ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯದ 20 ಎಕರೆ ಜಾಗದಲ್ಲಿ ಕ್ರಿಕೆಟ್ ಮೈದಾನ

ಕೆಎಸ್‌ಸಿಎ ರಾಯಚೂರು ವಲಯದ ಅಧ್ಯಕ್ಷ ರಾಜಶೇಖರ ಪಾಟೀಲ
Last Updated 8 ನವೆಂಬರ್ 2021, 4:25 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಗುಲಬರ್ಗಾ ವಿಶ್ವವಿದ್ಯಾಲಯದ 50 ಎಕರೆ ಜಾಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕ್ರೀಡಾ ಹಾಗೂ ವಾಣಿಜ್ಯ ಸಂಕೀರ್ಣದ ಪೈಕಿ 20 ಎಕರೆಯಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣವಾಗಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ರಾಯಚೂರು ವಲಯದ ಅಧ್ಯಕ್ಷ ಡಾ. ರಾಜಶೇಖರ ಪಾಟೀಲ ಕುಳಗೇರಿ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಆಸಕ್ತಿ ವಹಿಸಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಮಾಡಲು ಮುಂದಾಗಿದ್ದಾರೆ. ಅವರ ಈ ಕ್ರಮವನ್ನು ಕೆಎಸ್‌ಸಿಎ ಸ್ವಾಗತಿಸುತ್ತದೆ. ಇದರಿಂದಾಗಿ ಈ ಭಾಗದ ಕ್ರಿಕೆಟ್‌ ಪಟುಗಳಿಗೆ ಸಾಕಷ್ಟು ಪ್ರೋತ್ಸಾಹ ದೊರೆತಂತಾಗುತ್ತದೆ’ ಎಂದರು.

‘20 ಎಕರೆ ಭೂಮಿ ಹಸ್ತಾಂತರ ಕುರಿತಾದ ಕಡತವು ನೆಹರು ಯುವ ಕೇಂದ್ರ ಹಾಗೂ ಕಲಬುರಗಿ ತಹಶೀಲ್ದಾರ್ ಬಳಿ ಇದೆ. ಹಸ್ತಾಂತರವಾಗುತ್ತಿದ್ದಂತೆಯೇ ನಿರ್ಮಾಣ ಕಾರ್ಯ ನಡೆಯಲಿದೆ‘ ಎಂದು ಹೇಳಿದರು.

ರಾಷ್ಟ್ರೀಯ ಕ್ರಿಕೆಟ್ ಟೂರ್ನಿ: ಮುಂದಿನ ವರ್ಷದ ಜೂನ್‌ ತಿಂಗಳಲ್ಲಿ ಬಿಸಿಸಿಐನಿಂದ ಮಾನ್ಯತೆ ಪಡೆದ ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಯನ್ನು ಕಲಬುರಗಿಯ ಕೆಬಿಎನ್‌ ಟರ್ಫ್‌ ಮೈದಾನ ಹಾಗೂ ರಾಯಚೂರಿನ ಕೆಎಸ್‌ಸಿಐ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಮೈದಾನವನ್ನು ಸಜ್ಜುಗೊಳಿಸಲಾಗುವುದು. ಕೆಬಿಎನ್‌ನವರು ₹ 1 ಕೋಟಿ ವೆಚ್ಚದಲ್ಲಿ ಮೈದಾನವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ರಾಯಚೂರಿನ ಮೈದಾನದ ಅಭಿವೃದ್ಧಿಗೆ ಕೆಎಸ್‌ಸಿಎ ₹ 20 ಲಕ್ಷ ಬಿಡುಗಡೆ ಮಾಡಿದೆ‘ ಎಂದರು.

ಡಿಸೆಂಬರ್‌ ಒಳಗೆ ಮೊದಲ ಹಂತದ ಟೂರ್ನಿಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಬೀದರ್‌ನಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ 20 ಎಕರೆ ಜಾಗ ನೀಡಲು ದಾನಿಗಳು ಮುಂದೆ ಬಂದಿದ್ದಾರೆ. ವಿಜಯಪುರದಲ್ಲಿ ಭೂತನಾಳ ಬಳಿ ಜಮೀನು ನೀಡುವಂತೆ ಕೆಎಸ್‌ಸಿಎ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದೆ ಎಂದರು.

ಕ್ರಿಕೆಟ್ ಕೋಚ್ ಬಸವರಾಜ ಕೋಸಗಿ, ಸುಂದರ ಕುಲಕರ್ಣಿ, ಪಾಂಡುರಂಗ ದೇಶಮುಖ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT