗಮಿಸಿದ್ದರು.

ದೇವಸ್ಥಾನ ಟ್ರಸ್ಟ್ ಮುಖಂಡರು, ಅರ್ಚಕರು ಹಾಗೂ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಶ್ರಮಿಸ ಬೇಕಾಯಿತು.

ಸಂದರ್ಶನದಲ್ಲಿ ಆಯ್ಕೆ
ರಾಣೆಬೆನ್ನೂರು: ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲ ಯದಲ್ಲಿ ಈಚೆಗೆ ಬೆಂಗಳೂರಿನ ಇನ್‌ಪೋಸಿಸ್ ಕಂಪನಿ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಬಿಇ ಅಂತಿಮ ವರ್ಷದ 22 ವಿದ್ಯಾರ್ಥಿಗಳು ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯ ಡಾ.ಎಸ್.ಎನ್. ಶಿವಲಿಂಗಪ್ಪ ಹಾಗೂ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಪ್ರೊ.ಡಿ. ಎಸ್. ವಿಶ್ವನಾಥ ತಿಳಿಸಿದ್ದಾರೆ.

ಇಂದು ಮಹಾಸಮ್ಮೇಳನ
ರಾಣೆಬೆನ್ನೂರು: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ವಿಭಾಗೀಯ ಒಕ್ಕೂಟ, ಧಾರವಾಡ ಮತ್ತು ಪ್ರತಿನಿಧಿ ಗಳ ಶೇಯೋಭಿವೃದ್ದಿ ಸಂಘ, ಭಾರ ತೀಯ ಜೀವವಿಮಾ ನಿಗಮ ರಾಣೆಬೆನ್ನೂರು ಇವರ ಆಶ್ರಯದಲ್ಲಿ ಜೀವ ವಿಮಾ ಪ್ರತಿನಿಧಿಗಳ ಮಹಾ ಸಮ್ಮೇಳನ ಮತ್ತು ಶೈಕ್ಷಣಿಕ ತರಬೇತಿ ಶಿಬಿರ ವಿನಾಯಕ ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಅ.8 ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ.

ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ವಿಭಾಗೀಯ ಒಕ್ಕೂಟದ ಅಧ್ಯಕ್ಷ ಎಸ್.ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಸಂಘದ ಅಧ್ಯಕ್ಷ ಎಂ.ಆರ್.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.