ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನ ಜಗತ್ತಿಗೆ ಪರಿಚಯಿಸಿದ ಯುಗ 12ನೇ ಶತಮಾನ’

Published 9 ಮೇ 2024, 8:04 IST
Last Updated 9 ಮೇ 2024, 8:04 IST
ಅಕ್ಷರ ಗಾತ್ರ

ಕಲಬುರಗಿ: 12ನೇ ಶತಮಾನವು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬಗ್ಗೆ ಜಗತ್ತಿಗೆ ಪರಿಚಯಿಸಿದ ಅಪರೂಪದ ಶತಮಾನವಾಗಿದೆ ಎಂದು ಅರ್ಥಶಾಸ್ತ್ರದ ಉಪನ್ಯಾಸಕಿ ಪ್ರೊ. ನೀಲಮ್ಮ ಪಾಟೀಲ ಹೆಬ್ಬಾಳ ಹೇಳಿದರು.

ಇಲ್ಲಿನ ಭವಾನಿ ನಗರದ ಬಬಲಾದ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 209ನೇ ಶಿವಾನುಭವ ಗೋಷ್ಠಿಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ಬಸವಣ್ಣನವರು ಒಂದು ಜಾತಿ ಅಥವಾ ಜನಾಂಗಕ್ಕೆ ಸೀಮಿತರಾಗಿಲ್ಲ. ಅವರು ಇಡೀ ಮಾನವ ಕುಲಕ್ಕೆ ಒಳಿತು ಬಯಸಿ ಉದ್ಧಾರ ಮಾಡಿದ ಮಾನವ ಧರ್ಮದ ಪ್ರತಿಪಾದಕರಾಗಿದ್ದಾರೆ. ಶರಣರ ಜಯಂತಿಗಳ ಆಚರಣೆಯೊಂದಿಗೆ ಅವರ ವಿಚಾರಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾಗಿಸಬೇಕು. ಅಂದಾಗ ಮಾತ್ರ ಮಕ್ಕಳಿಗೆ ನಾವು ಆದರ್ಶರಾಗುತ್ತೇವೆ’ ಎಂದರು.

ಎ.ಕೆ.ಆರ್. ದೇವಿ ಪಿಯು ಕಾಲೇಜಿನ ಆಡಳಿತ ಅಧಿಕಾರಿ ವಿದ್ಯಾಸಾಗರ ದೇಶಮುಖ ಮುಖ್ಯ ಅತಿಥಿಯಾಗಿದ್ದರು. ಶರಣು ಪೊಲೀಸ್‌ ಪಾಟೀಲ, ರೇವಣಸಿದ್ದಯ್ಯ ಶಾಸ್ತ್ರಿ, ಗುರುರಾಜ ಹಸರಗುಂಡಗಿ, ಸಿದ್ದಣ್ಣ ವಾಡಿ, ನಿರ್ಮಲಾ ಹಿರೇಮಠ, ಶಿವಶರಣಪ್ಪ ಪಾಟೀಲ, ನಾಗೇಂದ್ರ ಪಾಟೀಲ ಹೆಬ್ಬಾಳ, ಶಿವಕುಮಾರ ಸಾವಳಗಿ, ಕಿರಣ ಗೊಡಬೆಲೆ, ಅಮರೇಶ್ವರಿ ಹೂಗಾರ ಪಾಲ್ಗೊಂಡಿದ್ದರು.

ವಕೀಲ ಹಣಮಂತರಾಯ ಅಟ್ಟೂರ ಸ್ವಾಗತಿಸಿದರು. ಸಂಗಮೇಶ ಹೂಗಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT